Nordische Technologies, ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್‌ ಆಗುವ ಬ್ಯಾಟರಿ ತಂತ್ರಜ್ಞಾನ ಲೋಕಾರ್ಪಣೆ

NORDISCHE TECHNOLOGIES: ಬೆಂಗಳೂರು ಸ್ಟಾರ್ಟ್‌ ಅಪ್‌ ನಿಂದ ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್‌ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಬ್ಯಾಟರಿ ತಂತ್ರಜ್ಞಾನ ಸಂಶೋಧನೆ.

Online News Today Team
  • ಬೆಂಗಳೂರು ಸ್ಟಾರ್ಟ್‌ ಅಪ್‌ ನಿಂದ ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್‌ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಬ್ಯಾಟರಿ ತಂತ್ರಜ್ಞಾನ ಸಂಶೋಧನೆ.
  • ಬ್ಯಾಟರಿ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದ ಹೆಗ್ಗಳಿಕೆ ಪಾತ್ರವಾದ ನೋರ್ಡಿಶ್ಚೇ ಟೆಕ್ನಾಲಜೀಸ್‌
  • ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್‌ ಆಗುವ ಹೊಸ ಬ್ಯಾಟರಿ ತಂತ್ರಜ್ಞಾನದ ಲೋಕಾರ್ಪಣೆ

ಬೆಂಗಳೂರು (Bengaluru), ಮೇ 27: ಬೆಂಗಳೂರಿನ ಸ್ಟಾರ್ಟ್‌ ಅಪ್‌ ನೋರ್ಡಿಶ್ಚೇ ಟೆಕ್ನಾಲಜೀಸ್‌ (NORDISCHE TECHNOLOGIES) ವಿಶ್ವದಲ್ಲೆ ಅತಿ ವೇಗವಾಗಿ ಚಾರ್ಜ್‌ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ “Aluminum Ion Graphene Pouch Cells” ತಂತ್ರಜ್ಞಾನವನ್ನು ಸಿದ್ದಪಡಿಸಿದೆ. ಲಿಥೀಯಂ ಇಯಾನ್‌ ಸೆಲ್ಸ್‌ ಬ್ಯಾಟರಿಗಿಂತಲೂ 50 ಪಟ್ಟು ಹೆಚ್ಚು ವೇಗದಲ್ಲಿ ಚಾರ್ಜ್‌ ಆಗುವ ಮತ್ತು ಅಷ್ಟೇ ಮಟ್ಟದ ಬ್ಯಾಟರಿ ಸಾಮರ್ಥ್ಯ ಹೊಂದಿರುವ, ನಾನ್‌ ಟಾಕ್ಸಿಕ್‌ ಮತ್ತು ಅಗ್ನಿ ನಿರೋಧಕ ಈ ತಂತ್ರಜ್ಞಾನವನ್ನು ಹೊಂದಿದೆ.

ಬ್ಯಾಟರೀ ಕ್ಷೇತ್ರದಲ್ಲಿನ ಈ ವಿನೂತನ ಹಾಗೂ ಕ್ರಾಂತಿಕಾರಿ ತಂತ್ರಜ್ಞಾನವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮುಖ್ಯಸ್ಥರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಮಾತನಾಡಿ, ಈಗ ಬಹುತೇಕ ಎಲ್ಲಾ ಎಲೆಕ್ಟ್ರಾನಿಕ್‌ ಹಾಗೂ ಇವಿ ವೆಹಿಕಲ್‌ಗಳಲ್ಲಿ ಬಳಸಲಾಗುತ್ತಿರುವ ಲೀಥಿಯಂ ಬ್ಯಾಟರಿ ತಂತ್ರಜ್ಞಾನದಿಂದ ಬಹಳಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ವಾಹನಗಳಲ್ಲಿ ಬಳಸಲಾಗಿರುವ ಬ್ಯಾಟರೀಗಳು ಬೆಂಕಿ ಹತ್ತಿಕೊಳ್ಳುವುದು, ಸರಿಯಾದ ಸಾಮರ್ಥ್ಯತೆ ಹೊಂದದೇ ಇರುವುದು.

ಬೆಂಗಳೂರು ಸ್ಟಾರ್ಟ್‌ ಅಪ್‌ ನಿಂದ ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್‌ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಬ್ಯಾಟರಿ ತಂತ್ರಜ್ಞಾನ ಸಂಶೋಧನೆ.

The Future Non-Lithium Battery Technology for Gadgets & Electric Vehicles - Bangalore News

ಇಂತಹ ಹಲವಾರು ಸಮಸ್ಯೆಗಳಿಗೆ ಪರಿಹಾರವೆಂಬಂತೆ “ಅಲ್ಯೂಮಿನಿಯಂ ಇಯಾನ್‌ ಗ್ರಾಫೇನ್‌ ಪೌಚ್‌ ಸೆಲ್‌” ತಂತ್ರಜ್ಞಾನವನ್ನ ಬೆಂಗಳೂರಿನ ಸ್ಟಾರ್ಟ್‌ ಅಪ್‌ ನೋರ್ಡಿಶ್ಚೇ ಟೆಕ್ನಾಲಜೀಸ್‌ – ಸಿಪಿಟ್‌ (ಸೆಂಟ್ರಲ್‌ ಇನ್ಸಿಟ್ಯೂಟ್‌ ಆಫ್‌ ಪೆಟ್ರೋಕೆಮಿಕಲ್‌ ಎಂಜಿನೀಯರಿಂಗ್‌ & ಟೆಕ್ನಾಲಜಿ) ಯ ಜೊತೆಗೂಡಿ ಸಂಶೋಧಿಸಿದೆ. ರಫ್ತು ಅವಲಂಬಿತ ಲೀಥೀಯಂ ಬ್ಯಾಟರಿ ತಂತ್ರಜ್ಞಾನದಷ್ಟೇ ಸಾಮರ್ಥ್ಯ ಹೊಂದಿರುವ ಈ ತಂತ್ರಜ್ಞಾನ ನಮ್ಮ ದೇಶದ ಆವಿಷ್ಕಾರಗಳಲ್ಲಿ ಬಹಳ ಮಹತ್ವದ್ದು ಎಂದು ಹೇಳಿದರು.

ಬೆಂಗಳೂರಿನ ಸ್ಟಾರ್ಟ್‌ ಅಪ್‌ ನೋರ್ಡಿಶ್ಚೇ ಟೆಕ್ನಾಲಜೀಸ್‌ ನ ಮುಖ್ಯ ತಾಂತ್ರಿಕ ಅಧಿಕಾರಿ ಸಬ್ಯಸಾಚಿ ದಾಸ್‌ ಮಾತನಾಡಿ, ಕಳೆದ 5 ವರ್ಷಗಳಿಂದ ನಮ್ಮ ಸಂಸ್ಥೆ ನಡೆಸಿದ ಸಂಶೋಧನೆಯ ಫಲವಾಗಿ ಈ ವಿನೂತನ ಅಲ್ಯೂಮಿನಿಯಂ-ಗ್ರಾಫೇನ್‌ ಪೌಚ್‌ ಸೆಲ್‌ ಮತ್ತು ಭವಿಷ್ಯದ ಇಲೆಕ್ಟ್ರಿಕಲ್‌ ವೆಹಿಕಲ್‌ ಬ್ಯಾಟರಿ ತಂತ್ರಜ್ಞಾನವನ್ನು ಸಂಶೋಧಿಸಲಾಗಿದೆ.

ಈ ಬ್ಯಾಟರೀಗಳು ಬಹಳಷ್ಟು ಹಗುರ, ವಿಶ್ವದಲ್ಲೇ ಅತಿ ವೇಗವಾಗಿ ಚಾರ್ಜ್‌ ತಂತ್ರಜ್ಞಾನ ಇದಾಗಿದೆ. ಅಲ್ಲದೇ, ಈ ಬ್ಯಾಟರಿ ಕೆಲಸ ಮಾಢುವ ಉಷ್ಣಾಂಶದ ರೇಂಜ್‌ ಬಹಳಷ್ಟಿದ್ದು (-25ಸೆಲ್ಸಿಯಸ್‌ ನಿಂದ 60 ಡಿಗ್ರಿ ಸೆಲ್ಸಿಯಲಸ್) ಬೆಂಕಿ ಹತ್ತಿಕೊಳ್ಳುವುದಿಲ್ಲ.  ಹೆಚ್ಚಿನ ಸಾಮರ್ಥ್ಯ ಹೊಂದಿರುವ ಮತ್ತು 5 ರಿಂದ 7 ವರ್ಷಗಳ ಶೆಲ್ಪ ಲೈಪ್‌ ಹೊಂದಿವೆ. ಅಲ್ಲದೇ ಈ ರಿಚಾರ್ಜೆಬಲ್‌ ಬ್ಯಾಟರೀಗಳನ್ನು 3000 ಸಾವಿರ ಸೈಕಲ್‌ ನಷ್ಟು ಬಳಸಬಹುದಾಗಿದೆ.‌ ಈ ತಂತ್ರಜ್ಞಾವನ್ನು ಎಲೆಕ್ಟ್ರಿಕ್‌ ವೆಹಿಕಲ್‌ಗಳಿಗೂ ಬಳಸಬಹುದಾಗಿದೆ ಎಂದು ಹೇಳಿದರು.

Nordische Technologies

ಅಲ್ಯೂಮಿನಿಯಂ – ಗ್ರಾಫೇನ್‌ ಪೌಚ್‌ ಸೆಲ್‌ ಬ್ಯಾಟರಿ ತಂತ್ರಜ್ಞಾನದ ವಿಶಿಷ್ಟತೆಗಳು:

·       ಹಗುರ ಮತ್ತು ಅತಿವೇಗವಾಗಿ ಚಾರ್ಜ್‌ ಅಗುವ ಸಾಮರ್ಥ್ಯ

·       ಹೈ ಎನರ್ಜಿ ಡೆನ್ಸಿಟಿ >150ವ್ಯಾಟ್‌/ಕೆಜಿ

·       ಕೈಗೆಟಕುವ ದರ

·       ಫ್ಲೇಕ್ಸಿಬಲ್‌ ಸೋರ್ಸ್‌ ಆಫ್‌ ಎನರ್ಜಿ ಸ್ಟೋರೇಜ್‌

·       ಲಾರ್ಜ್‌ ರೇಂಜ್‌ ಆಫ್‌ ಟೆಂಪರೇಚರ್‌ನಲ್ಲಿ ಕಾರ್ಯನಿರ್ವಹಣೆ (From -25C to 60C)

·       5 ರಿಂದ 7 ವರ್ಷಗಳ ಶೆಲ್ಫ್‌ ಲೈಪ್‌

·       ಸುಮಾರು >3000 ಬಾರಿ ರಿಚಾರ್ಜ್‌ ಮಾಡಬಹುದು

·       ಎಕೋ ಫ್ರೇಂಡ್ಲಿ – ನಾನ್‌ ಟಾಕ್ಸಿಕ್‌ ಮತ್ತು ಬೆಂಕಿ ಹತ್ತಿಕೊಳ್ಳದೇ ಇರುವುದು

·       ಹೈ ಟೆನ್ಸಿಲ್‌ ಸ್ಟ್ರೇಂಥ್‌

ಕಾರ್ಯಕ್ರಮದಲ್ಲಿ ಪುದುಚೆರಿ ಪಿಡ್ಬೂಡಿ ಮತ್ತು ಐಟಿ ಸಚಿವ ಕೆ ಲಕ್ಷ್ಮಿನಾರಾಯಣ, ಕರ್ನಾಟಕ ವಿಧಾನಪರಿಷತ್ತ ವಿರೋಧ ಪಕ್ಷದ ಪ್ರಧಾನ ವಿಪ್‌ ಪ್ರಕಾಶ್‌ ಕೆ. ರಾಥೋಡ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

The Future Non-Lithium Battery Technology for Gadgets & Electric Vehicles

English Summary

Introducing the new battery from Nordische Technologies, which is based on Aluminum-Graphene chemistry! This is the world’s fastest charging, non-toxic, non-flammable, and non-lithium non-cobalt battery with a long cycle life, making it the perfect choice for those who care about the environment and want a battery that will last for a long time.

Follow Us on : Google News | Facebook | Twitter | YouTube