9ರಂದು ವೆಂಕಯ್ಯ ನಾಯ್ಡು ಬೆಂಗಳೂರಿಗೆ ಭೇಟಿ

9ರಂದು ವೆಂಕಯ್ಯ ನಾಯ್ಡು ಬೆಂಗಳೂರಿಗೆ ಬರಲಿದ್ದಾರೆ.

ಬೆಂಗಳೂರು (Bengaluru): ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 2 ದಿನಗಳ ಪ್ರವಾಸಕ್ಕಾಗಿ ಇದೇ 9ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. 9ರಂದು ಬೆಳಗ್ಗೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಹವಳ ಹಬ್ಬದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ರಾಜಭವನಕ್ಕೆ ತೆರಳಿ ರಾತ್ರಿ ಅಲ್ಲಿಯೇ ತಂಗುತ್ತಾರೆ.

10ರಂದು ಬೆಳಗ್ಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮುಂದಿನ ತಿಂಗಳು (ಆಗಸ್ಟ್) 6ರಂದು ಚುನಾವಣೆ ನಡೆಯುವುದು ಗಮನಾರ್ಹ.

Venkaiah Naidu will visit Bengaluru on 9th

9ರಂದು ವೆಂಕಯ್ಯ ನಾಯ್ಡು ಬೆಂಗಳೂರಿಗೆ ಭೇಟಿ - Kannada News

Follow us On

FaceBook Google News

Read More News Today