Welcome To Belgaum News

Welcome To Kannada News - Kannadigas Adda

ರಾಜ್ಯದಲ್ಲಿ ಮೋದಿ ಅಲೆ ಎಲ್ಲಿಯೂ ಇಲ್ಲ !

Congress and JDS joint press conference in Belgaum

Kannadanews.today - ಕನ್ನಡಿಗಾಸ್ ಅಡ್ಡ

ಬೆಳಗಾವಿ : ವಾಸ್ಥವ ಸ್ಥಿತಿಯಲ್ಲಿ ಮೋದಿ ಅಲೆ ಎಲ್ಲಿಯೂ ಇಲ್ಲ ಈ ಬಾರಿ ರಾಜ್ಯದ 28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷ ಕನಿಷ್ಠ 19 ರಿಂದ 21 ಸ್ಥಾನ ಗೆಲ್ಲೋದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್ ಹೆಚ್ ಕೋನರೆಡ್ಡಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಧನೆ.ಸಾಲಮನ್ನಾ ಹಾಗೂ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಹಲವು ಜನಪ್ರಿಯ ಯೋಜನೆಗಳು ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲಲು ಅನಕೂಲವಾಗಲಿದೆ ಎಂದು ಕೋನರೆಡ್ಡಿ ಹೇಳಿದರು

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಯಾವುದೇ ಜನಪ್ರಿಯ ಯೋಜನೆಗಳನ್ನು ಜಾರಿಗೆ ತರಲಿಲ್ಲ ಹಾಗೆ ಬೆಳಗಾವಿ ಕ್ಷೇತ್ರದ ಸಂಸದ ಸುರೇಶ ಅಂಗಡಿ ಕಾರವಾರ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರು ಯಾವುದೇ ಅಭಿವೃದ್ಧಿ ಮಾಡಲಿಲ್ಲ, ಮೂರು ಬಾರಿ ಗೆದ್ದರೂ ಎಷ್ಟೋ ಹಳ್ಳಿಗಳಿಗೆ ಇದುವರೆಗೂ ಹೋಗಿಲ್ಲ ಎಂದು ಅಲ್ಲಿಯ ಮತದಾರರು ನಿರಾಶರಾಗಿದ್ದು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದರು.

ಕಳಸಾ ಬಂಡೂರಿಯ ತಮ್ಮ ಅಧಿಕಾರ ಅವಧಿಯಲ್ಲಿ ಮಾತನಾಡದ ಸುರೇಶ ಅಂಗಡಿ ಚುನಾವಣೆಯ ಸಂಧರ್ಭದಲ್ಲಿ ಕಳಸಾ ಬಂಡೂರಿ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಭರವಸೆ ನೀಡುತ್ತಿರುವದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಸುರೇಶ ಅಂಗಡಿ ಅವರಿಗೆ ಚುನಾವಣೆ ಬಂದಾಗ ಮಾತ್ರ ಕಳಸಾ ಬಂಡೂರಿ ನೆನಪಾಗುತ್ತದೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ ಮೇಲೆ ಹಳ್ಳಿ ಹಳ್ಳಿಗಳಲ್ಲಿ ಈ ಬಗ್ಗೆ ರೈತರು ಮೆಚ್ಚುಗೆ ವ್ಯೆಕ್ತ ಪಡಿಸುತ್ತಿದ್ದಾರೆ ಬಿಜೆಪಿ ಅವರು ಕೇವಲ ಎರಡು ಸಾವಿರ ರೂ ರೈತರ ಖಾತೆಗೆ ಜಮಾ ಮಾಡಿ ನಾವು ರೈತರಿಗೆ ನೆರವಾಗಿದ್ದೇವೆ ಎಂದು ದೊಡ್ಡ ಪ್ರಚಾರ ಮಾಡುತ್ತಿದ್ದಾರೆ ಸಿಎಂ ಕುಮಾರಸ್ವಾಮಿ ರಾಜ್ಯದ ರೈತರ 46 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಅನ್ನದಾತನ ಸಂಕಷ್ಟ ದೂರ ಮಾಡಿದ್ದಾರೆ ಎಂದು ಹೇಳಿದರು

ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಸಾಧುನವರ ಮತ್ತು ಪ್ರಕಾಶ ಹುಕ್ಕೇರಿ ಅವರ ಗೆಲುವಿಗೆ ಶ್ರಮಿಸುತ್ತಿದ್ದು ಎರಡೂ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷ ಗೆಲುವು ನಿಶ್ಚಿತವಾಗಿದ್ದು ಚಿಕ್ಕೋಡಿ ಕ್ಷೇತ್ರದಲ್ಲಿ ಕತ್ತಿ ಸಹೋದರರು ಬಂಡಾಯವೆದ್ದಿದ್ದು ಈ ಕ್ಷೇತ್ರದಲ್ಲಿನ ಬಿಜೆಪಿ ಒಡಕು ನಮಗೆ ವರದಾನವಾಗಲಿದೆ ಎಂದು ಕೋನರೆಡ್ಡಿ ಹೇಳಿದರು. ////

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.