ಮುಕುಂದ ಗೋರೆ ಅವರಿಂದ ‘ನಾಟ್ಯಸಂಧ್ಯಾ’ ನಾಟ್ಯಗೀತೆಗಳ ಕಾರ್ಯಕ್ರಮ

ಬೆಳಗಾವಿ : ನಗರದ ‘ಫ್ಯಾನ್ ಕ್ಲಬ್ ಆಫ್ ಓಲ್ಡ್ ಸಾಂಗ್ಸ್’ಯವರು ಇದೇ ದಿ. ೬ ರವಿವಾರದಂದು ಸಾಯಂಕಾರ ೭ ಗಂಟೆಗೆ ಫೇಸ್ ಬುಕ್ ಲೈವ್ ದಲ್ಲಿ ಪಂ. ಮುಕುಂದ ಗೋರೆ ಅವರಿಂದ ಕನ್ನಡ ಹಾಗೂ ಮರಾಠಿ ನಾಟ್ಯಗೀತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಕುಂದ ಗೋರೆಯವರು ಜನಪ್ರಿಯ ಕನ್ನಡ ಮತ್ತು ಮರಾಠಿ ನಾಟ್ಯಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಈ ಕರ‍್ಯಕ್ರಮವು ಫ್ಯಾನ್ ಕ್ಲಬ್ ಆಫ್ ಓಲ್ಡ ಸಾಂಗ್ಸ ಬೆಳಗಾವಿಯಿಂದ ಫೇಸ್ ಬುಕ್ ನೇರ ಪ್ರಸಾರವಿದ್ದು ಆಸಕ್ತರು ಈ ಹಾಡುಗಳನ್ನು ಕೇಳಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಪ್ರಕಟಣೆಯಲಿ ತಿಳಿಸಿದ್ದಾರೆ.

ಕಲಾವಿದರ ಪರಿಚಯ : ಮುಕುಂದ ಗೋರೆಯವರು ೧೧ ಪೆಬ್ರವರಿ ೧೯೫೩ ರಂದು ಜನಿಸಿದರು. ಇವರ ತಂದೆ ಗಣೇಶ ಹರಿ ಗೋರೆಯವರೇ ಇವರ ಸಂಗೀತ ಗುರುಗಳು. ಇವರ ಎಂಟನೇ ವಯಸ್ಸಿನಿಂದಲೇ ಹಾರ್ಮೋನಿಯಮ್, ತಬಲ ನುಡಿಸುವುದನ್ನು ಕಲಿತರು.

ಮುಂದೆ ಸುಮಾರು ಹತ್ತು ವರ್ಷಗಳ ಸತತ ಅಭ್ಯಾಸದಿಂದ ಹಿಂದೂಸ್ತಾನಿ ವಿದ್ವಾಂಸರಾದರು. ಮಹರಾಷ್ಟ್ರದ ಠಾಣೆಯ ವಿನಾಯಕಬುವಾ ಕಾಳೆ, ಬೆಳಗಾವಿಯ ಡಿ. ಸಿ. ತಮನಸ್ಕರ ಹಾಗೂ ಬಾಗಲಕೋಟೆಯ ಬನ್ನೂರ ಮಾಸ್ತರ ಇವರು ಗುರುಗಳು. ಗಾಯನ, ಹಾರ್ಮೋನಿಯಮ್, ಮತ್ತು ತಬಲಾ ವಾದನದಲ್ಲಿ ಪ್ರಾವಿಣ್ಯತೆಯನ್ನು ಪಡೆದಿರುವ ಇವರು ಬಿ.ಎಸ್.ಸಿ ಪದವಿಧರರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತಿಯನ್ನು ಹೊಂದಿದರು.

>> Get Breaking News & Live News Updates in Kannada, Like Us on Facebook, Twitter. Read More Latest Kannada News Live Alerts online at kannadanews.today News Portal.

This website uses cookies to improve your experience. We'll assume you're ok with this, but you can opt-out if you wish. Accept Read More