Welcome To Belgaum News

Welcome To Kannada News - Kannadigas Adda

ಬೆಳಗಾವಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ

achievement of Belgaum Polytechnic Students

Kannadanews.today - ಕನ್ನಡಿಗಾಸ್ ಅಡ್ಡ

ಅಂಗಡಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಬೆಳಗಾವಿ  ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ

ನಗರದ ಅಂಗಡಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೆಳಗಾವಿಯ ಭರತೇಶ ಪಾಲಿಟೆಕ್ನಿಕ್‌ನಲ್ಲಿ ಮಾರ್ಚ್ 19, 2019 ರಂದು ಆಯೋಜಿಸಿದ್ದ “ರಾಷ್ಟ್ರೀಯ ಮಟ್ಟದ ಪ್ರೊಜೆಕ್ಟ್ ಪ್ರದರ್ಶನ” ದಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳಾದ ಋತುರಾಜ ಪಾಟೀಲ, ಪ್ರಸಾದ ತುಡವೇಕರ, ಆದಿತ್ಯ ಕೇದಾರ, ಶುಭಂ ಲೋಹಾರ ಹಾಗೂ ವಿನಾಯಕ ಕಾಕಡೆ ಇವರುಗಳ ತಂಡ “ರಾಕರ್ ಬೋಗಿ” ಪೊಜೆಕ್ಟಗಾಗಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್, ಸಂಸದ ಸುರೇಶ ಅಂಗಡಿ, ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ, ಆಡಳಿತಾಧಿಕಾರಿ ರಾಜು ಜೋಶಿ, ಅಂಗಡಿ ತಾಂತ್ರಿಕ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಡಿಪ್ಲೊಮಾ ಪ್ರಾಚಾರ್ಯ ಪ್ರೊ. ಸದಾನಂದ ದೊಡಮನಿ ಸೇರಿದಂತೆ ಶಿಕ್ಷಕ ವೃಂದ, ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದವರೊಂದಿಗೆ ಆಡಳಿತಾಧಿಕಾರಿ ರಾಜು ಜೋಶಿ, ಡಾ. ಸಂಜಯ ಪೂಜಾರಿ, ಪ್ರೊ. ಸದಾನಂದ ದೊಡಮನಿ, ಪ್ರೊ. ಕೆ.ಎ. ಜೇರೆ, ಪ್ರೊ. ವಿಶ್ವನಾಥ ಪಾಶ್ಚಾಪೂರ ಶುಭಾಷಯ ಕೋರಿ ಫೋಟೋ ಕ್ಲಿಕ್ಕಿಸಿ ಕೊಂಡರು.

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.