Welcome To Kannada News Today : Read Kannada News From kannadanews.today

ರಾಣಿ ಚನ್ನಮ್ಮ ವಿವಿ ಸ್ಥಳಾಂತರ, ಸಂಬಂಧದಪಟ್ಟ ಪತ್ರದಿಂದ ಬಾರಿ ಕೋಲಾಹಲ

ಸಾಮಾಜಿಕ ಜಾಲತಾಣಗಳಲ್ಲಿ ರಾಣಿ ಚನ್ನಮ್ಮ ವಿವಿ ಸ್ಥಳಾಂತರಿಸುವ ವಿಷಯಕ್ಕೆ ಸಂಬಂಧದಪಟ್ಟ ಪತ್ರ ಬಾರಿ ಕೋಲಾಹಲ ಸೃಷ್ಠಿಸಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಹಿರೇ ಬಾಗೇವಾಡಿಗೆ ಸ್ಥಳಾಂತರ ಮಾಡಬೇಕು ಎಂದು ಫೆಬ್ರುವರಿಯಲ್ಲಿ ಸಂಜಯ ಪಾಟೀಲ ಅವರು ಸರ್ಕಾರಕ್ಕೆ ಬರೆದಿರುವ ಮನವಿ ಪತ್ರದಲ್ಲಿ ಬೆಳಗಾವಿಯ ಹಲವು ಶಾಸಕರೊಂದಿಗೆ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಕೂಡಾ ಸಹಿ ಮಾಡಿರುವುದು ರಾಣಿ ಚನ್ನಮ್ಮನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಶಾಸಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಹೇಳಬಹುದು.

Kannada News (Belgaum News)

ಚನ್ನಮ್ಮನ ಕಿತ್ತೂರು : ಕಳೆದೆರಡು ದಿನಗಳಿಂದ ವಾಟ್ಸಾಪ್ ಮತ್ತು ಪೆಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾಣಿ ಚನ್ನಮ್ಮ ವಿವಿ ಸ್ಥಳಾಂತರಿಸುವ ವಿಷಯಕ್ಕೆ ಸಂಬಂಧದಪಟ್ಟ ಪತ್ರ ಬಾರಿ ಕೋಲಾಹಲ ಸೃಷ್ಠಿಸಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಹಿರೇ ಬಾಗೇವಾಡಿಗೆ ಸ್ಥಳಾಂತರ ಮಾಡಬೇಕು ಎಂದು ಫೆಬ್ರುವರಿಯಲ್ಲಿ ಸಂಜಯ ಪಾಟೀಲ ಅವರು ಸರ್ಕಾರಕ್ಕೆ ಬರೆದಿರುವ ಮನವಿ ಪತ್ರದಲ್ಲಿ ಬೆಳಗಾವಿಯ ಹಲವು ಶಾಸಕರೊಂದಿಗೆ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಕೂಡಾ ಸಹಿ ಮಾಡಿರುವುದು ರಾಣಿ ಚನ್ನಮ್ಮನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಶಾಸಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಹೇಳಬಹುದು.

ಕಿತ್ತೂರಿಗೆ ರಾಣಿ ಚನ್ನಮ್ಮ ವಿ ವಿ ಸ್ಥಳಾಂತರ ಮಾಡಬೇಕು ಎಂದು ಕಳೆದ ಸರ್ಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ನೀಡಿರುವ ಶಾಸಕರು ಫೆಬ್ರವರಿಯಲ್ಲಿ ಹಿರೇ ಬಾಗೇವಾಡಿಗೆ ಸ್ಥಳಾಂತರಿಸಬೇಕೆಂದು ಸಂಜಯ ಪಾಟೀಲ ಬರೆದಿರುವ ಪತ್ರದಲ್ಲಿ ಸಹಿ ಮಾಡಿರುವುದು ಹಲವು ಅನುಮಾನಗಳಿಗೆ ಪುಷ್ಠಿ ನೀಡುತ್ತಿದೆ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.

ಇದು ಶಾಸಕರ ಇಚ್ಛಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂಬುದು ಕಿತ್ತೂರು ನಾಡಿನ ಜನತೆಯ ಆರೋಪವಾಗಿದೆ.
ಬೆಳಗಾವಿಯ ಭೂತರಾಮನಹಟ್ಟಿ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ರಾಣಿ ಚನ್ನಮ್ಮ ವಿವಿ ಗೆ ಸರ್ಕಾರದಿಂದ ಜಮೀನು ಮಂಜೂರಾಗದ ಕಾರಣ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸರ್ಕಾರ ಅದೇಶ ನೀಡಿತ್ತು.

ರಾಣಿ ಚನ್ನಮ್ಮನ ನಾಡಾದ ಕಿತ್ತೂರಿಗೆ ವಿ ವಿ ಸ್ಥಳಾಂತರಿಸಬೇಕೆಂದು ಕೂಗೆದ್ದಾಗ ಶಾಸಕ ಮಹಾಂತೇಶ ದೊಡಗೌಡರ ಆಗಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ ದೇವೆಗೌಡ ಅವರಿಗೆ ಕಿತ್ತೂರಿಗೆ ಸ್ಥಳಾಂತರಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದರು. ಪುನಃ ಪೆಬ್ರವರಿ ತಿಂಗಳಲ್ಲಿ ಹಿರೇ ಬಾಗೇವಾಡಿಗೆ ಸ್ಥಳಾಂತರಿಸಬೇಕು ಎಂಬ ಮನವಿ ಪತ್ರದಲ್ಲಿ ಸಹಿ ಮಾಡಿರುವುದು ಶಾಸಕರ ಧ್ವಂದ್ವ ನಿಲುವಿಗೆ ಹಿಡಿದ ಕೈಗನ್ನಡಿಯಾಗಿದೆ.

📢 Kannada News ಸಮಯೋಚಿತ ನವೀಕರಣಗಳಿಗಾಗಿ Facebook | Twitter ಪೇಜ್‌ ಲೈಕ್‌ ಮಾಡಿ, ದಿನದ ಪ್ರಮುಖ ಸುದ್ದಿಗಳಿಗಾಗಿ Kannada News Today ಅಧಿಕೃತ ಕನ್ನಡ ನ್ಯೂಸ್ ವೆಬ್‌ಸೈಟ್ ಭೇಟಿ ನೀಡಿ, ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಪಡೆಯಿರಿ.