ಕೂಲಿ ಕಾರ್ಮಿಕರಿಗೆ ಒಲಿದು ಬಂತು ಅದೃಷ್ಟ! ಇನ್ಮುಂದೆ ಸಿಗಲಿದೆ ತಿಂಗಳಿಗೆ ₹3000 ಮಾಸಿಕ ಪಿಂಚಣಿ

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಕಾರ ಪಿಂಚಣಿ ಸೌಲಭ್ಯ ನೀಡಲು ಮುಂದಾಗುತ್ತಿದ್ದು, ಇದು ಅನೇಕ ಬಡವರ್ಗದ ಜನರಿಗೆ ಬಹಳ ಖುಷಿ ನೀಡುವ ಸುದ್ದಿ ಎನ್ನಬಹುದು.

Bengaluru, Karnataka, India
Edited By: Satish Raj Goravigere

pension : ಕೂಲಿ ಕಾರ್ಮಿಕರು ಎಂದರೆ ಬಹಳ ಕಷ್ಟ ಪಟ್ಟು ನಿತ್ಯ ಹೊಟ್ಟೆ ಪಾಡಿಗಾಗಿ ದುಡಿಯುವ ಒಂದು ವರ್ಗ ಎನ್ನಬಹುದು. ಇಂತಹ ವರ್ಗದವರ ಜನರ ಜೀವನ ಮಟ್ಟ ಸುಧಾರಣೆಗೆ ಸರಕಾರ ಪ್ರಯತ್ನ ಪಡುತ್ತಲೆ ಇದೆ.

ನಮ್ಮ ದೇಶದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಇದ್ದು ಅವರೆಲ್ಲಿ ಬಹುತೇಕರು ಮಧ್ಯಮ ವರ್ಗದ ಬಡ ಕುಟುಂಬದ ಹಿನ್ನೆಲೆ ಹೊಂದಿರುವುದನ್ನು ನಾವು ಕಾಣಬಹುದು.

A monthly pension of 3000 per month will be available from now on

ಮೈ ಕೈ ಶಕ್ತಿ ಇದ್ದಷ್ಟು ದಿನ ಕಷ್ಟ ಪಟ್ಟು ದುಡಿಯುವ ಅನೇಕರು ವಯಸ್ಸಾದಂತೆ ದುಡಿಯಲು ಸಾಧ್ಯವಾಗದೆ ಇತ್ತ ಯಾವುದೆ ಆದಯದ ಮೂಲವು ಇಲ್ಲದೆ ಸಮಸ್ಯೆ ಅನುಭವಿಸುವುದನ್ನು ನಾವು ಕಂಡಿರುತ್ತೇವೆ.

ಈ ಯೋಜನೆಯಲ್ಲಿ ಕೌಶಲ್ಯ ತರಬೇತಿ ಜೊತೆಗೆ ಸಿಗಲಿದೆ ₹8000! ಕೇಂದ್ರದಿಂದ ಸೂಪರ್ ಯೋಜನೆ

ಕಚೇರಿ ಇತರ ಕಡೆಯಲ್ಲಿ ಕೆಲಸ ಮಾಡಿದರೆ ಪಿಂಚಣಿ ಸೌಲಭ್ಯ (Pension) ಇರುತ್ತಿತ್ತು ಆದರೆ ಇಲ್ಲಿ ನಿತ್ಯ ಹೊಟ್ಟೆ ಪಾಡು ಭರಿಸಲೆಂದೆ ದುಡಿಯುವವರಿಗೆ ಯಾರು ತಾನೆ ಪಿಂಚಣಿ ನೀಡುತ್ತಾರೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಕಾರ ಪಿಂಚಣಿ ಸೌಲಭ್ಯ ನೀಡಲು ಮುಂದಾಗುತ್ತಿದ್ದು, ಇದು ಅನೇಕ ಬಡವರ್ಗದ ಜನರಿಗೆ ಬಹಳ ಖುಷಿ ನೀಡುವ ಸುದ್ದಿ ಎನ್ನಬಹುದು.

ಈ ಪಿಂಚಣಿಗೆ ಕೇಂದ್ರ ಸರಕಾರ ಮುನ್ನುಡಿ ಇಟ್ಟಿದ್ದು ಬಡವರ್ಗಕ್ಕೆ ಇದೊಂದು ಮಹತ್ವದ ಯೋಜನೆ ಆಗಲಿದೆ. ಇದರಲ್ಲಿ ತೆರಿಗೆ ಪಾವತಿ ಮಾಡುವವರು ಹಾಗೂ ಮಾಸಿಕ 15,000 ಆದಾಯ ಪಡೆಯುತ್ತಿರುವವರು ಅನರ್ಹರು ಎಂದು ಹೇಳಬಹುದು.

ಪ್ರತಿ ತಿಂಗಳು ಪಿಂಚಣಿ ಗ್ಯಾರೆಂಟಿ

ಅಸಂಘಟಿತ ಕಾರ್ಮಿಕ ವರ್ಗದವರು ಪಿಎಂ ಶ್ರಮಯೋಗಿ ಮನ್ ಧನ್ ಯೋಜನೆಯ ಅಡಿಯಲ್ಲಿಹೂಡಿಕೆ ಮಾಡಬೇಕು ಆ ಬಳಿಕ 60 ವರ್ಷದ ಬಳಿಕ ಪ್ರತೀ ತಿಂಗಳು ಪಿಂಚಣಿ ಗ್ಯಾರೆಂಟಿ ಬರಲಿದೆ ಎನ್ನಬಹುದು. ಅಸಂಘಟಿತ ಕಾರ್ಮಿಕರು ತಮ್ಮ ವಯಸ್ಸಿನ ಆಧಾರದ ಮೇಲೆ ಹೂಡಿಕೆ ಮಾಡಬೇಕಾಗಲಿದೆ.

ಅಂದರೆ 18 ವರ್ಷಕ್ಕೆ ಹೂಡಿಕೆ ಆರಂಭ ಮಾಡಿದರೆ 55ರೂಪಾಯಿ ತಿಂಗಳಿಗೆ ಕಟ್ಟಬೇಕಾಗಿ ಬರಲಿದೆ. ವಯಸ್ಸು ಜಾಸ್ತಿ ಆದಂತೆ ಪಿಂಚಣಿ ಗಾಗಿ ನೀವು ಹೂಡಿಕೆ ಮಾಡುವ ಮೊತ್ತ ಕೂಡ ಹೆಚ್ಚಾಗಲಿದೆ. ಹೀಗೆ 60 ವರ್ಷ ಹಣ ಕಟ್ಟಿದ್ದ ಬಳಿಕ ಮಾಸಿಕ ವಾಗಿ 3000 ಪಿಂಚಣಿ ಹಣ ಬರಲಿದೆ.

ನಿಮ್ಮ ಮಗಳ ಮದುವೆಗೆ ಸಿಗಲಿದೆ ₹60,000! ಕೇಂದ್ರ ಸರ್ಕಾರದ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

Pension Schemeಸರಕಾರದಿಂದಲೂ ಪ್ರೋತ್ಸಾಹ

ನೀವು ಕಟ್ಟಿದ್ದ ಮೊತ್ತದಷ್ಟೆ ಸರಕಾರ ಕೂಡ ಹಣ ಹೂಡಿಕೆ ಮಾಡಲಿದೆ. 18 ವರ್ಷದವರ ಹೂಡಿಕೆಗೆ 55 ರೂಪಾಯಿ ನಮ್ಮ ಕೈಯಿಂದ ಹಾಕಿದರೆ ಸರಕಾರ 55 ರೂಪಾಯಿ ಹಾಕಲಿದೆ ಒಟ್ಟು 110 ರೂಪಾಯಿ ಹೂಡಿಕೆ ಮಾಡಿದಂತಾಗಲಿದೆ. ಅದೆ ರೀತಿ 19 ನೇ ವಯಸ್ಸಿಗೆ 58 ರೂಪಾಯಿ ತಿಂಗಳಿಗೆ ಠೇವಣಿ ಮಾಡಬೇಕು, 20ನೇ ವಯಸ್ಸಿನಲ್ಲಿ ಮಾಡುವುದಾದರೆ 61 ರೂಪಾಯಿ ಮಾಸಿಕ ಕಟ್ಟಬೇಕು.

ವಯಸ್ಸಿನ ಮಿತಿಯನ್ನು ನಾವು ಪರಿಶೀಲಿಸುವುದಾದರೆ 18ರಿಂದ 40 ವರ್ಷದ ಒಳಗೆ ವಯೋಮಿತಿ ಹೊಂದಿದ್ದರೆ ಸಾಕು. ಸಂಘಟಿತ ವಲಯದ ಕಾರ್ಮಿಕರಿಗೆ ಈ ಒಂದು PM ಶ್ರಮಿಕ ಮನ್ ಧನ್ ಸೌಲಭ್ಯ ಸಿಗಲಾರದು. 60 ವರ್ಷದ ತನಕವು ಪ್ರತೀ ತಿಂಗಳು ಮೊತ್ತ ಕಟ್ಟಬೇಕು.

ಕೊಂಚ ತಗ್ಗಿದ್ದ ಚಿನ್ನದ ಬೆಲೆ ಮತ್ತೂಮ್ಮೆ ಏರಿಕೆ, ವೀಕೆಂಡ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಡೀಟೇಲ್ಸ್

ಒಂದು ವೇಳೆ ನೀವು ಠೇವಣಿ ಇಟ್ಟ ಮೊತ್ತ ವಾಪಾಸ್ಸು ಪಡೆಯಬೇಕು ಎಂದು ನೀವು ಬಯಸಿದರೆ ಆಗ ಸರಕಾರದ ಮೊತ್ತ ಹೊರತು ಪಡಿಸಿ ನಿಮ್ಮಿಂದ ಸಂಗ್ರಹ ಆದ ಮೊತ್ತಕ್ಕೆ ಮಾತ್ರ ಬಡ್ಡಿದರ ಸೇರಿ ಹಣ ವಾಪಾಸ್ಸು ಪಡೆಯಬಹುದು.

A monthly pension of 3000 per month will be available from now on