ಇಂತಹ ರೈತರ ಎಲ್ಲಾ ಕೃಷಿ ಸಾಲ ಮನ್ನಾ! ಇಲ್ಲಿದೆ ರಾಜ್ಯ ಸರ್ಕಾರದ ಬಿಗ್ ಅಪ್ಡೇಟ್
ರೈತರಿಗೆ ಸರ್ಕಾರದಿಂದ ಸಿಕ್ತು ನೋಡಿ ಖುಷಿ ಕೊಡೋ ಸುದ್ದಿ. ಇನ್ಮುಂದೆ ಸಾಲದ ಬಗ್ಗೆ ತಲೆ ಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ!
ನಮ್ಮ ಭಾರತ ದೇಶ ಪ್ರಮುಖವಾಗಿ ಕೃಷಿಯನ್ನು ಅವಲಂಬಿಸಿಕೊಂಡಿರುವಂತಹ ದೇಶವಾಗಿದ್ದು, ರೈತರು ದೇಶದ ಬೆನ್ನೆಲುಬು ಎಂಬುದಾಗಿ ಕರೆಯಲಾಗುತ್ತದೆ.
ಎಲ್ಲಕ್ಕಿಂತ ಪ್ರಮುಖವಾಗಿ ರೈತರು ಕೃಷಿಗಾಗಿ ಪಡೆದುಕೊಂಡಿರುವ ಸಾಲವನ್ನು (Agriculture Loan) ಕೆಲವೊಮ್ಮೆ ಅನಾವೃಷ್ಟಿ ಅಥವಾ ಅತಿವೃಷ್ಟಿ ಆದ ಸಂದರ್ಭದಲ್ಲಿ ಬೆಳೆ ನಷ್ಟದಿಂದಾಗಿ ಸಾಲವನ್ನು (Loan) ಕೂಡ ಕಟ್ಟಲು ಸಾಧ್ಯವಾಗದೆ ಆರ್ಥಿಕ ನಷ್ಟಕ್ಕೆ ಒಳಗಾಗುತ್ತಾನೆ.
ಇದೇ ಕಾರಣಕ್ಕಾಗಿ ದೇಶದಲ್ಲಿ ಸಾಲ ಮನ್ನಾ ಮಾಡುವಂತಹ ಯೋಜನೆಯನ್ನು ಜಾರಿಗೆ ತರಲಾಗಿದ್ದು ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶ ರಾಜ್ಯದಲ್ಲಿ ರೈತರ ಸಾಲದಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಮನ್ನಾವನ್ನು ಜಾರಿಗೆ ತರುವಂತ ಕೆಲಸವನ್ನು ಮಾಡಲಾಗಿದೆ.
ಮಹಿಳೆಯರಿಗೆ ಲಕ್ಷ ಲಕ್ಷ ಆದಾಯ ನೀಡುವ ಪೋಸ್ಟ್ ಆಫೀಸ್ ಅದ್ಭುತ ಸ್ಕೀಮ್ ಇದು
ರೈತರ ಸಾಲ ಮನ್ನಾ!
ಕೃಷಿಗಾಗಿ ಸಾಲ ಪಡೆದುಕೊಂಡಿದ್ದು ನಂತರ ಕೃಷಿ ಪಸಲು ಸಂಪೂರ್ಣವಾಗಿ ನಷ್ಟವಾಗಿದ್ದರೆ ಹಾಗೂ ಈ ಸಂದರ್ಭದಲ್ಲಿ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಮೂಲಕ ಸಾಲವನ್ನು ಪಡೆದುಕೊಂಡಿದ್ದರೆ ನಿಮ್ಮ ಸಾಲದಲ್ಲಿ ಒಂದು ಲಕ್ಷ ರೂಪಾಯಿಗಳ ವರೆಗೆ ರಿಯಾಯಿತಿಯನ್ನು ನೀಡಲಾಗಿ ಸರ್ಕಾರ ಘೋಷಿಸಿದೆ.
ಪ್ರಮುಖವಾಗಿ ಸಣ್ಣ ಪ್ರಮಾಣದ ರೈತರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ರೀತಿಯ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ಉತ್ತರ ಪ್ರದೇಶ ರಾಜ್ಯದ ರೈತರು ಈ ಒಂದು ಲಕ್ಷ ರೂಪಾಯಿಗಳ ವರೆಗಿನ ಸಾಲ ಮನ್ನಾ ಯೋಜನೆಯನ್ನು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿ ಮಾಡಿಕೊಳ್ಳಲು ಬಳಸಿಕೊಳ್ಳಬಹುದಾಗಿದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ಕೆಲವೊಂದು ಕಡೆಗಳಲ್ಲಿ ಮಳೆ ಇಲ್ಲದೆ ಬೆಳೆಯನ್ನು ಪಡೆಯಲು ಸಾಧ್ಯವಾಗದೆ ಆರ್ಥಿಕ ನಷ್ಟದಲ್ಲಿ ಸಾಕಷ್ಟು ಜನ ರೈತರಿದ್ದು, ಮುಂದಿನ ದಿನಗಳಲ್ಲಿ ಇಂತಹ ಯೋಜನೆಗಳ ಮೂಲಕ ಅವರು ಕೂಡ ಲಾಭ ಪಡೆದುಕೊಳ್ಳುವಂತಾಗಲಿ.
ಕೂಡಲೇ ಈ ಕಾರ್ಡ್ ಮಾಡಿಸಿಕೊಳ್ಳಿ! 5 ಲಕ್ಷದ ತನಕ ಉಚಿತ ಬೆನಿಫಿಟ್ ಪಡೆಯಿರಿ
ಬೇಕಾಗಿರುವ ಅರ್ಹತೆಗಳು ಹಾಗೂ ಡಾಕ್ಯುಮೆಂಟ್ಸ್ ಗಳು!
ಸಣ್ಣ ರೈತರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರಮುಖವಾಗಿ ಅವರು ಭಾರತೀಯ ನಿವಾಸಿಗಳಾಗಿರಬೇಕು. ಈ ಯೋಜನೆಯಲ್ಲಿ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವಂತಹ ರೈತರಿಗೆ ಮಾತ್ರ ಯೋಜನೆಯ ಲಾಭವನ್ನು ಪಡೆದುಕೊಳ್ಳುವ ಅವಕಾಶ ಇದೆ.
* ರೈತ ರಿಜಿಸ್ಟ್ರೇಷನ್ ನಂಬರ್ ಹಾಗೂ ಬ್ಯಾಂಕ್ ಅಕೌಂಟ್ ಡೀಟೇಲ್ಸ್
* ನಿಮ್ಮ ಮನೆಯ ಪ್ರಮಾಣ ಪತ್ರ ಹಾಗೂ ಸಾಲ ಸಂಬಂಧಿತ ಮಾಹಿತಿಗಳು ಹಾಗೂ ಡಾಕ್ಯುಮೆಂಟ್ಸ್ ಗಳು
* ನಿಮ್ಮ ಭೂಮಿಯ ಡಾಕ್ಯುಮೆಂಟ್ಸ್ ಗಳ ಜೊತೆಗೆ ಆಧಾರ್ ಕಾರ್ಡನ್ನು ಕೂಡ ಒದಗಿಸಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಸಾಲದ ಮೂಲ ಪ್ರಮಾಣ ಪತ್ರವನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಬೇಡಿ.
ಯಾವ ಬ್ಯಾಂಕ್ ನಲ್ಲೂ ಲೋನ್ ಸಿಗ್ತಾಯಿಲ್ವಾ? ಇಲ್ಲಿದೆ ಸಿಬಿಲ್ ಸ್ಕೋರ್ ಹೆಚ್ಚಿಸುವ ಟಿಪ್ಸ್
ಸಾಲ ಮನ್ನಾ ಲಿಸ್ಟ್ ಚೆಕ್ ಮಾಡುವ ವಿಧಾನ!
ನಿಮ್ಮ ರಾಜ್ಯದ ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ರೈತರ ಸಾಲ ಮನ್ನಾ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಹಾಗು ಅಲ್ಲಿ ನಿಮ್ಮ ಬ್ಯಾಂಕ್ ಡೀಟೇಲ್ಸ್ ಹಾಗು ಕಿಸಾನ್ ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಅನ್ನು ನಮೂದಿಸಬೇಕು.
ನಂತರ ಇಲ್ಲಿ ಕೇಳುವ ಕೆಲವೊಂದು ವಿವರಗಳನ್ನು ಸರಿಯಾದ ರೀತಿಯಲ್ಲಿ ತುಂಬಿ ಸಬ್ಮಿಟ್ ಮಾಡಿದ್ರೆ ರೈತರ ಸಾಲ ಮನ್ನಾ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಅನ್ನೋದನ್ನ ನೀವು ತಿಳಿದುಕೊಳ್ಳಬಹುದಾಗಿದೆ.
All agricultural loans of such farmers are waived, Here is the big update