ಕೂಡಲೇ ಈ ಕಾರ್ಡ್ ಮಾಡಿಸಿಕೊಳ್ಳಿ! 5 ಲಕ್ಷದ ತನಕ ಉಚಿತ ಬೆನಿಫಿಟ್ ಪಡೆಯಿರಿ

Story Highlights

ಆರೋಗ್ಯದ ಜೊತೆಗೆ ಆರೋಗ್ಯ ವಿಮೆಯು (Health Insurance) ಕೂಡ ಬಹಳ ಅಗತ್ಯ. ಅನಾರೋಗ್ಯದ ಸ್ಥಿತಿಗಳು ಹೇಳಿ ಕೇಳಿ ಬರುವುದಿಲ್ಲ

ಜನರ ಬಗ್ಗೆ ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲಿ ಆರೋಗ್ಯ (Health) ಹಾಗೂ ಶಿಕ್ಷಣ (Education) ಮೊದಲ ಸ್ಥಾನದಲ್ಲಿ ಇರುತ್ತದೆ. ಈ ಎರಡು ಜನರ ಮೂಲಭೂತ ಹಕ್ಕುಗಳೆಂದೇ ಹೇಳಬಹುದು.

ಸರ್ಕಾರಗಳು ಕೂಡ ಆಗಿದ್ದಾಗೆ ಈ ಎರಡು ವಿಚಾರಗಳಲ್ಲಿ ಜನರಿಗೆ ನೆರವಾಗುವಂತಹ ಯೋಜನೆಗಳನ್ನು ಹಾಗೂ ಸಂಸ್ಥೆಗಳನ್ನು ತೆರೆಯುತ್ತಿರುತ್ತವೆ. ಇದರಿಂದ ಯಾವುದೇ ಆರ್ಥಿಕ ತಾರತಮ್ಯ ಇಲ್ಲದೆ ಎಲ್ಲ ಜನರಿಗೂ ಉತ್ತಮ ಆರೋಗ್ಯ ಸಿಗುವಂತೆ ಆಗಲಿದೆ.

ಆರೋಗ್ಯದ ಜೊತೆಗೆ ಆರೋಗ್ಯ ವಿಮೆಯು (Health Insurance) ಕೂಡ ಬಹಳ ಅಗತ್ಯ. ಅನಾರೋಗ್ಯದ ಸ್ಥಿತಿಗಳು ಹೇಳಿ ಕೇಳಿ ಬರುವುದಿಲ್ಲ ಹೀಗೆ ಅನಾರೋಗ್ಯದ ಸ್ಥಿತಿಯಲ್ಲಿ ಇರಬೇಕಾದರೆ ಹಣದ ಕೊರತೆಯಿಂದಾಗಿ ಯಾರಿಗೂ ಸರಿಯಾದ ಚಿಕಿತ್ಸೆ ಲಭಿಸದೆ ಹೋಗಬಾರದು ಎಂಬ ಕಾರಣಕ್ಕಾಗಿ ಸರ್ಕಾರಗಳು ಆರೋಗ್ಯ ವಿಮೆ ಯೋಜನೆಗಳನ್ನು (Health Insurance Scheme) ಕೂಡ ಜನರಿಗೆ ನೀಡುತ್ತಿವೆ. ಆಯುಷ್ಮಾನ್ ಭಾರತ್ ಎಂಬ ಯೋಜನೆ ಕೂಡ ಇದರಲ್ಲಿ ಒಂದು.

ಯಾವ ಬ್ಯಾಂಕ್ ನಲ್ಲೂ ಲೋನ್ ಸಿಗ್ತಾಯಿಲ್ವಾ? ಇಲ್ಲಿದೆ ಸಿಬಿಲ್ ಸ್ಕೋರ್ ಹೆಚ್ಚಿಸುವ ಟಿಪ್ಸ್

ನಿಮ್ಮ ಬಳಿ ಆಯುಷ್ಮಾನ್ ಭಾರತ್ ಕಾರ್ಡ್ ಇದೆ ಎಂದಾದಲ್ಲಿ ನಿಮಗೆ ಯೋಜನೆಯ ಮಾಹಿತಿ ಈಗಾಗಲೇ ತಿಳಿದಿರುತ್ತದೆ. ನಿಮ್ಮ ಬಳಿ ಈ ಕಾರ್ಡ್ ಇಲ್ಲ ಎಂದಾದಲ್ಲಿ ಇಂದೇ ಈ ಕಾರ್ಡ್ ಅನ್ನು ಮಾಡಿಸಿಕೊಳ್ಳಿ. ಹಾಗೂ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲು ನಾವು ನಿಮ್ಮ ನೆರವಿಗೆ ಬರುತ್ತಿದ್ದೇವೆ.

ಆಯುಷ್ಮಾನ್ ಭಾರತ್ ಕಾರ್ಡ್ ಇದ್ದವರಿಗೆ ಆಯುಷ್ಮಾನ್ ಭಾರತ್ ನ ಅಡಿಯಲ್ಲಿ ಬರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದ ಆರೋಗ್ಯ ವಿಮೆ ಸಿಗಲಿದೆ. ಅಂದರೆ ಯಾವುದೇ ಹಣವನ್ನು ಖರ್ಚು ಮಾಡದೆ ಅನಾರೋಗ್ಯದ ಸಂದರ್ಭದಲ್ಲಿ 5 ಲಕ್ಷಗಳ ತನಕದ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು.

ಕೆಲವು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೇರಿ ಯೋಜನೆಯನ್ನು ಜಾರಿಗೆ ತಂದಿವೆ. ಈ ಗಾರ್ಡನ್ನು ಪಡೆಯಲು ನೀವು ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು. ನೀವು ಈ ಯೋಜನೆ ಪಡೆಯಲು ಅರ್ಹರಾಗಿದ್ದೀರೆ ಹಾಗೂ ಆನ್ಲೈನ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದರ ಬಗ್ಗೆ ವಿವರಗಳು ಈ ಕೆಳಗಿನಂತಿವೆ.

ಮಹಿಳೆಯರಿಗೆ ಸಿಗುತ್ತೆ 15 ಸಾವಿರ ರೂಪಾಯಿ ಕಿಟ್; ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್!

Ayushman cardಈ ಯೋಜನೆ ನಿಮಗೆ ಸಿಗಲಿದೆ ಎಂದು ಪರೀಕ್ಷಿಸಲು ಮೊದಲು PMJAY ಯೋಜನೆಯ ಅಧಿಕೃತ https://pmjay.gov.in/ ವೆಬ್ ಸೈಟ್ ಗೆ ಭೇಟಿ ನೀಡಿ. ಇಲ್ಲಿ ನಿಮ್ಮ ವಿವರಗಳನ್ನು ಹಾಕುತ್ತಿದ್ದಂತೆಯೇ ಒಟಿಪಿ ಬರಲಿದೆ, ಓಟಿಪಿ ನಮೂದಿಸಿದಾಗ ನೀವು ಈ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದರೆ ಇಂದಿನ ವಿವರಗಳನ್ನು ಕೇಳಲಾಗುತ್ತದೆ.

ನಿಮ್ಮ ವಿಳಾಸ, ನೀವು ಯಾವ ರಾಜ್ಯದ ನಿವಾಸಿ, ನಿಮ್ಮ ಪಡಿತರ ಚೀಟಿ ವಿವರಗಳನ್ನು ಇಲ್ಲಿ ಹಾಕುತ್ತಿದ್ದಂತೆ ನಿಮ್ಮ ಆಯುಷ್ಮಾನ್ ಭಾರತ್ ಕಾರಣ ಅರ್ಜಿ ಸಿದ್ಧವಾಗಿರುತ್ತದೆ.

ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು

ಯಾರಿಗೆಲ್ಲ ಸಿಗಲಿದೆ ಆಯುಷ್ಮಾನ್ ಭಾರತ್ ಕಾರ್ಡ್!

2011ರ ಜನಗಣತಿ ಆಧಾರದ ಮೇಲೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಾಸಿಸುವ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಈ ಕಾರ್ಡ್ ಸಿಗಲಿದೆ. 16 ರಿಂದ 59 ವರ್ಷ ವಯಸ್ಸಿನ ಆರ್ಥಿಕ ದುರ್ಬಲರಾಗಿರುವ ಕುಟುಂಬಗಳಲ್ಲಿನ ಸದಸ್ಯರು ಇದರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಹಾಗೂ ಅಗತ್ಯದ ಸಂದರ್ಭದಲ್ಲಿ 5 ಲಕ್ಷಗಳ ತನಕ ಆರೋಗ್ಯ ವಿಮೆ ಪಡೆಯಬಹುದು.

Get this card now to Get free benefit up to 5 lakhs

Related Stories