ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್! ವಾಹನ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಓಲಾ ಕಂಪನಿ

Story Highlights

Electric Scooter : ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ OLA ಇದೀಗ ತನ್ನ ಗ್ರಾಹಕರನ್ನು ಆಕರ್ಷಿಸಲು ಅಭಿಯಾನವನ್ನು ಪ್ರಾರಂಭಿಸಿದೆ, ಇದನ್ನು (Ola Electric Rush) ಎಂದು ಹೆಸರಿಸಲಾಗಿದೆ

Electric Scooter : ದೇಶದಲ್ಲಿ ಎಲೆಕ್ಟ್ರಿಕ್ ಬೈಕುಗಳ ಕ್ರಾಂತಿ ಆರಂಭವಾದ ದಿನಗಳಿಂದ ಮುಂಚೂಣಿಯಲ್ಲಿರುವ ಹೆಸರು ಎಂದರೆ ಅದು ಓಲಾ ಕಂಪನಿಯ ಸ್ಕೂಟರ್ ಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಅದ್ಬುತ ಡಿಸೈನ್ ಮೂಲಕ ಜನರ ಗಮನಸೆಳೆದ ಈ ಬೈಕ್ ಮಾರುಕಟ್ಟೆ ಪ್ರವೇಶ ಮಾಡಿದ ಕೆಲವೇ ಸಮಯದಲ್ಲಿ ಹೆಚ್ಚಿನ ಮಾರಾಟದ ಮೂಲಕ ಜನರ ಗಮನಸೆಳೆದಿದೆ. ಅದರಲ್ಲೂ ಓಲಾ ಎನ್ನುವ ಹೆಸರು ಕರ್ನಾಟಕದೆಲ್ಲೆಡೆ ಪ್ರಚಾರ ಗಿಟ್ಟಿಸಿದೆ.

ಸದ್ಯ ಇದೀಗ ಓಲಾ ಕಂಪನಿ ಜನರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹೌದು ಇತರೆ ಕಂಪನಿಗಳಿಗೆ ಸೆಡ್ಡು ಹೊಡೆಯಲು ಇದೀಗ ಓಲಾ ಎಲ್ಲಾ ಪ್ಲಾನ್ ಮಾಡಿಕೊಂಡಿದೆ. ಮಾರುಕಟ್ಟೆಯಲ್ಲಿ ತನ್ನನ್ನು ಇನ್ನಷ್ಟು ಬಲ ಪಡಿಸಿಕೊಳ್ಳಲು ಈ ಕಂಪನಿ ಈಗ ಹೊಸ ತಂತ್ರ ಹೂಡಿದೆ.

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ಯಾವುದೇ ಕಾರಣಕ್ಕೂ ಈ 4 ತಪ್ಪು ಮಾಡಬೇಡಿ

ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ OLA ಇದೀಗ ತನ್ನ ಗ್ರಾಹಕರನ್ನು ಆಕರ್ಷಿಸಲು ಅಭಿಯಾನವನ್ನು ಪ್ರಾರಂಭಿಸಿದೆ, ಇದನ್ನು (Ola Electric Rush) ಎಂದು ಹೆಸರಿಸಲಾಗಿದೆ ಮತ್ತು ಇದು ಜೂನ್ 20 ರಿಂದ 26 ರವರೆಗೆ ಜನರಿಗೆ ಕೊಡುಗೆ ನೀಡಲಿದೆ.

ಓಲಾ ಕಂಪನಿಯ ಈ ಹೊಸ ಈ ಡಿಸ್ಕೌಂಟ್ ಅಭಿಯಾನದಲ್ಲಿ, OLA S1 ಮೇಲೆ 5,000 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ್ ಜೊತೆಗೆ ಇದಲ್ಲದೇ, S1 Pro ಮತ್ತು S1 ಏರ್ ಅನ್ನು ಖರೀದಿಸುವವರು ರೂ 2999 ಮೌಲ್ಯದ ಓಲಾ ಕೇರ್ ಪ್ಲಸ್ ಚಂದಾದಾರಿಕೆಯನ್ನು ಪಡೆಯುತ್ತಾರೆ.

ನಿಮ್ಮ ಫಿಕ್ಸೆಡ್ ಹಣಕ್ಕೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ ಈ ಪೋಸ್ಟ್ ಆಫೀಸ್ ಯೋಜನೆ

Ola Electric Rushಆಯ್ದ ಕ್ರೆಡಿಟ್ ಕಾರ್ಡ್‌ಗಳ (Credit Cards) ಮೂಲಕ ನೀವೇನಾದರೂ EMI ಮೂಲಕ ಮೇಲೆ S1 ಪ್ರೊ ಮತ್ತು ಓಲಾ ಏರ್‌ನ ಖರೀದಿ ಮಾಡಿದರೆ ರೂ 5,000 ಕ್ಯಾಶ್‌ಬ್ಯಾಕ್ ಲಭ್ಯವಿದೆ.

ಇಷ್ಟೇ ಅಲ್ಲದೆ ತನ್ನ ಗ್ರಾಹಕರಿಗೆ ಕಂಪನಿ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದೆ, ಅದೇನಂದ್ರೆ ಇದಲ್ಲದೆ, ಓಲಾ ಕಂಪನಿಯು ಯಾವುದೇ ಹೆಚ್ಚುವರಿ ಪಾವತಿಯಿಲ್ಲದೆ ತನ್ನ ಎಲ್ಲಾ ಮಾದರಿಗಳ ಬ್ಯಾಟರಿಗಳ ಮೇಲೆ 8 ವರ್ಷಗಳ ಅಥವಾ 80,000 ಕಿಮೀ ವಾರಂಟಿ ನೀಡುತ್ತಿದೆ.

ಪೇಟಿಎಂ ವಾಲೆಟ್ ನಲ್ಲಿ ಹಣ ಇಲ್ಲದೆ ಹೋದ್ರೆ ಸೇವೆ ಸ್ಥಗಿತ! ಪೇಟಿಎಂ ಬಳಕೆದಾರರಿಗೆ ಬಿಗ್ ಅಪ್ಡೇಟ್

ಇದಲ್ಲದೆ, ಗ್ರಾಹಕರು ಹೆಚ್ಚುವರಿ ವಾರಂಟಿಯ ಕೊಡುಗೆಯನ್ನು ಸಹ ಆಯ್ಕೆ ಮಾಡಬಹುದು. ಇದರಲ್ಲಿ, ನೀವು ರೂ 4,999 ಕಟ್ಟಿದರೆ ನಿಮಗೆ 1 ಲಕ್ಷ ಕಿಮೀ ವರೆಗೆ ಮತ್ತು ರೂ 12,999 ಕ್ಕೆ 1.25 ಲಕ್ಷ ಕಿಮೀ ವರೆಗೆ ವಾರಂಟಿಯನ್ನು ಹೆಚ್ಚಿಸಬಹುದು. ಕಂಪನಿಯು 3 kW ವೇಗದ ಚಾರ್ಜರ್ ಪರಿಕರವನ್ನು ಸಹ ಪರಿಚಯಿಸಿದೆ, ಇದರ ಬೆಲೆ 29,999 ರೂ ಆಗಿದೆ

Huge discount on electric scooters, Ola company has given good news to vehicle lovers

Related Stories