ಪೇಟಿಎಂ ವಾಲೆಟ್ ನಲ್ಲಿ ಹಣ ಇಲ್ಲದೆ ಹೋದ್ರೆ ಸೇವೆ ಸ್ಥಗಿತ! ಪೇಟಿಎಂ ಬಳಕೆದಾರರಿಗೆ ಬಿಗ್ ಅಪ್ಡೇಟ್

ಪೇಟಿಎಂ ಪೇಮೆಂಟ್ ಬ್ಯಾಂಕ್ (Paytm Payment Bank) ಹಂಚಿಕೊಂಡಿರುವಂತಹ ಮಾಹಿತಿ ಒಂದರ ಪ್ರಕಾರ, ಜುಲೈ 20 ರ ಬಳಿಕ ಪೇಟಿಎಂನ ಬಹು ಮುಖ್ಯ ಸೇವೆಯೊಂದು ಸಂಪೂರ್ಣ ಸ್ಥಗಿತಗೊಳ್ಳಲಿದೆ.

Bengaluru, Karnataka, India
Edited By: Satish Raj Goravigere

Important information to PayTM users: ಆನ್ಲೈನ್ ಪೇಮೆಂಟ್ ಅಪ್ಲಿಕೇಶನ್ ಗಳಲ್ಲಿ ಒಂದಾದ ಪೇಟಿಎಂ ಉಪಯೋಗಿಸುತ್ತಿರುವ ಜನರಿಗೆ ಒಂದಲ್ಲ ಒಂದು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.

ಅದರಂತೆ, ಪೇಟಿಎಂ ಪೇಮೆಂಟ್ ಬ್ಯಾಂಕ್ (Paytm Payment Bank) ಹಂಚಿಕೊಂಡಿರುವಂತಹ ಮಾಹಿತಿ ಒಂದರ ಪ್ರಕಾರ, ಜುಲೈ 20 ರ ಬಳಿಕ ಪೇಟಿಎಂನ ಬಹು ಮುಖ್ಯ ಸೇವೆಯೊಂದು ಸಂಪೂರ್ಣ ಸ್ಥಗಿತಗೊಳ್ಳಲಿದೆ.

If there is no money in the Paytm wallet, the service will stop!

ಹೌದು ಪೇಟಿಎಂ ಪೇಮೆಂಟ್ ಬ್ಯಾಂಕ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಕಳೆದ ಹಲವು ವರ್ಷಗಳಿಂದ ಯಾರು ತಮ್ಮ ಪೇಟಿಎಂ ವ್ಯಾಲೆಟ್ ಅಕೌಂಟ್(paytm wallet account) ನಲ್ಲಿ ಶೂನ್ಯ ಬ್ಯಾಲೆನ್ಸ್ ಮೊತ್ತ (zero balance amount)ವನ್ನು ಹೊಂದಿರುತ್ತಾರೋ ಅವರ ಪೇಟಿಎಂ ಸೇವೆ ಜೂನ್ 20, 2024 ರಲ್ಲಿ ಸಂಪೂರ್ಣ ಸ್ಥಗಿತಗೊಳಿಸಲಿದ್ದಾರೆ.

ಕೇವಲ ₹4000 ಉಳಿತಾಯ ಮಾಡಿ ಬರೋಬ್ಬರಿ 2 ಲಕ್ಷ ಪಡೆಯಿರಿ! ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್

ಪೇಟಿಎಂ ವಾಲೆಟ್ ನಲ್ಲಿ ಹಣ ಇಲ್ಲದೆ ಹೋದರೆ ಸೇವೆ ಸ್ಥಗಿತ!

ಪೇಟಿಎಂ ಪೇಮೆಂಟ್ ಬ್ಯಾಂಕ್ ಇತ್ತೀಚಿಗಷ್ಟೇ ತನ್ನ ಅಧಿಕೃತ ವೆಬ್ಸೈಟ್ನಲ್ಲಿ “ದಯವಿಟ್ಟು ಗಮನಿಸಿ, ಕಳೆದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಿಂದ ಯಾವುದೇ ವಹಿವಾಟು ನಡೆಸದ ಮತ್ತು ಶೂನ್ಯ ಬ್ಯಾಲೆನ್ಸ್ ಹೊಂದಿರುವ ಎಲ್ಲಾ ವಾಲೆಟ್ ಗಳನ್ನು 20ನೇ ಜುಲೈ 2024 ರಿಂದ ಮುಚ್ಚಲಾಗುವುದು ಎಂಬ ಮಾಹಿತಿಯನ್ನು ಎಲ್ಲಾ ಬಳಕೆದಾರರಿಗೆ ತಿಳಿಸಲಾಗುವುದು ಮತ್ತು ವಾಲೆಟ್ ಅನ್ನು ಮುಚ್ಚುವ ಮೊದಲು 30 ದಿನಗಳ ನೋಟಿಸ್ ಅವಧಿಯನ್ನು ನೀಡಲಾಗಿದೆ” ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೀಗಾಗಿ ನೀವೇನಾದರೂ ನಿಮ್ಮ ಪೇಟಿಎಂ ವ್ಯಾಲೆಟ್(Paytm wallet) ನಲ್ಲಿ ಹಲವು ವರ್ಷಗಳಿಂದ ಶೂನ್ಯ ಬ್ಯಾಲೆನ್ಸ್ ಮೊತ್ತವನ್ನು ಹೊಂದಿದ್ದರೆ ಕೂಡಲೇ ಸರಿಪಡಿಸಿಕೊಂಡು ಪೇಟಿಎಂ ಖಾತೆಯನ್ನು ಸಕ್ರಿಯಗೊಳಿಸಿ ಇಲ್ಲವಾದರೆ ನಿಮ್ಮ ಮೊಬೈಲ್ ನಲ್ಲಿ ಪೇಟಿಎಂ ಸೌಲಭ್ಯ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಪೇಟಿಎಂ ಬ್ಯಾಂಕ್ ಖಾತೆ ಹಾಗೂ ವಾಲೆಟ್ ಗಳನ್ನು ನಿಷೇಧಿಸಿದ ಆರ್ಬಿಐ

ಕಳೆದ ಮಾರ್ಚ್ 15, 2024ರಂದು ಪೇಟಿಎಂ ವಹಿವಾಟಿನ ಕುರಿತು ತನಿಖೆ ನಡೆಸಿದಂತಹ ಭಾರತೀಯ ರಿಸರ್ವ್ ಬ್ಯಾಂಕ್ ಪೇಟಿಎಂಗೆ, ಹೊಸ ಠೇವಣಿ ಅಥವಾ ಕ್ರೆಡಿಟ್ ವಹಿವಾಟು (credit transaction)ಗಳನ್ನು ಅನುಮತಿಸಿದಂತೆ ಹಾಗೂ ಪೇಟಿಎಂ ಪೇಮೆಂಟ್ ಬ್ಯಾಂಕ್ ಖಾತೆಗಳು ಹಾಗೂ ವಾಲೆಟ್ ಗಳನ್ನು ಸಂಪೂರ್ಣ ನಿಷೇಧಿಸುವಂತೆ ಮಾರ್ಗಸೂಚಿಯನ್ನು ನೀಡಿದೆ.

ಈ ಕಾರಣದಿಂದಾಗಿ ಪೇಟಿಎಂ ಪೇಮೆಂಟ್ ಬ್ಯಾಂಕ್, ಶೂನ್ಯ ಬ್ಯಾಲೆನ್ಸ್ ಹೊಂದಿರುವ ವಾಲೆಟ್ಗಳು ಹಾಗೂ ಬಳಕೆಯಲ್ಲಿಲ್ಲದ ಖಾತೆಗಳನ್ನು ಮುಚ್ಚಲಾಗುವ ಸೂಚನೆಯನ್ನು ನೀಡಿದೆ.

ಬಡವರಿಗೆ ಮನೆ ಕಟ್ಟಿಸಿಕೊಡಲು ಮುಂದಾದ ಕೇಂದ್ರ ಸರ್ಕಾರ! ಯೋಜನೆಯ ಸೌಲಭ್ಯ ಪಡೆದುಕೊಳ್ಳಿ

Paytmನಿಷ್ಕ್ರಿಯೆ ಖಾತೆಯನ್ನು ಮರು ಸಕ್ರಿಯಗೊಳಿಸಲು ಈ ಲಿಂಕ್ ಅನ್ನು ಅನುಸರಿಸಿ

ನೀವೇನಾದರೂ ಹಲವು ವರ್ಷಗಳಿಂದ ಪೇಟಿಎಂ ಪೇಮೆಂಟ್ ಖಾತೆಯನ್ನು ಉಪಯೋಗಿಸದೆ ಅದು ನಿಷ್ಕ್ರಿಯೆಗೊಂಡಿದ್ದರೆ ಅದನ್ನು ಪುನಃ ಸಕ್ರಿಯಗೊಳಿಸಲು (Reactivation) ಅವಕಾಶವಿದ್ದು ಪೇಟಿಎಂ ಪೇಮೆಂಟ್ ಬ್ಯಾಂಕಿನ ಅಧಿಕೃತ ವೆಬ್ಸೈಟ್ ಆದ https://m.paytm.me/cb_wal. ಭೇಟಿ ನೀಡಿ ಕೇಳಲಾಗುವಂತಹ ದಾಖಲಾತಿಗಳನ್ನು ನಮೂದಿಸಿದರೆ ನಿಮ್ಮ ಪೇಟಿಎಂ ಖಾತೆ ಮರುಸಕ್ರಿಯೆಗೊಳ್ಳುತ್ತದೆ ಅಥವಾ

ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಈ ನಿಯಮ ಕಡ್ಡಾಯ! ಸಬ್ಸಿಡಿ ದುರ್ಬಳಕೆ ಮಾಡೋರಿಗೆ ಹೊಸ ಕ್ರಮ ಜಾರಿ

1. ಪ್ಲೇ ಸ್ಟೋರ್ ನಲ್ಲಿ ಪೇಟಿಎಂ ಅಪ್ಲಿಕೇಶನ್ Paytm application ಅನ್ನು ಡೌನ್ಲೋಡ್ ಮಾಡಿಕೊಂಡು ಮುಖಪುಟಕ್ಕೆ ನ್ಯಾವಿಗೇಟ್ ಮಾಡಿ.

2. ಆನಂತರ ಅಪ್ಲಿಕೇಶನ್ ನಲ್ಲಿ PPBL ವಿಭಾಗಕ್ಕೆ ತೆರಳಿ ‘ವಾಲೆಟ್’ ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ ಪೇಟಿಎಂ ವಾಲೆಟ್ ನಿಷ್ಕ್ರಿಯೆ ಗೊಂಡಿದ್ದರೆ ಅದರ ಸಂದೇಶವನ್ನು ನೀವು ಕಾಣುತ್ತೀರಾ.

4. ಅದನ್ನು ಮರು ಸಕ್ರಿಯಗೊಳಿಸಲು ಆಕ್ಟಿವೇಟ್ ವ್ಯಾಲೆಟ್ activate wallet ಎಂಬ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಪೇಟಿಎಂ ಪೇಮೆಂಟ್ ಬ್ಯಾಂಕಿನ ವಾಲೆಟ್ ಸೌಲಭ್ಯ ಮರು ಸಕ್ರಿಯಗೊಳ್ಳುತ್ತದೆ.

5. ನಿಮ್ಮ ಪೇಟಿಎಂ ಖಾತೆ ಮುಚ್ಚಿಸುವುದನ್ನು ತಪ್ಪಿಸಲು ನಿಗದಿತ ಸಮಯದೊಳಗೆ ಅಗತ್ಯ ಕ್ರಮ ಕೈ ತೆಗೆದುಕೊಳ್ಳುವುದು ಉತ್ತಮ.

If there is no money in the Paytm wallet, the service will stop!