ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಜಾರಿಗೆ ತಂದಿರುವ ಯೋಜನೆ ಗೃಹಲಕ್ಷ್ಮೀ ಯೋಜನೆ ಆಗಿದೆ. ಈ ಒಂದು ಯೋಜನೆಯ ಮೂಲಕ ಮನೆಯ ಮುಖ್ಯಸ್ಥೆಯ ಬ್ಯಾಂಕ್ ಖಾತೆಗೆ (Bank Account) ಪ್ರತಿ ತಿಂಗಳು ₹2000 ರೂಪಾಯಿ ಹಣ ಜಮೆ ಆಗುತ್ತಿದ್ದು, ಇದರಿಂದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಆಗುತ್ತಿದೆ. 10 ತಿಂಗಳುಗಳಿಂದ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ ರಾಜ್ಯದ ಮಹಿಳೆಯರು.

ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಇದೆ, ಆದರೆ ಈಗ ಕೇಂದ್ರ ಸರ್ಕಾರವು ಗೃಹಲಕ್ಷ್ಮೀ ಯೋಜನೆಯನ್ನೇ ಮೀರಿಸುವಂಥ ಹೊಸದೊಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರು ಅರ್ಥಿಕವಾಗಿ ಸ್ವಾತಂತ್ರ್ಯವಾಗಿ ಇರಬೇಕು ಎಂದು, ಅವರಿಗೆ ತರಬೇತಿ ಕೊಟ್ಟು ಸಹಾಯ ಮಾಡಲು ಮುಂದಾಗಿದೆ ಸರ್ಕಾರ. ಇದು ಮಹಿಳೆಯರು ಸ್ವಉದ್ಯಮ (Own Business) ಮಾಡಲು ಸಹಾಯ ಮಾಡುವ ಯೋಜನೆ ಆಗಿದೆ. ಮನೆಯಲ್ಲೇ ಕೂತು ಕೆಲಸ ಮಾಡಿ ಹಣ ಸಂಪಾದನೆ ಮಾಡಬಹುದು.

More People applying for the new scheme of the central government

ಜಸ್ಟ್ ಪಾಸ್ ಆಗಿದ್ರೂ ಸಾಕು ವಿದ್ಯಾರ್ಥಿಗಳಿಗೆ ಸಿಗಲಿದೆ ಎಜುಕೇಷನ್ ಸ್ಕಾಲರ್ಶಿಪ್! ಇಂದೇ ಅರ್ಜಿ ಸಲ್ಲಿಸಿ

ಇದಕ್ಕಾಗಿ ಸರ್ಕಾರವೇ ತರಬೇತಿ ನೀಡಲಿದ್ದು, ಇದು ಹೊಲಿಗೆ ಯಂತ್ರ ನೀಡುವ ಯೋಜನೆ ಆಗಿದೆ. ಈಗಾಗಲೇ ಹೊಲಿಗೆ ಕಲಿತು, ಯಂತ್ರ ಖರೀದಿ ಮಾಡಲು ಆರ್ಥಿಕ ಸಮಸ್ಯೆಯಿಂದ ಸಾಧ್ಯ ಆಗದೇ ಇರುವ ಮಹಿಳೆಯರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.

ಹೊಲಿಗೆ ಯಂತ್ರ ಖರೀದಿ ಮಾಡಲು ₹15,000 ವರೆಗು ಸರ್ಕಾರ ಸಹಾಯ ಮಾಡುತ್ತದೆ. ಇದರಿಂದ ಟೈಲರಿಂಗ್ ಮಾಡಿಕೊಂಡು ಮಹಿಳೆಯರು ಸಂಪಾದನೆ ಮಾಡಬಹುದು. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ..

ಅಗತ್ಯವಿರುವ ಅರ್ಹತೆಗಳು:

ಸರ್ಕಾರದಿಂದ ಉಚಿತವಾಗಿ ಟೈಲರಿಂಗ್ ಮಶಿನ್ ಪಡೆಯುವುದಕ್ಕೆ ಬೇಕಾದ ಅರ್ಹತೆಗಳು:

*ಅರ್ಜಿ ಹಾಕುವ ಮಹಿಳೆ ಭಾರತದ ಪ್ರಜೆಯೇ ಆಗಿರಬೇಕು. ಇಲ್ಲಿಯೇ ಹುಟ್ಟಿ ಬೆಳೆದವರಾಗಿರಬೇಕು.
*ಈಗಾಗಲೇ ಜಾರಿಗೆ ಬಂದಿರುವ ಪಿಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಟ್ರೈಲರ್ ಆಗಿ ಕಾರ್ಯ ನಿರ್ವಹಿಸುತ್ತಿರುವವರು ಕೂಡ ಅಪ್ಲೈ ಮಾಡಬಹುದು.
*18 ವರ್ಷ ಮೇಲ್ಪಟ್ಟ ಮಹಿಳೆಯರು ಅರ್ಜಿ ಸಲ್ಲಿಸಬಹುದು.
*ಅರ್ಜಿ ಹಾಕುವ ಮಹಿಳೆಯ ಆದಾಯ ಅಥವಾ ಕುಟುಂಬದ ಆದಾಯ ₹12000 ಕ್ಕಿಂತ ಕಡಿಮೆ ಇರಬೇಕು.

Women Scheme

ನಿಮ್ಮ ಮಗಳ ವಿದ್ಯಾಭ್ಯಾಸಕ್ಕೆ ಸುಕನ್ಯಾ ಸಮೃದ್ಧಿ ಖಾತೆ ತೆರೆಯಿರಿ! ಏನೆಲ್ಲಾ ಬೆನಿಫಿಟ್ ಇದೆ ಗೊತ್ತಾ?

ಅಗತ್ಯವಿರುವ ದಾಖಲೆಗಳು:

*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಕ್ಯಾಸ್ಟ್ ಸರ್ಟಿಫಿಕೇಟ್
*ಇನ್ಕಮ್ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಟೈಲರಿಂಗ್ ಕಲಿತಿರುವ ಸರ್ಟಿಫಿಕೇಟ್

5 ವರ್ಷದ ಮಗು ಇರೋ ಪೋಷಕರಿಗೆ ಪೋಸ್ಟ್ ಆಫೀಸ್ ಭರ್ಜರಿ ಸುದ್ದಿ! ಸಿಗುತ್ತೆ ಯೋಜನೆಯ ಬೆನಿಫಿಟ್

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಆಸಕ್ತಿ ಇರುವವರು, https://pmvishwakarma.gov.in ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಪಿಎಮ್ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.

More People applying for the new scheme of the central government