ನಮ್ಮ ದೇಶದ ಮೊದಲ ಬ್ಯಾಂಕ್ ಯಾವುದು ಗೊತ್ತಾ? 99% ಜನರಿಗೆ ಉತ್ತರ ಗೊತ್ತಿಲ್ಲ
ಭಾರತದಲ್ಲಿ ಮೊದಲು ಹಣಕಾಸಿನ ವ್ಯವಹಾರ ಆರಂಭಿಸಿದ ಬ್ಯಾಂಕ್ ಅಂದ್ರೆ ಬ್ಯಾಂಕ್ ಆಫ್ ಕೊಲ್ಕತ್ತಾ. (Bank of Kolkata) 1806 ಜೂನ್ 12ರಂದು ಈ ಬ್ಯಾಂಕ್ ಕಾರ್ಯಾಚರಣೆ ಆರಂಭವಾಯಿತು.
ನಾವು ಪ್ರತಿನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ಬ್ಯಾಂಕ್ (Bank) ಮೂಲಕ ವ್ಯವಹಾರ ಮಾಡುತ್ತೇವೆ. ಆದರೆ ಬ್ಯಾಂಕ್ ಬಗ್ಗೆ ತಿಳಿದುಕೊಳ್ಳುವ ವಿಷಯ ಎಷ್ಟೊಂದು ಇದೆ ಗೊತ್ತಾ?
ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಮೊದಲು ಕೆಲಸವನ್ನು ಆರಂಭಿಸಿದ ಬ್ಯಾಂಕ್ ಯಾವುದು ಗೊತ್ತಾ? ಸುಮಾರು 99 ರಷ್ಟು ಜನರಿಗೆ ಈ ಮಾಹಿತಿ ತಿಳಿದಿರುವುದಿಲ್ಲ. ಅದರ ಬಗ್ಗೆ ನಾವು ಇಲ್ಲಿ ಸಂಪೂರ್ಣವಾದ ಮಾಹಿತಿ ನೀಡುತ್ತಿದ್ದೇವೆ.
ಕೇವಲ 36 ರೂಪಾಯಿ ಉಳಿತಾಯ ಮಾಡಿ, 6 ಲಕ್ಷ ನಿಮ್ಮದ್ದಾಗಿಸಿಕೊಳ್ಳೋ ಬಂಪರ್ ಸ್ಕೀಮ್
ಭಾರತದ ಮೊದಲ ಬ್ಯಾಂಕ್ ಯಾವುದು? (India’s first bank)
ಭಾರತದಲ್ಲಿ ಮೊದಲು ಹಣಕಾಸಿನ ವ್ಯವಹಾರ ಆರಂಭಿಸಿದ ಬ್ಯಾಂಕ್ ಅಂದ್ರೆ ಬ್ಯಾಂಕ್ ಆಫ್ ಕೊಲ್ಕತ್ತಾ. (Bank of Kolkata) 1806 ಜೂನ್ 12ರಂದು ಈ ಬ್ಯಾಂಕ್ ಕಾರ್ಯಾಚರಣೆ ಆರಂಭವಾಯಿತು.
ಜನರಲ್ ವೆಲ್ಲೆಸ್ಲಿ ಟಿಪ್ಪು ಸುಲ್ತಾನ್ ಮತ್ತು ಮರಾಠರ ವಿರುದ್ಧ ಯುದ್ಧ ಮಾಡಿದ ನಂತರ ಹಣಕಾಸು ವ್ಯವಹಾರಕ್ಕೆ ಅನುಕೂಲವಾಗಲು ಈ ಬ್ಯಾಂಕ್ ಆರಂಭಿಸಲಾಯಿತು.
1809ರಲ್ಲಿ ಕೊಲ್ಕತ್ತಾ ಬ್ಯಾಂಕನ್ನು ಬ್ಯಾಂಕ್ ಆಫ್ ಬೆಂಗಾಲ್ (Bank of Bengal) ಎಂದು ಮರುನಾಮಕರಣ ಮಾಡಲಾಯಿತು. ನಂತರ ಅದೇ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಆಗಿ ಮಾರ್ಪಾಡು ಹೊಂದಿದೆ.
ಬ್ಯಾಂಕ್ ಆಫ್ ಬೆಂಗಾಲ್ ಪ್ರಸಿದ್ಧಿ ಪಡೆದುಕೊಂಡ ನಂತರ ಬ್ಯಾಂಕಿನ ಅಧಿಕಾರಿಗಳು ಬ್ರಾಂಚ್ ಆರಂಭಿಸಲು ನಿರ್ಧರಿಸಿದರು. ರಂಗೂನ್ – 1861, ಪಾಟ್ನಾ, ಮಿರ್ಜಾಪುರ ಮತ್ತು ವಾರಣಾಸಿಗಳಲ್ಲಿ – 1862 ಮೊದಲ ಬಾರಿಗೆ ಬ್ರಾಂಚ್ ಆರಂಭಿಸಲಾಯಿತು.
ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಬರೋಬ್ಬರಿ 27 ಸಾವಿರ ರೂಪಾಯಿ ಡಿಸ್ಕೌಂಟ್!
1946ರಲ್ಲಿ ಢಾಕಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬೆಂಗಲ್ ವಿಲೀನಗೊಳಿಸಲಾಯಿತು. ಬಳಿಕ ಖಾನ್ಪುರದಲ್ಲಿ ಬ್ಯಾಂಕ್ ಆಫ್ ಬೆಂಗಾಲ್ ಶಾಖೆಯನ್ನು ಪ್ರಾರಂಭಿಸಲಾಯಿತು.
ಆರಂಭದಲ್ಲಿ ಈ ಬ್ಯಾಂಕಿನಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಅವಧಿಗೆ ಸಾಲ (Loan) ನೀಡುತ್ತಿರಲಿಲ್ಲ. ಬ್ಯಾಂಕ್ ಆಫ್ ಬೆಂಗಾಲ್ ನಂತರ ಬೇರೆ ಬೇರೆ ಖಾಸಗಿ ಬ್ಯಾಂಕ್ ಗಳು ಹುಟ್ಟಿಕೊಂಡರು ಸಹ ಎಲ್ಲವೂ ಬಹಳ ಬೇಗ ಮುಚ್ಚಿ ಹೋದವು.
50 ಲಕ್ಷ ಗೃಹ ಸಾಲ ಪಡೆದುಕೊಂಡ್ರೆ ಪ್ರತಿ ತಿಂಗಳು ಎಷ್ಟು EMI ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ
1955ರಲ್ಲಿ ರಿಸರ್ವ್ ಬ್ಯಾಂಕ್ ಈ ಬ್ಯಾಂಕ್ ಅನ್ನು ಸ್ವಾಧೀನ ಪಡಿಸಿಕೊಂಡು ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಈಗ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಇದಾಗಿದೆ.
which is the first bank of our country, 99 Percent of people don’t know the answer