ಸ್ವಂತ ಬಿಸಿನೆಸ್ ಮಾಡೋ ಆಲೋಚನೆ ಇದ್ರೆ, ಸರ್ಕಾರದಿಂದಲೇ ಸಿಗಲಿದೆ ಬಡ್ಡಿಯಿಲ್ಲದೆ ಸಾಲ

Loan Scheme : ಈ ಯೋಜನೆಯ ಅಡಿಯಲ್ಲಿ ನೀವು ಸುಲಭವಾಗಿ ಹತ್ತು ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು

Loan Scheme : ನೀವು ನಿಮ್ಮದೇ ಆಗಿರುವ ಐಡಿಯಾ (business idea) ಜೊತೆಗೆ ಏನಾದರೂ ಸ್ವಂತ ಬುಸಿನೆಸ್ (own business) ಮಾಡಬೇಕು ಅನ್ಕೊಂಡಿದ್ದೀರಾ? ಆದರೆ ಬಂಡವಾಳ (investment) ಇಲ್ಲ, ಹೇಗೆ ಸ್ಟಾರ್ಟ್ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೀರಾ?

ಖಂಡಿತ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ನೀವು ಸುಲಭವಾಗಿ ಹತ್ತು ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ (Loan) ಪಡೆಯಬಹುದು ಹಾಗೂ ಸಣ್ಣ ಪ್ರಮಾಣದಲ್ಲಿ ಯಾವುದೇ ಬಿಸಿನೆಸ್ ಸ್ಟಾರ್ಟ್ ಮಾಡುವುದಿದ್ದರೆ ಬಹಳ ಉಪಯೋಗಕಾರಿಯಾದ ಯೋಜನೆ ಇದಾಗಿದೆ.

ಸ್ವಂತ ಮನೆ, ಜಮೀನು, ಆಸ್ತಿ ಹೊಂದಿರುವವರಿಗೆ ಇನ್ಮುಂದೆ ಹೊಸ ತೆರಿಗೆ ನಿಯಮ

ಸ್ವಂತ ಬಿಸಿನೆಸ್ ಮಾಡೋ ಆಲೋಚನೆ ಇದ್ರೆ, ಸರ್ಕಾರದಿಂದಲೇ ಸಿಗಲಿದೆ ಬಡ್ಡಿಯಿಲ್ಲದೆ ಸಾಲ - Kannada News

ಪ್ರಧಾನಮಂತ್ರಿ ಮುದ್ರಾ ಯೋಜನೆ! (mudra Loan scheme)

ಇಂದಿನ ಯುವಕರಿಗೆ 24 ಗಂಟೆ ಆಫಿಸ್ ನಲ್ಲಿ ಕುಳಿತು ಕೆಲಸ ಮಾಡುವುದು ಇಷ್ಟವೇ ಆಗುವುದಿಲ್ಲ ಹಾಗಾಗಿ ಸ್ವಂತದ್ದನಾದರೂ ಉದ್ಯಮ ಮಾಡಿದರೆ ಒಳ್ಳೆಯದು ಎಂದು ಭಾವಿಸುತ್ತಾರೆ. ಆದರೆ ಎಷ್ಟೋ ಜನರಿಗೆ ಸ್ವಂತ ಉದ್ಯಮ ಮಾಡುವುದಕ್ಕೆ ಬಂಡವಾಳ ಹೊಂದಿಸಲು ಕಷ್ಟವಾಗುತ್ತೆ.

ಇದೇ ಕಾರಣಕ್ಕೆ ಆಫೀಸ್ ಗೆ ಹೋಗಿ ದಿನವಿಡೀ ಕಳೆದು ಬರುತ್ತಾರೆ. ಹಾಗೆನಾದ್ರೂ ನಿಮ್ಮಲ್ಲೂ ಸ್ವಂತ ಉದ್ಯಮ ಆರಂಭಿಸುವ ಆಸೆ ಇದ್ರೆ ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಸುಲಭ ಸಾಲ ಪಡೆದುಕೊಳ್ಳಬಹುದು. ಹಾಗೂ ನಿಮ್ಮ ಕನಸಿನ ಉದ್ಯಮವನ್ನು ಅಭಿವೃದ್ಧಿಪಡಿಸಿ ಕೈ ತುಂಬಾ ಸಂಪಾದನೆ ಮಾಡಬಹುದು.

ಉಚಿತ ಮನೆ ಯೋಜನೆ! ಬಡವರಿಗೆ ಮನೆ ಭಾಗ್ಯ; ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ

ಮುದ್ರಾ ಯೋಜನೆಯಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ! (Mudra loan with low interest)

ಹೌದು, ಇಂದಿನ ಯುವಕರು ತಮ್ಮ ಕನಸಿನ ಉದ್ಯಮಕ್ಕೆ ಕೈ ಹಾಕಲು ಬಂಡವಾಳ ಇಲ್ಲದೆ ಹಿಂದೇಟು ಹಾಕುತ್ತಾರೆ ಆದರೆ ಅತಿ ಕಡಿಮೆ ಬಡ್ಡಿ ದರದಲ್ಲಿ ಮುದ್ರಾ ಯೋಜನೆಯ ಅಡಿಯಲ್ಲಿ ಗ್ಯಾರಂಟಿ ಸಾಲವನ್ನು ಪಡೆದುಕೊಳ್ಳಬಹುದು ಇದರಿಂದಾಗಿ ನೀವು ಸುಲಭವಾಗಿ ನಿಮ್ಮ ಉದ್ಯಮ ಆರಂಭಿಸಲು ಸಾಧ್ಯವಿದೆ.

Loan Schemeಮುದ್ರಾ ಯೋಜನೆಯಲ್ಲಿ ಮೂರು ಪ್ರಕಾರಗಳಿವೆ!

2015 ರಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭವಾಯಿತು. ಕಡಿಮೆ ಬಡ್ಡಿ ದರದಲ್ಲಿ ಮೂರು ಹಂತದಲ್ಲಿ ಸಾಲವನ್ನು ಪಡೆಯಬಹುದು..

* ಮೊದಲನೆಯದಾಗಿ ಶಿಶು ಸಾಲ 50,000ಗಳ ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುವುದು.

* ಎರಡನೆಯದಾಗಿ ಕಿಶೋರ್ ಸಾಲ – ಇದರಲ್ಲಿ 50,000 ದಿಂದ 5 ಲಕ್ಷ ರೂಪಾಯಿಗಳ ವರೆಗೆ ಸಾಲ ನೀಡಲಾಗುತ್ತದೆ.

* ಮೂರನೆಯದಾಗಿ ತರುಣ್ ಸಾಲ ಇದರಲ್ಲಿ ಐದು ಲಕ್ಷದಿಂದ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆಯಬಹುದು.

* ಈ ಯೋಜನೆಯಲ್ಲಿ ಸಾಲ ಪಡೆದುಕೊಂಡರೆ ಐದರಿಂದ ಏಳು ಪರ್ಸೆಂಟ್ ವರೆಗೆ ಬಡ್ಡಿ ದರ ಇರುತ್ತದೆ.

* ನಿಮಗೆ 24 ವರ್ಷವಾಗಿದ್ರೆ ನೀವು ಮುದ್ರಾ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು.

ನಾಟಿ ಕೋಳಿ ಸಾಕಾಣಿಕೆಗೆ ಸಿಗುತ್ತಿದೆ ಸಬ್ಸಿಡಿ ಹಣ! ಪ್ರತಿದಿನ 25,000 ಆದಾಯ ಪಕ್ಕಾ

ಮುದ್ರಾ ಯೋಜನೆ ಸಾಲ ಪಡೆಯುವುದು ಹೇಗೆ?

ನಿಮ್ಮ ಬಳಿ ಆಧಾರ್ ಕಾರ್ಡ್ ಇರಬೇಕು, ಪ್ಯಾನ್ ಕಾರ್ಡ್ ಪಾಸ್ಪೋರ್ಟ್, ವಿಳಾಸ ಪುರಾವೆ ,ನಿಮ್ಮ ಉದ್ಯಮದ ಬಗ್ಗೆ ಮಾಹಿತಿ, ವೋಟರ್ ಐಡಿ ಬ್ಯಾಂಕ್ ಖಾತೆಯ ವಿವರ ಮೊದಲಾದ ದಾಖಲೆಗಳನ್ನು ಹೊಂದಿರಬೇಕು.

ಇನ್ನು ಅರ್ಜಿ ಸಲ್ಲಿಸಲು ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗೆ ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಅಥವಾ ಆನ್ಲೈನ್ ಮೂಲಕ https://mudra.org.in ಈ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಯುವಕರೇ, ನೀವೇನಾದರೂ ಸ್ವಂತ ಉದ್ಯಮ ಆರಂಭಿಸಬೇಕು ಅಂದುಕೊಂಡಿದ್ದರೆ ಸರ್ಕಾರ ಗ್ಯಾರಂಟಿ ಬಂಡವಾಳವನ್ನು ಮುದ್ರ ಯೋಜನೆಯ ಅಡಿಯಲ್ಲಿ ಒದಗಿಸುತ್ತದೆ. ಇಂದೇ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟಿದೆ ಮಿನಿಮಮ್ ಬ್ಯಾಲೆನ್ಸ್! ಮತ್ತೆ ನಿಯಮ ಬದಲಾವಣೆ

you will get an interest-free loan to start your own business

Follow us On

FaceBook Google News

you will get an interest-free loan to start your own business