ಭಾರೀ ಮಳೆ ಹಾಗೂ ಪ್ರವಾಹ, ಕಡಪ ಜಿಲ್ಲೆಯಲ್ಲಿ 12 ಮಂದಿ ಸಾವು !
ಕಡಪ ಜಿಲ್ಲೆಯ ರಾಜಂಪೇಟೆಯಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಜೀವಹಾನಿ ಸಂಭವಿಸಿದೆ. ನಂದಲೂರು ಜಲಾನಯನ ಪ್ರದೇಶದ ಮಂದಪಲ್ಲಿ, ಆಕೆಪಾಡು, ನಂದಲೂರು ಭಾಗದಲ್ಲಿ 3 ಆರ್ ಟಿಸಿ ಬಸ್ ಗಳು ಪ್ರವಾಹದ ನೀರಿನಲ್ಲಿ ಸಿಲುಕಿದ್ದು, ಸುಮಾರು 30 ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಬೆಳಗ್ಗಿನಿಂದ ರಕ್ಷಣಾ ಸಿಬ್ಬಂದಿ ಇದುವರೆಗೆ 12 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಂಡ್ಲೂರಿನಲ್ಲಿ 7, ರೈವರಂನಲ್ಲಿ 3 ಮತ್ತು ಮಂದಪಲ್ಲಿಯಲ್ಲಿ 2 ಮೃತದೇಹಗಳು ಪತ್ತೆಯಾಗಿವೆ.
ರಾಜಂಪೇಟೆ ಬಳಿಯ ಅನ್ನಮಯ್ಯ ಜಲಾಶಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಇದರಿಂದಾಗಿ ಜಲಾನಯನ ಪ್ರದೇಶಗಳಲ್ಲಿ ಏಕಾಏಕಿ ಪ್ರವಾಹದ ಹರಿವು ಹೆಚ್ಚಾಯಿತು. ಗುಂಡ್ಲೂರು, ಪುಲಪತ್ತೂರು, ಶೇಷಮಾಂಬಪುರ, ಮಂಡಪಲ್ಲಿ ಗ್ರಾಮಗಳು ಮುಳುಗಡೆಯಾಗಿವೆ.
ಚೇಯೇರು ನದಿಯಿಂದ ನಂದಲೂರು, ರಾಜಂಪೇಟೆ ಮತ್ತಿತರೆಡೆ ಭಾರಿ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ. ಚೇಯೇರು ನದಿಯ ಸುತ್ತಮುತ್ತಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ನಂದಲೂರಿನಲ್ಲಿ ಪ್ರವಾಹದಲ್ಲಿ 30 ಜನರು ಕೊಚ್ಚಿ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ, ಆದರೆ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಹೆಚ್ಚಿನ ಪ್ರಮಾಣದ ಪ್ರವಾಹದಿಂದ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.