ತಂದೆಯ ಕತ್ತು ಕುಯ್ದು ಕೊಂದ 9 ನೇ ತರಗತಿ ವಿದ್ಯಾರ್ಥಿನಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ !

15-year-old Girl Killed Her Father in Bangalore

ತಂದೆಯ ಕತ್ತು ಕುಯ್ದು ಕೊಂದ 9 ನೇ ತರಗತಿ ವಿದ್ಯಾರ್ಥಿನಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ ! – 15-year-old Girl Killed Her Father in Bangalore

ತಂದೆಯ ಕತ್ತು ಕುಯ್ದು ಕೊಂದ 9 ನೇ ತರಗತಿ ವಿದ್ಯಾರ್ಥಿನಿ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ !

ಕನ್ನಡ ನ್ಯೂಸ್ ಟುಡೇ : ಮೊಬೈಲ್ ಚಟಕ್ಕೆ ಬಿದ್ದ ಯುವತಿಯೊಬ್ಬಳು ತನ್ನ ತಂದೆಯನ್ನೇ ಕೊಲೆ ಮಾಡಿರುವುದು ಬೆಂಗಳೂರು ನಗರದ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಮೂಲತಃ ಪಾಂಡಿಚರಿಯ ಜೈನ್ ಕುಟುಂಬ 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ರಾಜಾಜಿನಗರದಲ್ಲಿ ನೆಲೆಸಿತ್ತು.

ಐಷಾರಾಮಿ ಬಂಗಲೆ, ಬೇಕಾದ ಸವಲತ್ತು ಜೊತೆಗೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಕುಟುಂಬದ ಯಜಮಾನ ಜಯಕುಮಾರ್ ಮನೆಯ ಸಮೀಪದಲ್ಲಿಯೇ ಬಟ್ಟೆ ಅಂಗಡಿಯನ್ನು ನಿರ್ವಹಿಸುತ್ತಿದ್ದರು. ಇವರಿಗೆ 9 ನೇ ತರಗತಿ ಓದುತ್ತಿದ್ದ ಮಗಳೂ ಇದ್ದಳು.

ಮಗಳು ಕ್ರಮೇಣ ಫೋನ್ ಚಾಟಿಂಗ್ ಚಟಕ್ಕೆ ಬಿದ್ದು, ಪ್ರತಿ ನಿತ್ಯ ಚಾಟಿಂಗ್ ನಲ್ಲಿಯೇ ಮಗ್ನರಾಗಿರುತ್ತಿದ್ದಳು, ಜೊತೆಗೆ ಈ ನಡುವೆ ಫೋನ್ ಮೂಲಕ ಪರಿಚಿತನಾದ Bcom ಓದುತ್ತಿದ್ದ ಯುವಕನ ಜೊತೆ ಹಗಲು ರಾತ್ರಿಯೆನ್ನದೆ ಚಾಟ್ ಮಾಡುತ್ತಿದ್ದಳು. ವಿಷಯ ತಿಳಿದ ತಂದೆ ಈ ವಯಸ್ಸಿನಲ್ಲಿ ಇದೆಲ್ಲಾ ಏನು ? ಇದು ತಪ್ಪು ಎಂದು ಸ್ವಲ್ಪ ಗಡುಸಾಗಿಯೇ ತಿಳಿಸಿದ್ದಾರೆ. ಅಲ್ಲದೇ ಆ ಹುಡುಗನಿಗೂ ವಾರ್ನಿಂಗ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ, ಆಕೆಯಿಂದ ಫೋನ್ ನಿರ್ಬಂಧಿಸಿದ್ದಾರೆ. ಜೊತೆಗೆ ನಿರಂತರ ಕಣ್ಣಿರಿಸಿ, ಮಗಳ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ವಹಿಸಲು ಪ್ರಾರಂಭಿಸಿದ್ದಾರೆ. ತಂದೆಯ ಈ ವರ್ತನೆ ತನ್ನ ಒಳ್ಳೆಯದಕ್ಕೆ ಎಂದು ತಿಳಿಯದ ಯುವತಿ ಕೆಟ್ಟ ನಿರ್ದಾರಕ್ಕೆ ಮುಂದಾಗಿದ್ದಾಳೆ.

ಬಾಲಕಿಯ ತಾಯಿ, ಮತ್ತು ಆಕೆಯ ಸಹೋದರ ಪಾಂಡಿಚರಿಗೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಾರೆ, ಅವರನ್ನು ಕಳುಹಿಸಿಕೊಡಲು ಮಗಳೂ ಸಹ ಜೊತೆಗೆ ಹೋಗುತ್ತಾಳೆ. ಆದರೆ ಹೋಗುವ ಮೊದಲು ಮನೆಯಲ್ಲಿದ್ದ ತಂದೆಗೆ ಹಾಲಿನಲ್ಲಿ ನಿದ್ರೆ ಮಾತ್ರೆಗಳನ್ನು ಬೆರಸಿಕೊಟ್ಟು ಹೋಗಿದ್ದಾಳೆ.

ತಾಯಿ ಮತ್ತು ಸಹೋದರನನ್ನು ರೈಲಿಗೆ ಹತ್ತಿಸಿ, ಮನೆಗೆ ವಾಪಾಸ್ಸಾಗುವ ಮುನ್ನ ತನ್ನ ಚಾಟಿಂಗ್ ಗೆಳೆಯನನ್ನು ಜೊತೆಗೆ ಕರೆದುಕೊಂಡು ಮನೆಗೆ ಬಂದಿದ್ದಾಳೆ. ಬರುವಷ್ಟರಲ್ಲಿ ಮತ್ತಿನಲ್ಲಿದ್ದ ತಂದೆಯ ಕತ್ತನ್ನು ಇಬ್ಬರೂ ಸೇರಿ ನಿರ್ದಾಕ್ಷಿಣ್ಯವಾಗಿ ಕೊಯ್ದು, ನಂತರ ಬಾತ್ ರೂಮ್ ಗೆ ಎಳೆದೊಯ್ದು ಬೆಂಕಿ ಇಟ್ಟಿದ್ದಾರೆ.

ಬೆಂಕಿಯ ಕಿರುನಾಲಿಗೆ ಮನೆಯಲ್ಲಾ ಆವರಿಸಿ, ಯುವಕ ಮತ್ತು ಯುವತಿಯೂ ಸಹ ತೊಂದರೆಗೆ ಸಿಲುಕಿ ಕೊಂಡಾಗ ನೆರೆಯವರು ಅವರನ್ನು ಕಾಪಾಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು, ಇದು ಅಪಘಾತವಲ್ಲ ಎಂಬ ತೀರ್ಮಾನಕ್ಕೆ ಬಂದು ಯುವತಿಯನ್ನು ಬೇರೆ ಕೋನದಿಂದ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಣಕ್ಕಾಗಿ ಕೊಲೆ, ಆಸ್ತಿಗಾಗಿ ಕೊಲೆ ಹಾಗೂ ಬೇರೆ ಬೇರೆ ಕೊಲೆ ಪ್ರಕರಣಗಳನ್ನೂ ಮೀರಿ ಭಯಾನಕ ಕೃತ್ಯ ಇದಾಗಿದೆ,  15 ವರ್ಷದ ಬಾಲಕಿ ಈ ಕಠೋರ ಮನಸ್ಥಿತಿ ಹೊಂದಿದ್ದಾಳೆ ಎಂದು ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. /////

Web Title : 15-year-old Girl Killed Her Father in Bangalore