ಉತ್ತರ ಪ್ರದೇಶ : ಮನೆಗೆ ನುಗ್ಗಿದ ಬಸ್, 25 ಮಂದಿಗೆ ಗಾಯ

ಉತ್ತರ ಪ್ರದೇಶದ ರೋಡ್‌ವೇಸ್ ಬಸ್ ಸುಮಾರು 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಚಾಲಕ ಸೇರಿದಂತೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ

  • ಉತ್ತರ ಪ್ರದೇಶದ ರೋಡ್‌ವೇಸ್ ಬಸ್ ಸುಮಾರು 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಚಾಲಕ ಸೇರಿದಂತೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ

ಮುಜಫರ್‌ನಗರ: ಏಕಾಏಕಿ ರಸ್ತೆಯ ಮೇಲಿನ ಬಸ್ ಮನೆಗೆ ನುಗ್ಗಿದರೆ ಏನಾಗ ಬೇಕು ಹೇಳಿ ? ಈ ಘಟನೆಯಲ್ಲೂ ಸಹ ಅದೇ ನಡೆದಿದೆ, ಯಾರು ಸಹ ರಸ್ತೆಯ ಮೇಲಿನ ಬಸ್ ಮನೆಗೆ ನುಗ್ಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.

ಶಾಮ್ಲಿ ಜಿಲ್ಲೆಯ ದೆಹಲಿ-ಸಹಾರನ್‌ಪುರ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ, ಏಕಾಏಕಿ ಬಸ್ ಮನೆ ಒಳಗೆ ನುಗ್ಗಿದ ಪರಿಣಾಮ 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶ ರೋಡ್‌ವೇಸ್ ಬಸ್ ಆ ಸಮಯದಲ್ಲಿ ಸುಮಾರು 60 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕ ಸೇರಿದಂತೆ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

25 injured after bus rams into house on highway in Uttar Pradesh

Stay updated with us for all News in Kannada at Facebook | Twitter
Scroll Down To More News Today