Fire At Cow Shelter: ಯುಪಿಯಲ್ಲಿ ಭಾರೀ ಬೆಂಕಿಗೆ 38 ಹಸುಗಳು ಬಲಿ

ಉತ್ತರ ಪ್ರದೇಶದ ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕಣವಾನಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಡಂಪ್ ಯಾರ್ಡ್‌ಗೆ ಹೊತ್ತಿಕೊಂಡ ಬೆಂಕಿ.. ಪಕ್ಕದ ಗೋಶಾಲೆಗಳಿಗೂ ವ್ಯಾಪಿಸಿದೆ. ಇದರಿಂದ 38 ಹಸುಗಳು ಸಾವನ್ನಪ್ಪಿವೆ.

ಲಖನೌ: ಉತ್ತರ ಪ್ರದೇಶದ ಇಂದಿರಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಕಣವಾನಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಡಂಪ್ ಯಾರ್ಡ್‌ಗೆ ಹೊತ್ತಿಕೊಂಡ ಬೆಂಕಿ.. ಪಕ್ಕದ ಗೋಶಾಲೆಗಳಿಗೂ ವ್ಯಾಪಿಸಿದೆ. ಇದರಿಂದ 38 ಹಸುಗಳು ಸಾವನ್ನಪ್ಪಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕೃಷ್ಣ ಗೋಶಾಲೆ ಸಂಚಾಲಕ ಸೂರಜ್ ಪಂಡಿತ್, ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಗೋಶಾಲೆ ಪಕ್ಕದ ಡಂಪ್ ಯಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಗೋಶಾಲೆಗೂ ವ್ಯಾಪಿಸಿತು. ಆಗ ಅಲ್ಲಿ 150 ಹಸುಗಳು ಇದ್ದವು ಎಂದು ಅವರು ಹೇಳಿದರು.

ಈ ಪೈಕಿ 38 ಹಸುಗಳು ಮೃತಪಟ್ಟಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಘಟನೆಯ ತನಿಖೆಗೆ ಪೊಲೀಸರು ಸಮಿತಿಯನ್ನು ರಚಿಸಿದ್ದಾರೆ.’

38 Cows Killed In Fire At Cow Shelter In Uttar Pradesh

Follow Us on : Google News | Facebook | Twitter | YouTube