ಮುಂದ್ರಾ ಬಂದರಿನ ಬಳಿ 500 ಕೋಟಿ ಮೌಲ್ಯದ ಕೊಕೇನ್ ವಶ
ಮುಂದ್ರಾ ಬಂದರಿನ ಬಳಿ ಕಂಟೈನರ್ ನಿಂದ 500 ಕೋಟಿ ಮೌಲ್ಯದ 56 ಕೆಜಿ ಕೊಕೇನ್ ವಶ
ಅಹಮದಾಬಾದ್: ಗುಜರಾತ್ನ ಕಚ್ ಜಿಲ್ಲೆಯ ಮುಂದ್ರಾ ಬಂದರಿನ ಬಳಿ ಕಂಟೈನರ್ನಲ್ಲಿದ್ದ ಸುಮಾರು 56 ಕೆಜಿ ಕೊಕೇನ್ ಅನ್ನು ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಕೊಕೇನ್ನ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಖರ ಮಾಹಿತಿ ಮೇರೆಗೆ ಡಿಆರ್ ಐ ಅಧಿಕಾರಿಗಳ ತಂಡ ತಪಾಸಣೆ ನಡೆಸಿ ಕೆಲ ಸಮಯದ ಹಿಂದೆ ವಿದೇಶದಿಂದ ಮುಂದ್ರಾ ಬಂದರಿಗೆ ಬಂದಿದ್ದ ಕಂಟೈನರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಡಿಆರ್ಐ ಅಧಿಕಾರಿಗಳು ಜಿಲ್ಲೆಯ ಕಾಂಡ್ಲಾ ಬಂದರಿನ ಬಳಿ ಕಂಟೈನರ್ ನಿಲ್ದಾಣದ ಮೇಲೆ ದಾಳಿ ನಡೆಸಿ 1,300 ಕೋಟಿ ಮೌಲ್ಯದ 260 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದರು.
ಸೆಪ್ಟೆಂಬರ್ ಮತ್ತು ಅಕ್ಟೋಬರ್ 2021 ರ ನಡುವೆ, ಇರಾನ್ನಿಂದ ಕಾಂಡ್ಲಾ ಬಂದರಿಗೆ 17 ಮಾದಕದ್ರವ್ಯದ ಕಂಟೈನರ್ಗಳು ಬಂದಿವೆ. ಇತ್ತೀಚೆಗೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಡಿಆರ್ಐ ಅಧಿಕಾರಿಗಳು ಜಂಟಿಯಾಗಿ ಅಮ್ರೇಲಿ ಜಿಲ್ಲೆಯ ಪಿಪಾವಾವ್ ಬಂದರಿನಲ್ಲಿ 450 ಕೋಟಿ ರೂಪಾಯಿ ಮೌಲ್ಯದ 90 ಕೆಜಿ ಹೆರಾಯಿನ್ ಅನ್ನು ಶಿಪ್ಪಿಂಗ್ ಕಂಟೈನರ್ನಿಂದ ವಶಪಡಿಸಿಕೊಂಡಿದ್ದಾರೆ.
56 Kg Of Cocaine Worth Rs 500 Crore Seized From Container Near Mundra Port
Follow Us on : Google News | Facebook | Twitter | YouTube