ಭೀಕರ ಅಪಘಾತ : ಡಿವೈಡರ್’ಗೆ ಕಾರು ಡಿಕ್ಕಿ, 6 ಮಂದಿ ಸಾವು

6 people died in Deadly Car Accident Near Gadag

ಭೀಕರ ಅಪಘಾತ : ಡಿವೈಡರ್’ಗೆ ಕಾರು ಡಿಕ್ಕಿ, 6 ಮಂದಿ ಸಾವು

6 people died in Deadly Car Accident Near Gadag

ಗದಗ : ಇಂದು ಮುಂಜಾನೆ ಕೊಪ್ಪಳ ರಸ್ತೆಯ ಅಡವಿ‌ಸೋಮಾಪುರ ಬಳಿ ಭೀಕರ ರಸ್ತೆ ಅಪಘಾತ, ಅಪಘಾತದಲ್ಲಿ ಸ್ಥಳದಲ್ಲೇ 6 ಜನರ ದುರ್ಮರಣ, 4 ಜನರಿಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು

ಡಿವೈಡರ್​ಗೆ ಡಿಕ್ಕಿ ಹೊಡೆದ ಕಾರು ಬಳಿಕ, ಎದುರು ಬರುತ್ತಿದ್ದ  ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಪರಿಣಾಮ  ಸ್ಥಳದಲ್ಲಿಯೇ 6 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತಪಟ್ಟವರನ್ನು ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಅಗಸಿ ನಿವಾಸಿಗಳಾದ ಆನಂದ ಬೆಟಗೇರಿ, ಸಿದ್ದು ಕೋರಿಶೆಟ್ಟಿ, ಅಮೃತಾ, ಮನೋಜ ಕುಮಾರ್​ ಕರಡಿಗುಡ್ಡ, ಚನ್ನು ವಾಡದ್ , ಅಮೃತ ಎಂದು ಗುರುತಿಸಲಾಗಿದೆ.

ಮದುವೆ ಮುಗಿಸಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದ  ಕಾರಿಗೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಕಾರು ಡಿವೈಡರ್‍ಗೆ ಡಿಕ್ಕಿ ಹೊಡೆದ ನಂತರ ಡಿಕ್ಕಿಯಿಂದಾಗಿ ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಇನ್ನೊಂದು ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಕಾರಿನಿಂದ ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರ ಸಾಹಸ ಪಡಬೇಕಾಯಿತು.

ಭೀಕರ ಅಪಘಾತದ ಪರಿಣಾಮ ಕೆಲ ಕಾಲ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತು.  ಜೊತೆಗೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.////

WebTitle : ಭೀಕರ ಅಪಘಾತ : ಡಿವೈಡರ್’ಗೆ ಕಾರು ಡಿಕ್ಕಿ, 6 ಮಂದಿ ಸಾವು – 6 people died in Deadly Car Accident Near Gadag

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : Karnataka Crime NewsKannada Crime News