Crime News
Hut Catches Fire: ಗುಡಿಸಲಿಗೆ ಹೊತ್ತಿಕೊಂಡ ಬೆಂಕಿ.. ಏಳು ಮಂದಿ ಸಜೀವ ದಹನ
ಅಮೃತಸರ: ಪಂಜಾಬ್ ನ ಲುಧಿಯಾನದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನವಾಗಿದ್ದಾರೆ.
ಲೂಧಿಯಾನದ ಟಿಬ್ಬಾ ರಸ್ತೆಯಲ್ಲಿರುವ ಪುರಸಭೆಯ ಕಸದ ಡಂಪ್ ಯಾರ್ಡ್ ಬಳಿಯ ಗುಡಿಸಲಿನಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಏಳು ಜನರು ಬೆಂಕಿಗೆ ಆಹುತಿಯಾಗಿದ್ದರೆ. ಮೃತರಲ್ಲಿ ಐವರು ಮಕ್ಕಳೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲುಧಿಯಾನ ಸಹಾಯಕ ಕಮಿಷನರ್ (ಪೂರ್ವ) ಸುರೀಂದರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ, “ಅವರು ತಮ್ಮ ಗುಡಿಸಲಿನಲ್ಲಿ ಅವರ ಪೋಷಕರು ಸೇರಿದಂತೆ ಐವರು ಮಕ್ಕಳು ಮಲಗಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಅವರೆಲ್ಲರೂ ಉದ್ಯೋಗಕ್ಕಾಗಿ ಲುಧಿಯಾನಕ್ಕೆ ವಲಸೆ ಬಂದಿದ್ದ ಕಾರ್ಮಿಕರು” ಎಂದು ಹೇಳಿದರು.
ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ ಮತ್ತು ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
7 Of Family Charred To Death As Hut Catches Fire In Punjab Ludhiana