Pani Puri: ಪಾನಿಪುರಿ ತಿಂದ 77 ಜನರು ಅಸ್ವಸ್ಥ, ಆಸ್ಪತ್ರೆಗೆ ಸೇರಿಸಿದ ಅಧಿಕಾರಿಗಳು
Pani Puri: ಪಾನಿಪುರಿ ಎಷ್ಟೇ ಚಿಕ್ಕದಾದರೂ ಎಲ್ಲರಿಗೂ ಪ್ರಿಯವಾದ ತಿಂಡಿ. ಪಾನಿಪುರಿ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ? ಆದರೆ ಇಲ್ಲೊಂದು ಘಟನೆಯಲ್ಲಿ ಇದನ್ನು ತಿಂದಿದ್ದಕ್ಕಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.
Pani Puri: ಪಾನಿಪುರಿ ಎಷ್ಟೇ ಚಿಕ್ಕದಾದರೂ ಎಲ್ಲರಿಗೂ ಪ್ರಿಯವಾದ ತಿಂಡಿ. ಪಾನಿಪುರಿ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ? ಆದರೆ ಇಲ್ಲೊಂದು ಘಟನೆಯಲ್ಲಿ ಇದನ್ನು ತಿಂದಿದ್ದಕ್ಕಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಛತ್ತೀಸ್‌ಗಡದ ಗಟಾಪರ್ ಕಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯ ಇತ್ತೀಚಿನ ಮಾರುಕಟ್ಟೆಯಲ್ಲಿ ಪಾನಿಪುರಿ ತಿಂದ 77 ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಈ ಪೈಕಿ 57 ಅಪ್ರಾಪ್ತರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಮೊದಲು ಅವರನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
ಆಹಾರ ವಿಷದಿಂದ ಇವರೆಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರಿಗೆ ಹೊಟ್ಟೆ ನೋವು ಇನ್ನೂ ಕೆಲವರಿಗೆ ವಾಂತಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅವರಲ್ಲಿ 26 ಜನರನ್ನು ಚಿಕಿತ್ಸೆಯ ನಂತರ ಡಿಶ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow us On
Google News |