ಆಸ್ಪತ್ರೆ ಲಿಫ್ಟ್ ಕುಸಿದು ಒಂಬತ್ತು ವೈದ್ಯರಿಗೆ ಗಾಯ

ಮುಂಬೈ: ಆಸ್ಪತ್ರೆಯೊಂದರಲ್ಲಿ ಲಿಫ್ಟ್ ಕುಸಿದಿದೆ. ಘಟನೆಯಲ್ಲಿ ಒಂಬತ್ತು ವೈದ್ಯರು ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ನ್ಯೂ ಪನ್ವೆಲ್ ಸಿಟಿಯ ಆಮ್ಲೆ ಆಸ್ಪತ್ರೆಯಲ್ಲಿ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.

ಕೆಲವು ವೈದ್ಯರು ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಊಟ ಮಾಡಿದ ನಂತರ ಅವರು ನೆಲ ಮಹಡಿ ತಲುಪಲು ಲಿಫ್ಟ್ ಹತ್ತಿದ್ದಾರೆ… ಆದರೆ, ಎರಡನೇ ಮಹಡಿ ತಲುಪಿದಾಗ ಲಿಫ್ಟ್‌ನ ಲೋಹದ ಹಗ್ಗ ತುಂಡಾಗಿ ವೇಗವಾಗಿ ನೆಲಕ್ಕೆ ಅಪ್ಪಳಿಸಿದೆ.

ಆಸ್ಪತ್ರೆ ಲಿಫ್ಟ್ ಕುಸಿದು ಒಂಬತ್ತು ವೈದ್ಯರಿಗೆ ಗಾಯ

ಲಿಫ್ಟ್ ಅಪಘಾತದ ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ಧಾವಿಸಿದರು. ಲಿಫ್ಟ್‌ನಲ್ಲಿ ಸಿಲುಕಿದ್ದ ವೈದ್ಯರನ್ನು ರಕ್ಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಒಂಬತ್ತು ವೈದ್ಯರನ್ನು ಚಿಕಿತ್ಸೆಗಾಗಿ ಮತ್ತೊಂದು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಆದರೆ, ಗಾಯಗೊಂಡಿರುವ ವೈದ್ಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿತಿಗಿಂತ ಹೆಚ್ಚು ಜನರು ಲಿಫ್ಟ್‌ಗೆ ಏರಿದ್ದರಿಂದ ಓವರ್‌ಲೋಡ್‌ನಿಂದ ಲೋಹದ ಹಗ್ಗ ತುಂಡಾಗಿದೆ ಎಂದು ಅವರು ಹೇಳಿದರು. ಅಪಘಾತಕ್ಕೆ ಇದೇ ಕಾರಣ ಎಂದು ತಿಳಿದುಬಂದಿದೆ.

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ