ಕ್ಷುಲಕ‌ ಕಾರಣಕ್ಕೆ ಬಿಹಾರ ಮೂಲದ ಯುವಕನನ್ನು ಆತನ ಸ್ನೇಹಿತನೇ ಕೊಲೆ ಮಾಡಿ ಪರಾರಿ

A Bihar-based youth murdered by his friend

ಹುಬ್ಬಳ್ಳಿ: ಕ್ಷುಲಕ‌ ಕಾರಣಕ್ಕೆ ಬಿಹಾರ ಮೂಲದ ಯುವಕನನ್ನು ಆತನ ಸ್ನೇಹಿತನೇ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಲ್ಲಿನ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಮೃತನನ್ನು ಬಿಹಾರ ಮೂಲದ ಮೊಹ್ಮದ್ ನದೀಮ್ (23) ಎಂದು ಗುರುತಿಸಲಾಗಿದೆ. ಈತ ಗಾಮನಗಟ್ಟಿಯ ರಾಜಲಕ್ಷ್ಮೀ ಇಂಡಸ್ಟ್ರೀಸ್ ಹೆಸರಿನ ಕಂಪನಿಯಲ್ಲಿ ಕುಕ್ಕರ್ ತಯಾರಿಸುವ ಕೆಲಸ ಮಾಡುತ್ತಿದ್ದ.

ಈತನ ಜೊತೆಗೆ ಬಿಹಾರ ಮೂಲದ ಭವನಕುಮಾರ ಎಂಬಾತ ಕೆಲಸ ಮಾಡುತ್ತಿದ್ದು, ಇಬ್ಬರು ಒಂದೇ ರೂಂ‌ನಲ್ಲಿ ವಾಸವಾಗಿದ್ದರು. ಫೆ. 16 ರ ರಾತ್ರಿ ಕ್ಷುಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಮೊಹ್ಮದ್ ನದೀಮ್ ತಲೆಗೆ, ಭವನಕುಮಾರ್ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಂಗಳವಾರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.