ಬಾವಿಗೆ ಬಿದ್ದ ಬಾಲಕ.. ರಕ್ಷಿಸಲು ಅಧಿಕಾರಿಗಳ ಯತ್ನ

ಬಾಲಕನೊಬ್ಬ ಆಳವಾದ ಬಾವಿಗೆ ಬಿದ್ದ ಘಟನೆ ನಡೆದಿದೆ. ಮಗುವನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಭೋಪಾಲ್: ಬಾಲಕನೊಬ್ಬ ಆಳವಾದ ಬಾವಿಗೆ ಬಿದ್ದ ಘಟನೆ ನಡೆದಿದೆ. ಮಗುವನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಲಾಲಾಬಾಗ್ ಅರಮನೆ ಬಳಿಯ ಆಳವಾದ ಪುರಾತನ ಬಾವಿಗೆ ಸೋಮವಾರ ಬಾಲಕನೊಬ್ಬ ಬಿದ್ದಿದ್ದಾನೆ. ಇದರಿಂದ ಅವರ ಕುಟುಂಬಸ್ಥರು ಆತಂಕಗೊಂಡಿದ್ದರು. ಮಾಹಿತಿ ಪಡೆದ ಪೊಲೀಸರು ರಕ್ಷಣಾ ತಂಡಗಳನ್ನು ಕರೆಹಿಸಿದರು.

ಎಸ್‌ಡಿಆರ್‌ಎಫ್ ತಂಡ ಬಾವಿಗೆ ಇಳಿದು ಬಾಲಕನಿಗಾಗಿ ಹುಡುಕಾಟ ನಡೆಸಿದೆ ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವಿಶಾಲ್ ನಾಗ್ವೆ ತಿಳಿಸಿದ್ದಾರೆ. ಮತ್ತೊಂದೆಡೆ ವಿಷಯ ತಿಳಿದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು. ಬಾಲಕನನ್ನು ಬಾವಿಯಿಂದ ಹೊರತೆಗೆಯುವುದನ್ನು ಕುತೂಹಲದಿಂದ ನೋಡುತ್ತಿದ್ದರು.

Stay updated with us for all News in Kannada at Facebook | Twitter
Scroll Down To More News Today