Welcome To Kannada News Today

ಶಾಕಿಂಗ್, ಮಗು ಮೇಲೆ ಹಂದಿ ದಾಳಿ, ಸ್ಥಳದಲ್ಲೇ ಅಸುನೀಗಿದ ಕಂದಮ್ಮ

A drift of pigs attacked and killed a toddler in Saidabad

ಹೈದರಾಬಾದ್: ಹೈದರಾಬಾದ್‌ನ ಸೈದಾಬಾದ್‌ನಲ್ಲಿ ಏಪ್ರಿಲ್ 21 ರಂದು ಹಂದಿಗಳ ಗುಂಪು ಅಂಬೆಗಾಲಿಡುವ ಮಗುವಿನ ಮೇಲೆ ಹಲ್ಲೆ ನಡೆಸಿ ಮಗು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ನಡೆದಿದೆ.

ಮಂಗಳವಾರ, ಬಾಲಕ ತನ್ನ ಮನೆಯೊಳಗೆ ಆಟವಾಡುತ್ತಿದ್ದಾಗ, ತಾಯಿ ಬಟ್ಟೆ ಒಗೆಯಲು ಹೊರಗೆ ಬಂದಿದ್ದಾಳೆ. ಸ್ವಲ್ಪ ಹೊತ್ತು ಮನೆಯಲ್ಲಿಯೇ ಆಡುತ್ತಿದ್ದ ಮಗು, ಸ್ವಲ್ಪ ಹೊತ್ತಿನ ಬಳಿಕ ಅಮ್ಮನ ನೆನಪಾಗಿ, ಅವಳನ್ನು ಹುಡುಕುತ್ತಾ ಮನೆಯಿಂದ ಹೊರಬಂದಾಗ ಹಂದಿಗಳು ಇದ್ದಕ್ಕಿದ್ದಂತೆ ಮಗುವಿನ ಮೇಲೆ ಎರಗಿವೆ. ಮಗುವಿನ ಅಳು ತಾಯಿಯ ಕಿವಿಗೆ ಬಿತ್ತಾದರೂ  ಅಸಹಾಯಕ ತಾಯಿಗೆ ಮಗುವಿನ ರಕ್ಷಣೆ ಮಾಡಲು ಸಾಧ್ಯವಾಗವಿಲ್ಲ ಎಂದು ಪ್ರತ್ಯಕ್ಷ ದರ್ಶಿ ತಿಳಿಸಿದ್ದಾರೆ.

ಹಂದಿಗಳ ಏಕಾಏಕಿ ದಾಳಿಯಿಂದ ಮಗುವಿನ ದೇಹದ ಮೇಲೆ ತೀವ್ರ ಗಾಯಗಳು, ಹಾಗೂ ಹೊಟ್ಟೆಯ ಭಾಗದಲ್ಲಿ ಆಳವಾಗಿ ಪೆಟ್ಟಾಗಿ ರಕ್ತಸ್ರಾವದಿಂದ ಮಗು ಸ್ಥಳದಲ್ಲೇ ಮೃತಪಟ್ಟಿತು, ತಾಯಿಯ ಕಣ್ಣ ಮುಂದೆಯೇ ಮಗು ಹೊದ್ದಾಡುತ್ತಾ ಪ್ರಾಣಬಿಟ್ಟಿತ್ತು. ತೀವ್ರ ಗಾಯಗಳು ಮತ್ತು ಅಧಿಕ ರಕ್ತಸ್ರಾವದಿಂದ ಮಗು ಸಾವನ್ನಪ್ಪಿತ್ತು.

ಮೃತ ಮಗುವನ್ನು ಹರ್ಷವರ್ಧನ್ ಎಂದು ಗುರುತಿಸಲಾಗಿದೆ. ಅವರ ಕುಟುಂಬ ಜೀವನೋಪಾಯಕ್ಕಾಗಿ ರಂಗರೆಡ್ಡಿ ಜಿಲ್ಲೆಯ ಕಡ್ತಾಲ್‌ನಿಂದ ನಗರಕ್ಕೆ ವಲಸೆ ಬಂದಿದ್ದರು. ಈ ಘಟನೆ ನಡೆದದ್ದು ಸೈದಾಬಾದ್‌ನ ಸಿಂಗರೇನಿ ಕಾಲೋನಿಯಲ್ಲಿ.

ಸ್ಥಳೀಯರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಪ್ರದೇಶದ ಹಂದಿಗಳ ಚಲನೆಯನ್ನು ನಿಯಂತ್ರಿಸುವಲ್ಲಿ ವಿಫಲವಾದ ನಾಗರಿಕ ಸಂಸ್ಥೆ ಮತ್ತು ಸರ್ಕಾರದ ನಿರ್ಲಕ್ಷ್ಯವನ್ನು ದೂಷಿಸಿದರು. ” ನಾವು ಹಲವಾರು ಬಾರಿ ಹಂದಿ ಭೀತಿಯ ಬಗ್ಗೆ ದೂರು ನೀಡಿದ್ದೇವೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಾಲಕ ಇಂದು ಸಾವನ್ನಪ್ಪಿದ್ದಾನೆ, ”ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಕೊಳೆಗೇರಿಗಳು ಇದ್ದು, ಹಂದಿ ಮತ್ತು ಬೀದಿ ನಾಯಿ ಭೀತಿಯನ್ನು ಎದುರಿಸುತ್ತಿವೆ ಮತ್ತು ಸರ್ಕಾರವು ಅವುಗಳ ಮೇಲೆ ಕ್ರಮಕೈಗೊಳ್ಳದಿದ್ದರೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗಬಹುದು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಸೈದಾಬಾದ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Contact for web design services Mobile