ಅಥಣಿಯಲ್ಲಿ ಮತ್ತೊಂದು ಭೀಕರ ಅಪಘಾತ, ವ್ಯಕ್ತಿ ಸಾವು!
ಅಥಣಿಯಲ್ಲಿ ಮತ್ತೊಂದು ಭೀಕರ ಕಾರು ಅಪಘಾತ ನಡೆದಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ವ್ಯಕ್ತಿ ಸಾವನ್ನಪಿದ್ದಾರೆ.
ಅಥಣಿ (Athani) : ಶಾಲಾ ಬಸ್ ಅಪಘಾತವಾಗಿ (Accident) ಇಬ್ಬರು ಚಾಲಕರು ಮೃತಪಟ್ಟ ಘಟನೆ ಬೆನ್ನಲ್ಲೇ ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಪಕ್ಕದ ಆಲದ ಮರ ಹತ್ತಿರ ಭಾನುವಾರ ಬೆಳಿಗ್ಗೆ ಭೀಕರ ಕಾರು ಅಪಘಾತ ಸಂಭವಿಸಿದೆ.
ಜಮಖಂಡಿ ತಾಲೂಕಿನ ತಮದಡ್ಡಿ ಗ್ರಾಮದ ಸುರೇಂದ್ರ ಮಲ್ಲಣ್ಣವರ (60) ವ್ಯಕ್ತಿ ಅಥಣಿ ತಾಲೂಕಿನ ಐನಾಪುರ ಗ್ರಾಮಕ್ಕೆ ಕಾಮಾಲೆ ಔಷಧ ತಗೆದುಕೊಂಡು ಬರುವಾಗ ಕೃಷ್ಣಾ ಶುಗರ್ ಪಕ್ಕ ಈ ಅವಘಡ ಸಂಭವಿಸಿದೆ.
ರಸ್ತೆ ಬಿಟ್ಟು ಸುಮಾರು ಇನ್ನೂರು ಅಡಿ ಗೋವಿನ ಜೋಳದ ತೋಟದಲ್ಲಿ ಕಾರು ಪಲ್ಟಿಯಾಗಿ ಬಿದ್ದಿದೆ. ಏರ್ ಬ್ಯಾಗ್ ಬಿಚ್ಚಿದ್ದರು ಚಾಲಕ ಸಾವನ್ನಿಪ್ಪಿದ್ದು ದುರದೃಷ್ಟಕರ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
A man died in a horrific car accident in Athani
ವರದಿ.. ಬಸವರಾಜ ಖೇಮಲಾಪುರ
Follow us On
Google News |
Advertisement