ಅಕ್ರಮ ಗಾಂಜಾ ಸಾಗಾಣಿಕೆ – ಓರ್ವನ ಬಂಧನ

A man who Carrying marijuana is arrested in Shimoga

ಕನ್ನಡ ನ್ಯೂಸ್ ಟುಡೇ

ಶಿವಮೊಗ್ಗ : ಶಿವಮೊಗ್ಗ ತಾಲೂಕಿನ ಮೂಡಲಮನೆ ಅರಣ್ಯ ರಕ್ಷಣಾ ಶಿಬಿರ ಸಿಂಗನಬಿದರೆ, ಮಂಡಗದ್ದೆ ಶಾಖೆ, ತೀರ್ಥಹಳ್ಳಿ ಉಪ ವಿಭಾಗದ ಮುಂಭಾಗದಲ್ಲಿ ಅಂದಾಜು 25000/- ರೂ ಮೌಲ್ಯದ 260 ಗ್ರಾಂ ಒಣ ಗಾಂಜಾವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಮಂಜುನಾಥ ಬಿನ್ ಡಿ.ರಾಜು ಎಂಬುವವರನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಧರ್ಮಪ್ಪ ಕೆ.ಟಿ., ಅಬಕಾರಿ ನಿರೀಕ್ಷಕಿ ಶೀಲಾ ಧಾರಜಕರ್, ಶಿವಮೊಗ್ಗ ವಲಯ-1 ಅಬಕಾರಿ ಉಪ ನಿರೀಕ್ಷಕರಾದ ದಿವ್ಯಾ ಯು. ಮತ್ತು ಹಾಲಾನಾಯ್ಕ್, ಅಬಕಾರಿ ರಕ್ಷಕರಾದ ಕೆಂಪರಾಮು, ಮಧುಸೂಧನ್ ಬಿ.ಸಿ. ಮತ್ತು ಪ್ರಭು ಸಿ ಮತ್ತಿತರ ಅಬಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.////