ಮಗನ ಮುಂದೆಯೇ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ತನ್ನ ಮಗನ ಮುಂದೆಯೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ನದಿಗೆ ಎಸೆದ ಧುರುಳರು

ಬಿಹಾರದಲ್ಲಿ ಈ ಪೈಶಾಚಿಕ ಘಟನೆ ನಡೆದಿದ್ದು, ತನ್ನ ಮಗನೊಂದಿಗೆ ಬ್ಯಾಂಕ್ ಗೆ ಹೋಗುತ್ತಿದ್ದ ಮಹಿಳೆಯನ್ನು ಹೊತ್ತೊಯ್ದ ಕಾಮುಕರು ಮಗನ ಮುಂದೆಯೇ ವಿವಾಹಿತೆ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಮಗನೊಂದಿಗೆ ಆಕೆಯನ್ನು ಕಟ್ಟಿ ನದಿಗೆ ಎಸೆಡಿದ್ದಾರೆ. ಮಹಿಳೆಯ ಕಿರುಚಾಟ ಕೇಳಿ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದರಾದರೂ ಬಾಲಕನನ್ನು ರಕ್ಷಿಸಲಾಗಲಿಲ್ಲ.

( Kannada News ) : ಪಾಟ್ನಾ : ಬಿಹಾರದಲ್ಲಿ ಪೈಶಾಚಿಕ ಕೃತ್ಯ ನಡೆದಿದ್ದು, ವಿವಾಹಿತ ಮಹಿಳೆಯೊಬ್ಬಳನ್ನು ಕಾಮುಕರು ಮಗನ ಮುಂದೆಯೇ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನಂತರ ಅವಳು ಮತ್ತು ಅವಳ ಐದು ವರ್ಷದ ಮಗನನ್ನು ಕಟ್ಟಿಹಾಕಿ ನದಿಗೆ ಎಸೆಡಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಕಿರುಚಾಟ ಕೇಳಿ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದರಾದರೂ ಬಾಲಕನನ್ನು ರಕ್ಷಿಸಲಾಗಲಿಲ್ಲ. ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಬಕ್ಸಾರ್‌ನಲ್ಲಿ ನಡೆದಿದೆ. ತನ್ನ ಮಗನೊಂದಿಗೆ ವಿವಾಹಿತ ಬ್ಯಾಂಕ್‌ಗೆ ಹೋಗುವಾಗ ಇಬ್ಬರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲಾಯಿತು.

ಅವಳ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿದ ನಂತರ ಅಪರಾಧದಿಂದ ಪಾರಾಗಲು ಇಬ್ಬರನ್ನು ಕಟ್ಟಿ ನದಿಗೆ ಎಸೆಯಲಾಯಿತು. ಸದ್ಯ ಬಾಲಕನ ಶವ ಪತ್ತೆಯಾಗಿದೆ. ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಉಳಿದವರ ಬೇಟೆಗೆ ಪೊಲೀಸರು ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.

ಮಗನ ಮುಂದೆಯೇ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಧ್ಯ ವ್ಯಾಪಕ ಖಂಡನೆಗೆ ಕಾರಣವಾಗಿದೆ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

Scroll Down To More News Today