ಅರ್ಚಕನ ಹ್ಯೇಯ ಕೃತ್ಯ, ಅತ್ಯಾಚಾರಗೈದು ಲಕ್ಷಾಂತರ ವಂಚನೆ

ದೇವಸ್ಥಾನದ ಅರ್ಚಕರೊಬ್ಬರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಲಕ್ಷಾಂತರ ರೂ. ಹಾಗೂ ಚಿನ್ನಾಭರಣ ವಂಚಿಸಿರುವ ಘಟನೆ ಹರಿಯಾಣದ ಹಿಸಾರ್ (Hisar, Haryana) ನಲ್ಲಿ ಈ ಘಟನೆ ನಡೆದಿದೆ.

Online News Today Team

ಚಂಡೀಗಢ (Chandigarh): ದೇವಸ್ಥಾನದ ಅರ್ಚಕರೊಬ್ಬರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಲಕ್ಷಾಂತರ ರೂ. ಹಾಗೂ ಚಿನ್ನಾಭರಣ ವಂಚಿಸಿರುವ ಘಟನೆ ಹರಿಯಾಣದ ಹಿಸಾರ್ (Hisar, Haryana) ನಲ್ಲಿ ಈ ಘಟನೆ ನಡೆದಿದೆ.

ಅರ್ಚಕ ನರೇಶ್ ಅತ್ಯಾಚಾರಗೈದ ಆರೋಪಿ. ಆತ ಸಂತ್ರಸ್ತೆಯ ನೆರೆಹೊರೆಯಲ್ಲಿ ವಾಸವಾಗಿದ್ದು (He lived in the victim’s neighborhood), ಅಲ್ಲಿಯೇ ಸಮೀಪದಲ್ಲೇ ಮನೆಯೊಂದನ್ನು ಖರೀದಿಸಿದ್ದನು. ಈ ವೇಳೆ ಸಂತ್ರಸ್ತೆಯ ಮನೆಗೆ ಆಗಾಗ ಭೇಟಿ ನೀಡಲು ಆರಂಭಿಸಿದ್ದನು.

ಆರೋಪಿಯು ಒಂದು ದಿನ ಮಹಿಳೆ ಮತ್ತು ಅವರ ಅತ್ತೆಯನ್ನು ದೇವಸ್ಥಾನಕ್ಕೆ (temple) ಕರೆದುಕೊಂಡು ಹೋಗಿದ್ದನು. ಈ ವೇಳೆ ನಿಮ್ಮ ಕುಟುಂಬ ಸಂಕಷ್ಟದಲ್ಲಿದೆ ಪೂಜೆಯಿಂದ ನೋವು ನಿವಾರಣೆಯಾಗುತ್ತದೆ ಎಂದಿದ್ದನು. ಆ ನಂತರ ಮಹಿಳೆಯ ಮನೆಗೆ ಅವನ ಭೇಟಿ ಹೆಚ್ಚಾಯಿತು. ಒಂದು ದಿನ ಆತ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿ ಅಶ್ಲೀಲ ವೀಡಿಯೋ (pornographic video) ಕೂಡ ಮಾಡಿದ್ದನು.

ಅರ್ಚಕನ ಹ್ಯೇಯ ಕೃತ್ಯ, ಅತ್ಯಾಚಾರಗೈದು ಲಕ್ಷಾಂತರ ವಂಚನೆ

ಮಹಿಳೆಯ ಪತಿ ಸಿಆರ್‍ಪಿಎಫ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ (woman’s husband works at CRPF). ಅವರನ್ನು ಬೇರೆ ರಾಜ್ಯದಲ್ಲಿ ನಿಯೋಜಿಸಲಾಗಿದೆ. ಇದರ ಲಾಭ ಪಡೆದ ಅರ್ಚಕ ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ (priest commits rape). ಗಲಾಟೆ ಮಾಡಿದರೆ, ದೂರು ಕೊಟ್ಟರೆ ಸಾಯಿಸುತ್ತೇನೆ ಅಂತ ಕೂಡಾ ಹೆದರಿಸಿದ್ದನು. ತನ್ನಲ್ಲಿರುವ ಆ ಅಶ್ಲೀಲ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಒಂದು ಲಕ್ಷ 15 ಸಾವಿರ ರೂ. ಹಾಗೂ ಚಿನ್ನಾಭರಣವನ್ನೂ ವಂಚಿಸಿದ್ದನು ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ (A rape case has been registered). ಈ ಪ್ರಕರಣದಲ್ಲಿ ಅತ್ಯಾಚಾರ ಸೇರಿದಂತೆ ಇತರೆ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಮೇಲೆ ಅರ್ಚಕನಿಂದ ಅತ್ಯಾಚಾರ

ವಾಮಾಚಾರದ ಭಯವನ್ನೂ ತೋರಿಸಿ ರೂಪಾಯಿ ಸುಲಿಗೆ ಮಾಡಿದ್ದಾರೆ. ಈ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಂದು ಹಿಸಾರ್‍ನ ಆಜಾದ್ ನಗರ ಪೊಲೀಸ್ ಠಾಣೆ ಪ್ರಭಾರಿ ಸದಾನಂದ್ ಆಜಾದ್ ತಿಳಿಸಿದ್ದಾರೆ.

ಘಟನೆಯು ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ (The incident took place at Azad city police station in Hisar).

Follow Us on : Google News | Facebook | Twitter | YouTube