ಕಂಡಕ್ಟರ್ ನಗದು ಬ್ಯಾಗ್ ಎಗರಿಸದ ಕಳ್ಳ, ಯದ್ವಾತದ್ವ ಬಾರಿಸಿದ ಜನರು

A thief Robbery conductor's cash bag in KSRTC Bus at Bangalore

ಕಂಡಕ್ಟರ್ ನಗದು ಬ್ಯಾಗ್ ಎಗರಿಸದ ಕಳ್ಳ, ಯದ್ವಾತದ್ವ ಬಾರಿಸಿದ ಜನರು – A thief Robbery conductor’s cash bag in KSRTC Bus at Bangalore

ಕಂಡಕ್ಟರ್ ನಗದು ಬ್ಯಾಗ್ ಎಗರಿಸದ ಕಳ್ಳ, ಯದ್ವಾತದ್ವ ಬಾರಿಸಿದ ಜನರು

ಕನ್ನಡ ನ್ಯೂಸ್ ಟುಡೇ – ಬೊಮ್ಮನಹಳ್ಳಿ : ಪ್ರಯಾಣಿಕನ ಸೋಗಿನಲ್ಲಿ ಹೋಗಿ ಕಂಡಕ್ಟರ್ ಕ್ಯಾಶ್ ಬ್ಯಾಗ್ ಎಗರಿಸಿದ ಕಳ್ಳನನ್ನು ಸಾರ್ವಜನಿಕರು ಹಿಡಿದು ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆನೇಕಲ್ ನಿಂದ ಬೆಂಗಳೂರಿಗೆ ತೆರಳಲು ಸಿದ್ಧಗೊಳ್ಳುತ್ತಿದ್ದ ಬಸ್ ನ ಮಹಿಳಾ ಕಂಡಕ್ಟರ್, ಎಂಟ್ರಿ ಮಾಡಿಸಲೆಂದು ಡಿಫೋನ ಒಳಗೆ ಹೋಗಿದ್ದಾರೆ, ಆದರೆ ತನ್ನ ಕ್ಯಾಶ್ ಬ್ಯಾಗ್ ಅನ್ನು ಸೀಟ್ ಮೇಲೆ ಇರಿಸಿ ಹೋಗಿದ್ದ ಆಕೆ, ಸ್ವಲ್ಪ ದೂರ ಹೋಗುತ್ತಿದ್ದಂತೆ, ಕಳ್ಳ ಬಸ್ ಒಳಗೆ ನುಗ್ಗಿದ್ದಾನೆ.

ಸೀಟ್ ಮೇಲೆ ಇಟ್ಟಿದ್ದ ಬ್ಯಾಗ್ ಲಪಟಾಯಿಸಿ, ಅಲ್ಲಿಂದ ಓಡುತ್ತಿದ್ದ ಕಳ್ಳನನ್ನು ಗಮನಿಸಿದ ಮಹಿಳಾ ಕಂಡಕ್ಟರ್ ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾರೆ, ಮಹಿಳೆಯ ಚೀರಾಟ ಕೇಳಿ, ಎಚ್ಚೆತ್ತು ಕೊಂಡ ಸಾರ್ವಜನಿಕರು, ಕಳ್ಳನನ್ನು ಹಿಡಿದು ಯದ್ವಾ ತದ್ವ ಬಾರಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ದೂರು ದಾಖಲಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.////

Web Title : A thief Robbery conductor’s cash bag in KSRTC Bus at Bangalore