ಅಥಣಿ; ಸ್ನಾನಕ್ಕೆ ಬಂದ ಯುವಕ, ಕೃಷ್ಣಾ ನದಿಯ ನೀರು ಪಾಲು !

ಕೃಷ್ಣಾನದಿಯಲ್ಲಿ ಯುವಕನೋಬ್ಬ ಆಕಸ್ಮಿಕ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ

ಅಥಣಿ (Athani) : ಶ್ರಾವಣ ಮಾಸದ ಕೊನೆಯ ಶುಕ್ರವಾರ ಪೂಜೆಯ ನಿಮಿತ್ಯ ಕೃಷ್ಣಾ ನದಿಯಲ್ಲಿ (Krishna River)  ಸ್ನಾನ ಮಾಡಿ ದೇವರಿಗೆ ನೀರು ತರಲು ಆಗಮಿಸಿದ ವೇಳೆ ಕೃಷ್ಣಾನದಿಯಲ್ಲಿ ಯುವಕನೋಬ್ಬ (youth) ಆಕಸ್ಮಿಕ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ಎಂಬ ಯುವಕ ದೇವರ ಪೂಜೆಗೆ ಕೃಷ್ಣಾನದಿಯಿಂದ ಸ್ನಾನ ಮಾಡಿ ನೀರು ತರಲು ಆಗಮಿಸಿದ ವೇಳೆ ದುರ್ಘಟನೆ ಜರುಗಿದೆ. ಅಥಣಿ ತಾಲೂಕಿನ ದರೂರ ಗ್ರಾಮದ ಕೃಷ್ಣ ನದಿ ಬ್ರಿಡ್ಜನಲ್ಲಿ ಈ ದುರ್ಘಟನೆ ನಡೆದಿದ್ದು, ಈಜು ಬರುತ್ತಿದ್ದ ವ್ಯಕ್ತಿ ಅಚಾನಕ್ ನೀರನಲ್ಲಿ ಹರಿದು ಹೋಗಿದ್ದಾನೆ ಎಂದು ತಿಳಿದುಬಂದಿದೆ.

ಸಾಗರ ರಾಜು ಹೊನಕಟ್ಟಿ

ಅಥಣಿ; ಸ್ನಾನಕ್ಕೆ ಬಂದ ಯುವಕ, ಕೃಷ್ಣಾ ನದಿಯ ನೀರು ಪಾಲು ! - Kannada News

ಕುಮಾರ ಹೊನಕಟ್ಟಿ(ಪ್ರತ್ಯಕ್ಷದರ್ಶಿ) : “ಹೊಳೆ ಸ್ನಾನಕ್ಕೆಂದು ನಾವು ಐದು ಜನ ಸ್ನೇಹಿತರು ಬಂದು ಸ್ನಾನ ಮಾಡಿ ನದಿ ದಡದಲ್ಲಿ ಪೂಜೆ ಮಾಡುತ್ತಿದ್ದಾಗ ಹಿಂದುರುಗಿ‌ ನೋಡಿದಾಗ ಆತ ಕಣ್ಮರೆಯಾಗಿದ್ದ ಭಯದಿಂದ ನಾವು ಎಷ್ಟು ಹುಡುಕಾಡಿದರೂ ಸಿಗಲಿಲ್ಲ”

ರಾಜು ತಳವಾರ (ಅಗ್ನಿಶಾಮಕದಳ‌ ಅಧಿಕಾರಿ) : “ಘಟನೆಯ ವಿಷಯ ತಿಳಿದ ತಕ್ಷಣ ನಾವು 6 ಜನ ಸಿಬ್ಬಂದಿಗಳು ಬಂದು ಗ್ರಾಫನೇಲ್ ಹಾಕಿ ಪರಿಶೀಲಿಸಿದಾಗ ವ್ಯಕ್ತಿ ಸಿಕ್ಕಿಲ್ಲ. ಈಗ ಬೋಟ್ ತರಿಸಿಕೊಂಡು ಮುಂದಿನ ಕಾರ್ಯಾಚರಣೆ ನಡೆಸುತ್ತೇವೆ” ಎಂದರು..

ನಂತರ ಸ್ಥಳಕ್ಕೆ ಧಾವಿಸಿದ್ ಬೆಳಗಾವಿಯ SDRF ಟೀಮ್ ಮಳೆ ಬಂದರು ಕೂಡಾ ಶೋದ ಕಾರ್ಯವನ್ನು ಮುಂದುವರೆಸುತ್ತಿದ್ದಾರೆ..

ವರದಿ : ಬಸವರಾಜ ಖೇಮಲಾಪುರ್

ಇವುಗಳನ್ನೂ ಓದಿ….

NTR ಸಿನಿಮಾ ತಿರಸ್ಕರಿಸಿದ ಸಮಂತಾ, ಕೇಳಿದಷ್ಟು ಕೊಡಿ ಎಂದು ಪಟ್ಟು

ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ ಪೋಸ್ಟರ್ ವೈರಲ್

ಯಶ್ ಬಾಲಿವುಡ್ ನಂಬರ್ 1 ಎಂದ ಹಿಂದಿ ಸ್ಟಾರ್ ನಟ

ನಟ ಹರೀಶ್ ರಾಯ್ ಆಸರೆಯಾದ ಸ್ಟಾರ್ ನಟ ಯಾರು

ಪತಿ ಹೆಸರು ಟ್ಯಾಟೂ ಹಾಕಿಸಿಕೊಂಡ ನಟಿ ಮೇಘನಾ ರಾಜ್

ನಟ ದರ್ಶನ್ ಖಡಕ್ ಮಾತಿಗೆ ಬೇರೆ ಚಿತ್ರರಂಗವೂ ಶಾಕ್

ಸಾಯಿ ಪಲ್ಲವಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ, ಇನ್ಮುಂದೆ ಸಿನಿಮಾ ಮಾಡೋಲ್ಲ

ರಶ್ಮಿಕಾ ಶೇರ್ ಮಾಡಿದ ಆ ಫೋಟೋ ಕ್ಷಣದಲ್ಲಿ ವೈರಲ್

ಅಲ್ಲು ಅರ್ಜುನ್ ಗೆ ಹಾಲಿವುಡ್ ಆಫರ್, ಬೆರಗಾದ ಚಿತ್ರರಂಗ

Follow us On

FaceBook Google News

Advertisement

ಅಥಣಿ; ಸ್ನಾನಕ್ಕೆ ಬಂದ ಯುವಕ, ಕೃಷ್ಣಾ ನದಿಯ ನೀರು ಪಾಲು ! - Kannada News

Read More News Today