ಅಥಣಿಯಲ್ಲಿ ವಿದ್ಯುತ್ ತಗುಲಿ ಯುವಕ ಬಲಿ ! ಕುಟುಂಬಸ್ಥರ ಆಕ್ರಂದನ

ವಿದ್ಯುತ್ ತಗುಲಿ ಯುವಕ ಬಲಿಯಾಗಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ.

ಅಥಣಿ: ವಿದ್ಯುತ್ ರೂಪದಲ್ಲಿ ಕಾದುಕುಳಿತಿದ್ದ  ಜವಾರಾಯ ತನ್ನ ಅಟ್ಟಹಾಸವನ್ನ ಮೆರೆದಿದ್ದಾನೆ, ಜವರಾಯನ ಅಟ್ಟಹಾಸಕ್ಕೆ ವಿದ್ಯುತ್ ತಗುಲಿ ಯುವಕ ಬಲಿಯಾಗಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಂಕರಹಟ್ಟಿ ಗ್ರಾಮದ ಮಲ್ಲಿಕಾರ್ಜುನ್ ಪರಮೇಶ್ವರ, ಮುಗಳಖೊಡ (13) ಗ್ರಾಮದ ಹೊರವಲಯದಲ್ಲಿರುವ ಟವರ್ ಬಳಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ : ಅಥಣಿ; ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದ ಯುವಕನ ಶವ ಪತ್ತೆ

ಸ್ಥಳಕ್ಕೆ ಅಥಣಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ವಿದ್ಯುತ್ ತಗುಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಘಟನೆಯ ಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.

ಆತನಿಗೆ ಅಕಸ್ಮಾತಾಗಿ ವಿದ್ಯುತ್ ತಗುಲಿದೆಯೇ, ಅಥವಾ ಆಟದ ವೇಳೆ ತಗುಲಿರಬಹುದೇ ತಿಳಿದುಬಂದಿಲ್ಲ.

ಒಬ್ಬನೇ ಮುದ್ದಿನ ಮಗನಾದ ಮಲ್ಲಿಕಾರ್ಜುನ ಶಾಲೆಗೆ ಹೋಗುತ್ತೇನೆಂದು ಬ್ಯಾಗ್ ದರಿಸಿಕೊಂಡು ಹೋಗಿ ಮರಳಿ ಹೆಣವಾಗಿ ಮನೆಗೆ ಬಂದ ಘಟನೆ ಕುಟುಂಬದವರ ಆಕ್ರಂದನಕ್ಕೆ ಕಾರಣವಾಗಿದೆ. ಘಟನೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ..

ಇದನ್ನೂ ಓದಿ : ಅಥಣಿಯಲ್ಲಿ ಮತ್ತೊಂದು ಭೀಕರ ಅಪಘಾತ, ವ್ಯಕ್ತಿ ಸಾವು!

ಬಸವರಾಜ.ಎಸ್.ಖೇಮಲಾಪುರ್ – ಬೆಳಗಾವಿ