ಬೈಕ್ ಮತ್ತು ಲಾರಿ ನಡುವೆ ಅಪಘಾತ, ಮಹಿಳೆ ಸಾವು, ಠಾಣೆಗೆ ಬಂದು ಶರಣಾದ ಚಾಲಕ

Accident between bike and lorry, death of woman, driver surrendered

ಗದಗ : ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಪ್ರಕರಣ ನಗರದಲ್ಲಿ ನಡೆದಿದೆ.

ನಗರದ ಹಳೆ ಜಿಲ್ಲಾಡಳಿತ ಭವನ ವೃತ್ತದಲ್ಲಿ ಘಟನೆ ನಡೆದಿದ್ದು, ಅನ್ನಭಾಗ್ಯ ಯೋಜನೆಯ ಅಕ್ಕಿ ಸರಬರಾಜು ಮಾಡುವ ಲಾರಿ ಹಾಗೂ ಬೈಕ್ ನಡುವೆ ಅಪಘಾತವಾಗಿದೆ.

ಜಿಲ್ಲೆಯ ಹುಯಿಲಗೋಳ ಗ್ರಾಮದ ನಿವಾಸಿ ನಿಂಗವ್ವ ದೇವಪ್ಪ ಗದಗಿನ(೩೨) ಮೃತಪಟ್ಟ ಮಹಿಳೆ. ಹುಯಿಲಗೋಳದಿಂದ ಗದಗ ನಗರದ ಆಸ್ಪತ್ರೆಗೆ ಬರುವ ವೇಳೆ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗದಗ ಎಸ್ಪಿ ಎನ್. ಯತೀಶ್ ಭೇಟಿ ನೀಡಿ ಪರಿಶೀಲಿಸಿದರು. ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.

ಬೈಕ್ ಮತ್ತು ಲಾರಿ ನಡುವೆ ಅಪಘಾತ, ಮಹಿಳೆ ಸಾವು, ಠಾಣೆಗೆ ಬಂದು ಶರಣಾದ ಚಾಲಕ - Kannada News

ಸಂಭವಿಸಿದ್ದು ಹೇಗೆ?

ಹುಯಿಲಗೋಳದಿಂದ ಗದಗಿಗೆ ಕಟ್ಟಡ ಕೆಲಸಕ್ಕೆ ಬರುವ ಮಹಮ್ಮದ್ ಎನ್ನುವಾತ ತಮ್ಮೂರಿನ ನಿಂಗವ್ವರಿಗೆ ಆಸ್ಪತ್ರೆಗೆ ಡ್ರಾಪ್ ಕೊಡುತ್ತಿದ್ದ. ಬೈಕ್ ಭೂಮರಡ್ಡಿ ವೃತ್ತದಿಂದ ಹೊಸ ಬಸ್ ನಿಲ್ದಾಣ ಕಡೆಗೆ ಹೊರಟಿತ್ತು. ಎದುರಿನಿಂದ ಲಾರಿ ವೇಗವಾಗಿ ಬಂದಿದ್ದಕ್ಕೆ ಬೆದರಿದ ಮಹಮ್ಮದ್ ಏಕಾಏಕಿ ಗಾಡಿಯನ್ನು ನಿಧಾನಗೊಳಿಸಲು ಪ್ರಯತ್ನ ಮಾಡಿದ ಪರಿಣಾಮ ಹಿಂದೆ ಕುಳಿತಿದ್ದ ನಿಂಗವ್ವ ಬಲಕ್ಕೆ , ಮಹಮ್ಮದ್ ಎಡಕ್ಕೆ ಬಿದ್ದಿದ್ದಾರೆ. ಲಾರಿಯ ಅಡಿಗೆ ಬಿದ್ದ ನಿಂಗವ್ವ ಅಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಲಾರಿ ಡ್ರೈವರ್ ಸಿದ್ದಲಿಂಗೇಶ ದೊಡ್ಡಮನಿ(೪೨) ಸಂಚಾರಿ ಠಾಣೆಗೆ ಬಂದು ಶರಣಾಗತನಾಗಿದ್ದಾನೆ.

Follow us On

FaceBook Google News

Read More News Today