Bangalore Accident: ಭಯಂಕರ ಆಕ್ಸಿಡೆಂಟ್, ಮೆಲ್ಸೇತುವೆಯಿಂದ ಬಿದ್ದು ಮೂವರ ಸಾವು
Koramangala Accident: ಕೋರಮಂಗಲದಲ್ಲಿ ನಡೆದ ಡೆಡ್ಲಿ ಆಕ್ಸಿಡೆಂಟ್ ನಲ್ಲಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬುಲೆಟ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ಮೆಲ್ಸೇತುವೆಯಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು (ಸೆಪ್ಟೆಂಬರ್ 15): ಕೋರಮಂಗಲದಲ್ಲಿ ನಡೆದ ಡೆಡ್ಲಿ ಆಕ್ಸಿಡೆಂಟ್ ನಲ್ಲಿ ಕಾರು ಬೈಕ್‌ಗೆ ಡಿಕ್ಕಿ (Car and Bike Accident) ಹೊಡೆದ ಪರಿಣಾಮ ಬುಲೆಟ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ಮೆಲ್ಸೇತುವೆಯಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಗಳೂರು (Banglore) ಮತ್ತೊಂದು ಭೀಕರ ಅಪಘಾತಕ್ಕೆ (Accident) ಸಾಕ್ಷಿಯಾಗಿದೆ. ಹೌದು, ಕೋರಮಂಗಲ (Koramangala) ಮೇಲ್ಸೇತುವೆ ಮೇಲೆ ನಡೆದ ಡೆಡ್ಲಿ ಆಕ್ಸಿಡೆಂಟ್ ಅದು.
ಎಲೆಕ್ಟ್ರಾನಿಕ್ ಸಿಟಿ (Electronic City Flyover) ಮೆಲ್ಸೇತುವೆಯ ಮೇಲೆ ಕಾರೊಂದು ಬುಲೆಟ್ ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬುಲೆಟ್ ನಲ್ಲಿದ್ದ ಇಬ್ಬರು ಬೈಕ್ ಸವಾರರು ಮೆಲ್ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ವ್ಯಕ್ತಿಯೂಬ್ಬ ಸಹ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ನಿನ್ನೆ ತಡ ರಾತ್ರಿ 9:20 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಬೆಂಗಳೂರಿನ ಕಡೆಯಿಂದ ಹೊಸೂರು ಮಾರ್ಗವಾಗಿ ಹೋಗುತ್ತಿದ್ದ ಬುಲೆಟ್ ಗೆ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ಕಾರು ಸುಮಾರು ಅತಿ ವೇಗದಲ್ಲಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಮೇಲ್ಸೇತುವೆಯಿಂದ ಕೆಳಗಿನ ಸರ್ವೀಸ್ ರಸ್ತೆಗೆ ಹಾರಿ ಬಿದ್ದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
English Summary :
Deadly Accident in Bangalore, Three killed in flyover over car collision, Two bike riders in a bullet fall off a road 30 feet from Koramangala flyover and die on the spot. The incident took place around 9:20 pm last night
Follow us On
Google News |