ಬೆಂಗಳೂರಿನ ಯಲಹಂಕ ಬಳಿ ಸರಣಿ ಅಪಘಾತ: ಮೂವರಿಗೆ ಗಾಯ

ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ (Airport Road) ಸರಣಿ ಅಪಘಾತ ಸಂಭವಿಸಿದೆ. ಒಟ್ಟು 5 ಕಾರುಗಳು ಸರಣಿ ಅಪಘಾತಕ್ಕೀಡಾಗಿವೆ ಎಂದು ವರದಿಯಾಗಿದೆ.

  • ಬೆಂಗಳೂರು ಏರ್’ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ
  • ಬ್ಯಾಟರಾಯನಪುರ ಸಿಗ್ನಲ್‌ ಬಳಿ ನಿಂತಿದ್ದ ಕಾರುಗಳಿಗೆ ಡಿಕ್ಕಿ
  • ಘಟನೆಯಲ್ಲಿ ಇಂಡಿಕಾ ಕಾರು ಚಾಲಕನ ಪರಿಸ್ಥಿತಿ ಗಂಭೀರ

ಬೆಂಗಳೂರು (Bengaluru): ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ (Airport Road) ಸರಣಿ ಅಪಘಾತ ಸಂಭವಿಸಿದೆ. ಒಟ್ಟು 5 ಕಾರುಗಳು ಸರಣಿ ಅಪಘಾತಕ್ಕೀಡಾಗಿವೆ ಎಂದು ವರದಿಯಾಗಿದೆ.

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, (Four people were injured) ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ (admitted to a local hospital). ಯಲಹಂಕ (Yelahanka) ಕಡೆಯಿಂದ ವೇಗವಾಗಿ ಬರುತ್ತಿದ್ದ ರಾಹುಲ್ ಎಂಬುವವರ ಕಾರು ಬ್ಯಾಟರಾಯನಪುರ ಸಿಗ್ನಲ್ (Byatarayanapura Signal) ಬಳಿ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಒಮ್ಮೆಲೇ ಡಿಕ್ಕಿ ರಭಸಕ್ಕೆ ಡಿಕ್ಕಿ ನಂತರ ಐದು ಕಾರುಗಳು ಸರಣಿಯಾಗಿ ಡಿಕ್ಕಿಯಾಗಿವೆ.

ಘಟನೆಯಲ್ಲಿ ಇಂಡಿಕಾ ಕಾರು ಚಾಲಕನ ಸ್ಥಿತಿ ಗಂಭೀರವಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೂ ಗಾಯಗೊಂಡಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು (Hebbal Traffic Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು ಏರ್'ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ

ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯಿಂದ ಸ್ಥಳದಲ್ಲಿ ಸ್ವಲ್ಪ ಸಮಯ ವಾಹನ ದಟ್ಟಣೆ ಹೆಚ್ಚಾಗಿತ್ತು, ಸ್ಥಳದಲ್ಲಿ ಉದ್ನಿಗ್ನ ಸ್ಥಿತಿ ಉಂಟಾಗಿತ್ತು. ಪೋಲೀಸರ ವಿಚಾರಣೆ ಬಳಿಕ ಘಟನೆಗೆ ನಿಜವಾದ ಕಾರಣ ತಿಳಿದು ಬರಲಿದೆ.

ಬೆಂಗಳೂರಿನ ಯಲಹಂಕ ಬಳಿ ಸರಣಿ ಅಪಘಾತ: ಮೂವರಿಗೆ ಗಾಯ

Follow Us on : Google News | Facebook | Twitter | YouTube