ಆ್ಯಸಿಡ್​ ನಾಗೇಶ ಅಂದರ್, ಆಶ್ರಮದಲ್ಲಿ ಅಡಗಿದ್ದ ಆರೋಪಿ !

ಯುವತಿ ಮೇಲೆ ಆ್ಯಸಿಡ್ ಎರಚಿದ ನಾಗೇಶ್ ತಮಿಳುನಾಡಿಗೆ ಹೋಗಿ ರಮಣ ಆಶ್ರಮದಲ್ಲಿ ಸ್ವಾಮೀಜಿ ವೇಷ ಹಾಕಿದ್ದ. ಭಕ್ತರ ಸೋಗಿನಲ್ಲಿ ಆಶ್ರಮಕ್ಕೆ ತೆರಳಿದ ಪೊಲೀಸರು ನಾಗೇಶ್ ನನ್ನು ವಶಕ್ಕೆ ಪಡೆದಿದ್ದಾರೆ.

Online News Today Team

ಬೆಂಗಳೂರು: ಯುವತಿ ಮೇಲೆ ಆ್ಯಸಿಡ್ ಎರಚಿದ (Acid Attack) ನಾಗೇಶ್ ತಮಿಳುನಾಡಿಗೆ ಹೋಗಿ ರಮಣ ಆಶ್ರಮದಲ್ಲಿ ಸ್ವಾಮೀಜಿ ವೇಷ ಹಾಕಿದ್ದ. ಭಕ್ತರ ಸೋಗಿನಲ್ಲಿ ಆಶ್ರಮಕ್ಕೆ ತೆರಳಿದ ಪೊಲೀಸರು (Police) ನಾಗೇಶ್ ನನ್ನು ವಶಕ್ಕೆ (Accused Nagesh Arrested) ಪಡೆದಿದ್ದಾರೆ.

ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದ ದಾಳಿಕೋರ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ತನಗೇನು ಗೊತ್ತೇ ಇಲ್ಲವೇನೋ ಎಂಬಂತೆ ಆಶ್ರಮದಲ್ಲಿ ಅಡಗಿದ್ದ ನಾಗೇಶ್ ಬಾಬುನನ್ನು ಪೊಲೀಸರು ಬಂಧಿಸಿದ್ದಾರೆ. ಆಶ್ರಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆ್ಯಸಿಡ್​ ನಾಗೇಶ ಅಂದರ್, ಆಶ್ರಮದಲ್ಲಿ ಅಡಗಿದ್ದ ಆರೋಪಿ !

ತಮಿಳುನಾಡು ಪೊಲೀಸರು ಕೆಲ ದಿನಗಳ ಹಿಂದೆ ಆಶ್ರಮಕ್ಕೆ ಹೋಗಿದ್ದಾಗ ನಾಗೇಶ್ ಬಾಬು ಕಣ್ಣಿಗೆ ಬಿದ್ದಿದ್ದಾನೆ, ನಿಜವಾದ ಭಕ್ತನಂತೆ ಆಶ್ರಮದಲ್ಲಿ ಧ್ಯಾನ ಮಾಡುತ್ತಾ ಆ್ಯಸಿಡ್ ನಾಗೇಶ್ ಕುಳಿತಿದ್ದನಂತೆ. ಆರೋಪಿ ನಾಗನನ್ನು ಪೊಲೀಸರು ಬಂಧಿಸಿದ್ದಾರೆ.

16 ದಿನಗಳಿಂದ ಐಸಿಯುನಲ್ಲಿದ್ದ ಯುವತಿ ಈಗ ಆ್ಯಸಿಡ್ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದರುವುದಾಗಿ ತಿಳಿದುಬಂದಿದೆ. ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ವೈದ್ಯರ ತಂಡ ಯುವತಿಯ ಮೇಲೆ ನಿರಂತರವಾಗಿ ನಿಗಾ ಇರಿಸಿದೆ.

Acid Attack Accused Nagesh Arrested

Follow Us on : Google News | Facebook | Twitter | YouTube