Welcome To Kannada News Today

ಗುಂಡಿನ ದಾಳಿ ಪ್ರಕರಣ: ಮತ್ತಿಬ್ಬರ ಬಂಧನ

ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಫೈರಿಂಗ್ ಪ್ರಕರಣದ ತನಿಖೆಯ ಜಾಡು ಹಿಡಿದಿರುವ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

🌐 Kannada News :

( Kannada News Today ) : ಬಿಜಾಪುರ : ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಫೈರಿಂಗ್ ಪ್ರಕರಣದ ತನಿಖೆಯ ಜಾಡು ಹಿಡಿದಿರುವ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ.

ಬಂಧಿತ ಆರೋಪಿಗಳನ್ನು ಜಿಲ್ಲೆಯ ಜಾಲಗೇರಿ ತಾಂಡಾದ ಸಚಿನ್ ರಮೇಶ ಚವ್ಹಾಣ (26), ಚಡಚಣದ ಮಲ್ಲಿಕಾರ್ಜುನ ಶಿವಾನಂದ ಪಾಟೀಲ (26) ಎಂದು ಗುರುತಿಸಲಾಗಿದೆ.

ಈ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ, ಒಂದು ಕಂಟ್ರಿ ಪಿಸ್ತೂಲ್, ಜೀವಂತ ಗುಂಡು, ಎರಡು ಮೊಬೈಲ್, ತಲವಾರ ಜಪ್ತು ಮಾಡಿಕೊಳ್ಳಲಾಗಿದೆ.

ಕಳೆದ ನವ್ಹೆಂಬರ್ 2 ರಂದು ಭೀಮಾತೀರದ ಮಹಾದೇವ ಸಾಹುಕಾರ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಟಿಪ್ಪರ್‌ನಿಂದ ಹಾಯಿಸಿ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಹಾದೇವ ಸಾಹುಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಘಟನೆಯಲ್ಲಿ ಮಹಾದೇವ ಸಾಹುಕಾರ ಅವರ ಸಹಚರ ಹಾಗೂ ಕಾರು ಚಾಲಕ ಮೃತಪಟ್ಟಿದ್ದ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 26 ಜನರನ್ನು ಬಂಧಿಸಲಾಗಿದ್ದು, ಪ್ರಕರಣದ ಮಾಸ್ಟರ್‌ಮೈಂಡ್ ಹಾಗೂ ಪ್ರಮುಖ ಆರೋಪಿಗಳ ಹುಡುಕಾಟಕ್ಕಾಗಿ ಪೊಲೀಸರು ವ್ಯಾಪಕವಾದ ಜಾಲ ಬೀಸಿದ್ದಾರೆ.

📣 ಇನ್ನಷ್ಟು ಕನ್ನಡ ಕ್ರೈಂ ನ್ಯೂಸ್ ಗಳಿಗಾಗಿ Crime News in Kannada, ಲೇಟೆಸ್ಟ್ ಅಪ್ಡೇಟ್ ಗಳ Kannada News ಗಾಗಿ Facebook & Twitter ಅನುಸರಿಸಿ.

📲 Google News ಹಾಗೂ Kannada News Today App ಡೌನ್ಲೋಡ್ ಮಾಡಿಕೊಳ್ಳಿ.

Scroll Down To More News Today