ಎಟಿಎಂ ಕಾರ್ಡ್ ಬದಲಾಯಿಸಿ ಗ್ರಾಹಕರಿಗೆ ವಂಚನೆ
ಅಪರಿಚಿತ ವ್ಯಕ್ತಿಯೋರ್ವ ಎಟಿಎಂ ಕೇಂದ್ರಗಳಿಗೆ ಹಣ ತೆಗೆಯಲು ಬರುವ ಅಮಾಯಕ ವಯೋವೃದ್ಧರು ಹಾಗೂ ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎಟಿಎಂ ಕಾರ್ಡ್ಗಳನ್ನು ಬದಲಾಯಿಸಿ ಹಣ ದೋಚುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
(Kannada News) : ಪಾಂಡವಪುರ : ಅಪರಿಚಿತ ವ್ಯಕ್ತಿಯೋರ್ವ ಎಟಿಎಂ ಕೇಂದ್ರಗಳಿಗೆ ಹಣ ತೆಗೆಯಲು ಬರುವ ಅಮಾಯಕ ವಯೋವೃದ್ಧರು ಹಾಗೂ ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಎಟಿಎಂ ಕಾರ್ಡ್ಗಳನ್ನು ಬದಲಾಯಿಸಿ ಹಣ ದೋಚುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದ ವಿವಿಧೆಡೆ ಎಟಿಎಂ ಕೇಂದ್ರಗಳಲ್ಲಿ ವಯೋವೃದ್ಧರು, ಮಹಿಳೆಯರು, ಅಸಹಾಯಕರು ಹಾಗೂ ಅಮಾಯಕ ವ್ಯಕ್ತಿಗಳಿಗೆ ಹಣ ತೆಗೆದುಕೊಡುವುದಾಗಿ ಎಟಿಎಂ ಕಾರ್ಡ್ ಪಡೆದುಕೊಂಡು ಅದನ್ನು ಬದಲಾಯಿಸಿ ನಂತರ ಎಟಿಎಂ ಕೇಂದ್ರಗಳಲ್ಲಿ ಎಟಿಎಂ ಕಾರ್ಡ್ಗಳನ್ನು ಬಳಸಿ ಸಾಕಷ್ಟು ಹಣ ದೋಚಿರುವ ಪ್ರಸಂಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಹಾಯ ಮಾಡುವ ನೆಪದಲ್ಲಿ ಜನರ ಹಣ ದೋಚುತ್ತಿರುವ ಈ ಅಪರಿಚಿತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಪಾಂಡವಪುರ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ-08236-255132, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ-08232-224888ಗೆ ಅಥವಾ ಸರ್ಕಲ್ ಇನ್ಸ್ಪೆಕ್ಟರ್ ಮೊ.ಸಂ-9480804858 ಹಾಗೂ ಸಬ್ ಇನ್ಸ್ಪೆಕ್ಟರ್ ಮೊ.ಸಂ-9480804874ಗೆ ಮಾಹಿತಿ ನೀಡಬೇಕಾಗಿ ಪೊಲೀಸ್ ಪ್ರಕಟಣೆಯಲ್ಲಿ ಕೋರಲಾಗಿದೆ.
Web Title : ATM Card Fraud Incidents Reported In Pandavapura
Follow us On
Google News |