ನಟ ಕೋಮಲ್ ಮೇಲೆ ಹಲ್ಲೆ, ಅಣ್ಣ ಜಗ್ಗೇಶ್ ಹೇಳಿದ್ದೇನು ?

Attack on Kannada actor Komal, What did Brother Jaggesh say?

ನಟ ಕೋಮಲ್ ಮೇಲೆ ಹಲ್ಲೆ, ಅಣ್ಣ ಜಗ್ಗೇಶ್ ಹೇಳಿದ್ದೇನು ? – Attack on Kannada actor Komal, What did Brother Jaggesh say?

ನಟ ಕೋಮಲ್ ಮೇಲೆ ಹಲ್ಲೆ, ಅಣ್ಣ ಜಗ್ಗೇಶ್ ಹೇಳಿದ್ದೇನು ?

ಕನ್ನಡ ನ್ಯೂಸ್ ಟುಡೇ : ನಾಯಕ ನಟ ಹಾಗೂ ಹಿರಿಯ ನಟ ಜಗ್ಗೇಶ್ ಸಹೋದರ ಕೋಮಲ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆಮಾಡಿರುವ ಬಗ್ಗೆ ವರಿದಿಯಾಗಿದೆ. ಹಲ್ಲೆಯ ಕುರಿತು ಕೋಮಲ್ ರವರ ಮೊದಲ ಪ್ರತಿಕ್ರಿಯೆಯಲ್ಲಿ ಘಟನೆಯ ಬಗ್ಗೆ ವಿವರಿಸಿದ್ದಾರೆ. ” ಹಲ್ಲೆ ಮಾಡಿದವರು ಯಾರು ಎಂದು ತಿಳಿದಿಲ್ಲ, ತನ್ನ ಮಗಳನ್ನು ಟ್ಯೂಷನ್ ಗೆ ಬಿಟ್ಟು ವಾಪಸ್ ಬರುವ ವೇಳೆ ಅಪರಿಚಿತನೊಬ್ಬ ಅಂಗಡಿ ಕಡೆಯಿಂದ ಬಂದು, ನಿನ್ನದು ಜಾಸ್ತಿ ಆಯ್ತು, ಅನ್ನುತ್ತಾ ಅವಾಚ್ಯ ಶಬ್ದಗಳನ್ನು ಬಳಸಿದ್ದಾನೆ.

ಯಾವ  ಕಾರಣಕ್ಕೆ ಬಯ್ಯುತ್ತಿದ್ದಾನೆ, ಎಂದು ವಿಚಾರಿಸಲು ಮುಂದಾದಾಗ ನನ್ನ ಮೇಲೆ ಏಕಾಏಕಿ ಹಲ್ಲೆಮಾಡಿದ್ದಾರೆ.” ಎಂದು ಕೋಮಲ್ ತಿಳಿಸಿದ್ದಾರೆ. ಚಿತ್ರರಂಗದ ವ್ಯಕ್ತಿಗಳಿಂದ ಈ ಘಟನೆ ನಡೆದಿರಬಹುದಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಅದನ್ನು ಹೇಗೆ ತಾನೇ ಹೇಳಲು ಸಾಧ್ಯ, ನಾನು ಸಾಮಾನ್ಯವಾಗಿ ಮನೆಯಿಂದ ಹೊರಗೆ ಬರವುದೇ ಕಡಿಮೆ, ಅಂತದ್ರಲ್ಲಿ ನನ್ನ ಮೇಲೆ ಹಲ್ಲೆ ಮಾಡುವ ಕೆಲಸ ಏನು ಮಾಡಿದ್ದೀನಿ, ಸಿನಿಮಾ ಮಾಡೋದೇ ತಪ್ಪ” ಎಂದು ತಮ್ಮ ವಿಷಾದ ವ್ಯಕ್ತ ಪಡಿಸಿದ್ದಾರೆ.

ಇನ್ನು ಘಟನೆಯಿಂದ ಕೋಪಗೊಂಡಿದ್ದ ಕೋಮಲ್ ರ ಸಹೋದರ ನಟ ಜಗ್ಗೇಶ್ ಪರ್ತಕರ್ತರೊಂದಿಗೆ ಮಾತನಾಡಿ, ” ಮೊದಲು ಕೋಮಲ್ ಗೆ ಚಿಕಿತ್ಸೆಯಾಗಲಿ, ಈ ಕೃತ್ಯ ಯಾರೇ ಎಸಗಿದ್ದರೂ ನಾನು ಬಿಡೋಲ್ಲ, ಈ ಘಟನೆಯನ್ನು ನೋಡಿದ್ರೆ, ನನಗೆ ಏನೇನೋ ಆಲೋಚನೆ ಬರುತ್ತಿದೆ, ಅಕಸ್ಮಾತ್ ಚಿತ್ರರಂಗದಿಂದ ಈ ಕೃತ್ಯ ನಡೆದಿದ್ದರೆ, ಸುಮ್ಮನೆ ಬಿಡೋಲ್ಲ… ನನಗೆ ರಂಗದಲ್ಲಿ 38 ವರ್ಷಗಳ ಅನುಭವವಿದೆ, ಏನು ಮಾಡಬೇಕೆಂದು ಗೊತ್ತಿದೆ ಎಂದರು.

ಇನ್ನು ಪ್ರಕರಣ ದಾಖಲಿಸಿರುವ ಮಲ್ಲೇಶ್ವರಂ ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ, ಇನ್ನು ವಿಚಾರಣೆಯ ನಂತರ ಘಟನೆಗೆ ನಿಜವಾದ ಕಾರಣ ತಿಳಿಯಬೇಕಿದೆ.//////

Web Title : Attack on Kannada actor Komal, What did Brother Jaggesh say?

#Komal #Jaggesh #Attack_On_Komal