ಆಟೋದಲ್ಲಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ!

Story Highlights

ಚಾಲಕನೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಆಟೋದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಹೈದರಾಬಾದ್ ಪಹಾಡಿ ಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೈದರಾಬಾದ್ : ಚಾಲಕನೊಬ್ಬ ಮತ್ತೊಬ್ಬ ವ್ಯಕ್ತಿಯೊಂದಿಗೆ ಆಟೋದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಹೈದರಾಬಾದ್ ಪಹಾಡಿ ಶರೀಫ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೋಲೀಸರ ವರದಿ ಪ್ರಕಾರ, 35 ವರ್ಷದ ಮಹಿಳೆ ಫಂಕ್ಷನ್ ಹಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ತನ್ನ ಕೆಲಸ ಮುಗಿಸಿ ಮನೆಗೆ ತೆರಳಲು ಆಟೋ ಹತ್ತಿದಳು. ಸ್ವಲ್ಪ ದೂರದ ನಂತರ ಆಟೋಡ್ರೈವರ್ ರಸ್ತೆ ಬದಲಿಸಿ ಬೇರೆ ರಸ್ತೆಗೆ ಕರೆದೊಯ್ದಿದ್ದಾನೆ.

ಆಟೋಡ್ರೈವರ್ ಜೊತೆಗೆ ಮತ್ತೊಬ್ಬ ವ್ಯಕ್ತಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ಜನಸಂದಣಿ ಇರುವ ಡಾಬಾದ ಬಳಿಗೆ ಬರುತ್ತಿದ್ದಂತೆ ಕಿರುಚಿದಳು ಮತ್ತು ಅವಳನ್ನು ಅಲ್ಲಿಯೇ ಇಳಿಸಿ ಅವರು ಪರಾರಿಯಾಗಿದ್ದಾರೆ.

ಮಂಗಳವಾರ ಸಂತ್ರಸ್ತೆ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ರಸ್ತೆಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

Related Stories