ಗೊರವಿಗೆರೆ: ಮಗುವಿನ ಮೇಲೆ ನಾಯಿ ದಾಳಿ, ಗಂಭೀರ ಗಾಯ

ಬೆಂಗಳೂರು ಪೂರ್ವ ತಾಲೂಕು ಗೊರವಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಯಿ ದಾಳಿಗೆ ಒಳಗಾದ ಮಗುವಿನ ಪೋಷಕರು ಆ ವೇಳೆ ಮನೆಯಲ್ಲಿ ಇರಲಿಲ್ಲ ಎಂದು ತಳಿದು ಬಂದಿದೆ.

(Kannada News) : ಆಹಾರ ಇಲ್ಲದ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿರುವ ಹಲವು ಸುದ್ದಿಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಮನೆಯ ಬಳಿ ಆಡುತ್ತಿದ್ದ ಮಗುವಿನ ಮೇಲೆ ಪಕ್ಕದ ಮನೆಯ ಸಾಕು ನಾಯಿ ದಾಳಿ ಮಾಡಿದ್ದು ಮಗುವಿನ ತಲೆಗೆ ಬಾರೀ ಗಾಯಗೊಳಿಸಿದೆ.

ಬೆಂಗಳೂರು ಪೂರ್ವ ತಾಲೂಕು ಗೊರವಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಯಿ ದಾಳಿಗೆ ಒಳಗಾದ ಮಗುವಿನ ಪೋಷಕರು ಆ ವೇಳೆ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ದಾಳಿ ಮಾಡಿದ ನಾಯಿ ಪಕ್ಕದ ಮನೆಯ ಸಾಕು ನಾಯಾಗಿದ್ದು, ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಗಾಯಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಮಗುವಿಗೆ ಗಂಭೀರವಾಗಿ ಗಾಯವಾಗಿದೆ, ರಕ್ತ ಸಿಕ್ತ ಮಗುವನ್ನು ಹೊಸಕೋಟೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ…..

WebTitle : baby attacked by the family dog

Scroll Down To More News Today