Athani Accident; ಅಪಘಾತ ಸ್ಥಳಕ್ಕೆ ಬೆಳಗಾವಿ ಎಸ್.ಪಿ ಭೇಟಿ, ಪರಿಶೀಲನೆ

Athani Accident: ಅಥಣಿಯಲ್ಲಿ (Athani) ಜರುಗಿದ ಕಾಲೇಜು ಬಸ್ ಅಪಘಾತ (College Bus Accident)

ಅಥಣಿ : ಇಂದು ಬೆಳಿಗ್ಗೆ ಅಥಣಿಯಲ್ಲಿ (Athani Accident) ಜರುಗಿದ ಕಾಲೇಜು ಬಸ್ ಅಪಘಾತ (College Bus Accident) ಸ್ಥಳಕ್ಕೆ ಹಾಗೂ ಆಸ್ಪತ್ರೆಗಳಿಗೆ ಬೆಳಗಾವಿ ಎಸ್ ಪಿ (Belagavi SP) ಸಂಜೀವ್ ಪಾಟೀಲ ಅವರು ಭೇಟಿ ನೀಡಿ ಗಾಯಗೊಂಡ ವಿದ್ಯಾರ್ಥಿಗಳ ಪರಿಸ್ಥಿತಿ ಅವಲೋಕಿಸಿದರು.

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿ ಬಸ್ಸಿನಲ್ಲಿ ಅತೀಯಾಗಿ ಮಕ್ಕಳನ್ನು ತುಂಬಿದ್ದಾರೆ ಎಂಬ ಆರೋಪದ ಬಗ್ಗೆ ಪರಿಶೀಲನೆ ಮಾಡಲಾಗುವುದು, ಸುಮಾರು ಮೂವತ್ತೊಂಬತ್ತು ಗಾಯಗೊಂಡ ವಿದ್ಯಾರ್ಥಿಗಳಿಗೆ ನಾಲ್ಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

Two killed in a horrific accident on the outskirts of Athani

Athani Accident; ಅಪಘಾತ ಸ್ಥಳಕ್ಕೆ ಬೆಳಗಾವಿ ಎಸ್.ಪಿ ಭೇಟಿ, ಪರಿಶೀಲನೆ - Kannada News

ಇದನ್ನೂ ಓದಿ : ಅಥಣಿ ಹೊರವಲಯದಲ್ಲಿ ಭೀಕರ ಅಪಘಾತ, ಇಬ್ಬರು ಸಾವು

ಒಬ್ಬರು ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ (Belagavi Hospital) ರವಾನಿಸಲಾಗಿದೆ. ದುರ್ಘಟನೆ ಜರುಗಿದಾಗ ಸ್ಥಳೀಯ ಖಾಸಗಿ ವೈದ್ಯರು ಮತ್ತು ಸಾರ್ವಜನಿಕರು ಸಕಾಲಕ್ಕೆ ಸ್ಪಂದಿಸಿದ್ದಾರೆ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

ಅಪಘಾತದಲ್ಲಿ ಬಸ್ ಹಾಗೂ ಲಾರಿಯ ಇಬ್ಬರೂ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಲೇಜು ವಾಹನದಲ್ಲಿ ಎಷ್ಟು ಜನ ಇದ್ದರು ಎನ್ನುವ ಬಗ್ಗೆ ಮಾಹಿತಿ ಪಡೆಯುತ್ತಿದ್ದೆವೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೇರೆಡೆ ಸ್ಥಳಾಂತರಿಸಲಿದ್ದೇವೆ ಎಂದು ಅವರು ತಿಳಿಸಿದರು.

Belagavi SP visited the accident site at Athani

– ಬಸವರಾಜ್ ಖೇಮಲಾಪುರ್, ಅಥಣಿ

Follow us On

FaceBook Google News

Advertisement

Athani Accident; ಅಪಘಾತ ಸ್ಥಳಕ್ಕೆ ಬೆಳಗಾವಿ ಎಸ್.ಪಿ ಭೇಟಿ, ಪರಿಶೀಲನೆ - Kannada News

Read More News Today