ಮೊಬೈಲ್ ಕದಿಯಲು ರಾತ್ರಿಯಿಡೀ ಶೋರೂಂನಲ್ಲಿದ್ದ ಕಳ್ಳ
ಮೊಬೈಲ್ ಕದಿಯಲು ಕಳ್ಳನೊಬ್ಬ ರಾತ್ರಿಯಿಡೀ ಶೋರೂಂನಲ್ಲಿಯೇ ಇದ್ದ
ಬೆಂಗಳೂರು (Bengaluru): ಮೊಬೈಲ್ ಕದಿಯಲು ಕಳ್ಳನೊಬ್ಬ ರಾತ್ರಿಯಿಡೀ ಶೋರೂಂನಲ್ಲಿಯೇ ಇದ್ದ. ಬೆಳಗ್ಗೆ ಅಂಗಡಿಯನ್ನು ಸ್ವಚ್ಛಗೊಳಿಸಲು ತೆರೆದಾಗ ಕದ್ದ ಫೋನ್‌ಗಳೊಂದಿಗೆ ಓಡಿ ಹೋಗಿದ್ದಾನೆ. ಆದರೆ ಪೊಲೀಸರು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ನಡೆದಿರುವುದು ಬೆಂಗಳೂರಿನ ಜೆ.ಪಿ.ನಗರದ ಟಾಟಾ ಕ್ರೋಮ್ ಮಳಿಗೆಯಲ್ಲಿ, ಮಳಿಗೆಗೆ ಕಳ್ಳನೊಬ್ಬ ನುಗ್ಗಿ ಗುರುವಾರ ರಾತ್ರಿಯಿಡೀ ಅಲ್ಲೇ ಇದ್ದ. ಆ ವೇಳೆ ಆರು ದುಬಾರಿ ಸೆಲ್ ಫೋನ್ ಗಳನ್ನು ಕದ್ದಿದ್ದಾನೆ. ಮರುದಿನ ಬೆಳಗ್ಗೆ ಸಿಬ್ಬಂದಿ ಅಂಗಡಿ ಸ್ವಚ್ಛಗೊಳಿಸುತ್ತಿದ್ದಾಗ ಓಡಿ ಹೋಗಿದ್ದಾನೆ.
ದೂರನ್ನು ಸ್ವೀಕರಿಸಿದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿದರು. ಕಳ್ಳನನ್ನು ಹಿಡಿದು ಬಂಧಿಸಲಾಯಿತು. ಈತ ಕದ್ದಿದ್ದ 5 ಲಕ್ಷ ಮೌಲ್ಯದ ಆರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಟಾಟಾ ಕ್ರೋಮ್ ಸ್ಟೋರ್‌ಗೆ ಹಸ್ತಾಂತರಿಸಲಾಯಿತು.
ಬೆಂಗಳೂರು ನಗರದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಪಿ ಕೃಷ್ಣಕಾಂತ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆರೋಪಿ ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ. ಆದರೆ, ಆತನ ವಿವರಗಳನ್ನು ಬಹಿರಂಗಪಡಿಸಿಲ್ಲ.
Bengaluru thief spends night in showroom to steal mobile phones arrested
ಮಹೇಶ್ ಬಾಬುಗೆ ವಿಲನ್ ಆದ ರಿಯಲ್ ಸ್ಟಾರ್ ಉಪೇಂದ್ರ
ಎಲ್ಲಾ ನಟಿಯರಿಗೂ ವಿಜಯ್ ದೇವರಕೊಂಡ ಬೇಕಂತೆ
ಚಿರಂಜೀವಿ ಸಲ್ಮಾನ್ ಖಾನ್ ಪ್ರಭುದೇವ ಒಂದೇ ಸೆಟ್ಟಲ್ಲಿ
2 ವರ್ಷಗಳ ನಂತರ ನಟಿ ಅನುಷ್ಕಾ ಶೆಟ್ಟಿ ಹೊಸ ಸಿನಿಮಾ
ಸಲ್ಮಾನ್ ಖಾನ್ ಚಿತ್ರಕ್ಕೆ ಕಿಚ್ಚ ಸುದೀಪ್ ಆಕ್ಷನ್ ಕಟ್
Arrested.
An accused who had stolen 6 mobiles from Tata Chroma Store (JP Nagar) worth 5 lakhs. Accused stayed overnight on the store and when store was opened in the morning by the sweeper, he escaped. Police recovered all mobiles intact and handed over to Tata Chroma store. pic.twitter.com/OcaMztJMa4— P Krishnakant IPS (@DCPSouthBCP) July 29, 2022
Follow us On
Google News |
Advertisement