ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು

ಮಹಾದೇವ ಭೈರಗೊಂಡ ಮೇಲೆ ಗುಂಡಿನ ದಾಳಿ

ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು : ಕಳೆದ ಒಂದು ವರ್ಷದಿಂದ ಶಾಂತವಾಗಿದ್ದ ಭೀಮಾ ತೀರದಲ್ಲಿ ಇದೀಗ ಮತ್ತೆ ಗುಂಡಿನ ಮೊರೆತವಾಗಿದೆ.

( Kannada News Today ) : ವಿಜಯಪುರ  : ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು : ಕಳೆದ ಒಂದು ವರ್ಷದಿಂದ ಶಾಂತವಾಗಿದ್ದ ಭೀಮಾ ತೀರದಲ್ಲಿ ಇದೀಗ ಮತ್ತೆ ಗುಂಡಿನ ಮೊರೆತವಾಗಿದೆ.

ಶ್ರೀ ಸಿದ್ಧೇಶ್ವರ ಬ್ಯಾಂಕ್ ಎಲೆಕ್ಷನ್ ಸಂಬಂಧ ಅಭ್ಯರ್ಥಿಗಳ ಪರ ಬೆಂಬಲ ಚರ್ಚಿಸಲು ಬೆಂಬಲಿಗರೊಂದಿಗೆ ವಿಜಯಪುರಕ್ಕೆ ಆಗಮಿಸಿದ್ದ ಮಹಾದೇವ ಸಾಹುಕಾರ ಭೈರಗೊಂಡ ಅವರ ಮೇಲೆ ಗುಂಡಿನ ದಾಳಿ ನಡೆದಿದೆ.

ಶ್ರೀ ಸಿದ್ಧೇಶ್ವರ ಬ್ಯಾಂಕ್ ಎಲೆಕ್ಷನ್?ನಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರು ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ಅವರ ಮನವೋಲಿಸುವ ಸಲುವಾಗಿ ಮಹಾದೇವ ಸಾಹುಕಾರ ಭೈರಗೊಂಡ ವಿಜಯಪುರಕ್ಕೆ ಆಗಮಿಸಿದ್ದರು.

ಆದರೆ, ಈ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಧಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

ವಿಜಯಪುರಕ್ಕೆ ಆಗಮಿಸಿದ್ದ ಮಹಾದೇವ ಸಾಹುಕಾರ ಭೈರಗೊಂಡ ಚಿಂಚಲಿ ಎಂಬುವರ ಪೈಪ್ ಪ್ಯಾಕ್ಟರಿಯಲ್ಲಿ ಊಟ ಮುಗಿಸಿದ್ದರು. ಮಧ್ಯಾಹ್ನ 03ಕ್ಕೆ ಸರಿಯಾಗಿ ತಮ್ಮೂರಾದ ಕೆರೂರಿಗೆ ಹೊರಟಿದ್ದರು. ಆದರೆ, ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದಾಗ ಅರಕೇರಿ ತಾಂಡಾ ಬಳಿ ಸಾಹುಕಾರರ ಟಿಪ್ಪರ್? ಢಿಕ್ಕಿ ಹೊಡೆದಿದೆ.

ಈ ವೇಳೆ ರಕ್ಷಣೆಗೆ ಬಂದ ನೆಪದಲ್ಲಿ ಹಲವರು ಕಲ್ಲು ತೂರಾಟ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಬಲಭುಜದ ಹಿಂಬದಿಗೆ ಒಂದು ಗುಂಡು ಹೊಕ್ಕಿದ್ದರೆ, ಮತ್ತೋಂದು ಗುಂಡು ಹೊಟ್ಟೆಗೆ ತಾಗಿ ಹೊರ ಹೋಗಿದೆ ಎನ್ನಲಾಗಿದೆ. ಹೀಗಾಗಿ ಕೂಡಲೇ ಗಾಯಾಳುಗಳನ್ನು ವಿಜಯಪುರ ಬಿಎಲ್?ಡಿಇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಗುಂಡಿನ ದಾಳಿಯ ವೇಳೆ ಕಾರಿನಲ್ಲಿದ್ದ ಗ್ರಾಮ ಪಂಚಾಯಿತಿ ಸದಸ್ಯ ಬಾಬುರಾಯ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಮಹಾದೇವ ಸಾಹುಕಾರ ಭೈರಗೊಂಡ ಜೀವಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಜೊತೆಗೆ ಕಾರಿನಲ್ಲಿದ್ದ ಎಲ್ಲರಿಗೂ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಈ ದಾಳಿಯ ಹಿಂದೆ ಚಡಚಣ ಕುಟುಂಬದ ಕೈವಾಡ ಇದೆ ಎಂದೂ ಹೇಳಲಾಗುತ್ತಿದೆ. ಈ ಘಟನೆಯ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮತ್ತು ಎಎಸ್ಪಿ ಡಾ. ರಾಮ ಲಕ್ಷ÷್ನಣ ಅರಸಿದ್ಧಿ ಘಟಬಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll Down To More News Today