ಮೋದಿ ಕಾರ್ಯಕರ್ತರಿದ್ದ ಬಸ್ ಗೆ ಕಲ್ಲು, ಅಷ್ಟಕ್ಕೂ ಆಗಿದ್ದೇನು ?

ಮೋದಿ ಕಾರ್ಯಕರ್ತರಿದ್ದ ಬಸ್ ಗೆ ಕಲ್ಲು, ಅಷ್ಟಕ್ಕೂ ಆಗಿದ್ದೇನು ? – BJP activist protested front of the police station – Kannada News Today

ಮೋದಿ ಕಾರ್ಯಕರ್ತರಿದ್ದ ಬಸ್ ಗೆ ಕಲ್ಲು, ಅಷ್ಟಕ್ಕೂ ಆಗಿದ್ದೇನು ?

ನೆನ್ನೆ ಮಂಗಳೂರಿಗೆ ಬಂದಿದ್ದ ಪ್ರಧಾನಿ ಮೋದಿರವರು ಭರ್ಜರಿ ಭಾಷಣ ಮಾಡಿ ಆರ್ಭಟಿಸಿ ಹೋಗಿದ್ದರು, ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ನೆರೆದಿದ್ರು, ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಗ್ರಾಮಗಳಿಗೆ ಹಿಂದಿರುಗುವ ವೇಳೆ ಕಾರ್ಯಕರ್ತರಿದ್ದ ಬಸ್ ಗೆ ಕಲ್ಲು ತೂರಾಟ ಮಾಡಿದ್ದಾರೆ.

ಕೇರಳದಿಂದ ಬಂದಿದ್ದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಮಂಗಳೂರಿನ ಕುತ್ತಾರು ಎಂಬಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯಿಂದ ಕೆರಳಿದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಆಕಿ, ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಅಷ್ಟಕ್ಕೂ ಆಗಿದ್ದೇನು ಅಂತೀರಾ, ಪ್ರಧಾನಿ ಮೋದಿರವರ ಭಾಷಣ ಕೇಳಿ ವಾಪಾಸ್ಸಾಗುತ್ತಿದೆ ದಾರಿ ಮದ್ಯೆ ಕಾರು ಮತ್ತು ಬೈಕ್ ನಡುವೆ ಸಣ್ಣ ಅಪಘಾತವಾಗಿದೆ, ಇದೆ ವೇಳೆ ಅಲ್ಲಿಗೆ ಬಂದ ಕೇರಳ ನೊಂದಾಯಿತ ಕಾರಿನಲ್ಲಿದ್ದ ನಾಲ್ವರು, ಅಪಘಾತ ಮಾಡಿದ ಕಾರು ಚಾಲಕನ ಮೇಲೆ ಹಲ್ಲೆ ಮಾಡಿದೆ, ಇದನ್ನು ಪ್ರಶ್ನಿಸಿದ ಬಸ್ ನಲ್ಲಿದ್ದ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು, ಅದಾಗಲೇ ಪೊಲೀಸರು ಹಲ್ಲೆಯ ಪೂರ್ಣ ಮಾಹಿತಿ ಪಡೆದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಇನ್ನಿಬ್ಬರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.