ಅಶ್ಲೀಲ ಫೋಟೋ ತೋರಿಸಿ ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್, 1.8 ಕೋಟಿ ಡಿಮ್ಯಾಂಡ್

ಅಮೆರಿಕದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಫೋಟೋ ಕಳುಹಿಸಿ 1.8 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಚೆನ್ನೈ ಪೋರೂರ್ ನಿವಾಸಿಯನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ: ಅಮೆರಿಕದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಫೋಟೋ ಕಳುಹಿಸಿ 1.8 ಕೋಟಿ ರೂಪಾಯಿ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಚೆನ್ನೈ ಪೋರೂರ್ ನಿವಾಸಿಯನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಪ್ರದೇಶದ ಸರ್ಕಾರಿ ನೌಕರನ ಮಗಳು ಅಮೆರಿಕದಲ್ಲಿ ಓದುತ್ತಿದ್ದಾಳೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಆಕೆಯ ಮೊಬೈಲ್‌ಗೆ ನಗ್ನ ಫೋಟೋ ಹಾಗೂ ಕಿರು ಸಂದೇಶ ರವಾನಿಸಿ, 2.50 ಡಾಲರ್ (ಭಾರತೀಯ ಕರೆನ್ಸಿಯಲ್ಲಿ 1.8 ಕೋಟಿ ರೂ.) ನೀಡದಿದ್ದರೆ ಆ ಫೋಟೋವನ್ನು ಇಂಟರ್‌ನೆಟ್‌ನಲ್ಲಿ ಹಾಕಿ ಹೆಚ್ಚು ಹಣ ಗಳಿಸುವುದಾಗಿ ಬೆದರಿಕೆ ಹಾಕಿದ್ದ.

ಈ ವಿಚಾರವನ್ನು ಆಕೆಯ ತಾಯಿ ಗಮನಕ್ಕೆ ತಂದಾಗ ಪೊಲೀಸರಿಗೆ ದೂರು ನೀಡಿದ್ದಾಳೆ. ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಚೆನ್ನೈನ ಪೋರೂರಿನ ರಮೇಶ್ (51) ಎಂದು ಗುರುತಿಸಿದ್ದಾರೆ. ಆತನನ್ನು ಬಂಧಿಸಿ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

Stay updated with us for all News in Kannada at Facebook | Twitter
Scroll Down To More News Today