Welcome To Kannada News Today

Boat Accident: ದೋಣಿ ಮಗುಚಿ, ಒಂದೇ ಕುಟುಂಬದ 11 ಸಾವು

Boat Accident: ಮಹಾರಾಷ್ಟ್ರದ ಅಮರಾವತಿಯಲ್ಲಿ ಭಾರೀ ದುರಂತ ಸಂಭವಿಸಿದೆ, ವರದಾ ನದಿಯಲ್ಲಿ ದೋಣಿ ಮಗುಚಿ 11 ಜನರು ಸಾವನ್ನಪ್ಪಿದ್ದಾರೆ

🌐 Kannada News :

Boat accident in Amravati : ಮಹಾರಾಷ್ಟ್ರದ ಅಮರಾವತಿಯಲ್ಲಿ (Amarawati) ಭಾರೀ ದುರಂತ ಸಂಭವಿಸಿದೆ, ವರದಾ ನದಿಯಲ್ಲಿ ದೋಣಿ ಮಗುಚಿ 11 ಜನರು ಸಾವನ್ನಪ್ಪಿದ್ದಾರೆ, ಅವರೆಲ್ಲರೂ ಬಹಳ ಸಂತೋಷದಿಂದ ದೈವ ದರ್ಶನಕ್ಕೆ ಬಂದಿದ್ದರು. ಅಲ್ಲಿಯ ತನಕ ಎಲ್ಲವೂ ಸರಿಯಾಗೇ ಇತ್ತು, ಆದರೆ ಅವರ ಬಲಿಗಾಗಿ ಜವರಾಯ ಕಾಡು ಕುಳಿತಿದ್ದ ವಿಷಯ ಅವರಿಗೆ ಹೇಗೆ ತಾನೇ ತಿಳಿಯಲು ಸಾಧ್ಯ.

ದುರಂತ ಘಟನೆ ನಡೆದೇ ಹೋಗಿತ್ತು, ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರದಾ ನದಿಯಲ್ಲಿ ಮಂಗಳವಾರ ಭಾರೀ ದುರಂತ ಸಂಭವಿಸಿದೆ. ದೋಣಿ ಮಗುಚಿ ಒಂದೇ ಕುಟುಂಬದ 11 ಮಂದಿ ನೀರು ಪಾಲಾಗಿದ್ದಾರೆ.

ವರದಾ ನದಿಯಲ್ಲಿ ದೋಣಿ ಮಗುಚಿ ನಾಲ್ವರು ಸಾವನ್ನಪ್ಪಿದ್ದರೆ, ಏಳು ಮಂದಿ ನಾಪತ್ತೆಯಾಗಿದ್ದಾರೆ. ಉಳಿದ ಇತರ ಇಬ್ಬರು ಈಜು ಬಲ್ಲವರಾಗಿದ್ದು ದಡಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆನೊಡಾ ಪೊಲೀಸ್ ಠಾಣಾ ವ್ಯಾಪ್ತಿಯ ವರೂಡ್ ತಹಸೀಲ್ ನಲ್ಲಿ ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಗದೆಗಾಂವ್ ಗ್ರಾಮದ 12 ಕುಟುಂಬ ಸದಸ್ಯರು ದೋಣಿ ಮೂಲಕ ದೇವಸ್ಥಾನಕ್ಕೆ ಸಮೀಪದ ಜಲಪಾತಕ್ಕೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ, ಅವರೆಲ್ಲರೂ ದೇವಸ್ಥಾನಕ್ಕೆ ಭೇಟಿ ನೀಡಲು ದೋಣಿ ಹತ್ತಿದರು. ಆದರೆ, ಹಡಗು ನದಿಯ ಮಧ್ಯದಲ್ಲಿ ಮಗುಚಿ ಬಿದ್ದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 27 ಮತ್ತು 35 ವಯಸ್ಸಿನ ಇಬ್ಬರು ಪುರುಷರು ಸುರಕ್ಷಿತವಾಗಿ ದಡಸೇರಿದ್ದಾರೆ ಎಂದು ಅವರು ಹೇಳಿದರು.

ನಾಲ್ಕು ಜನರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಎಂಟು ಜನರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆದೆ. ಅಮರಾವತಿಯ ಗಲ್ಲೇಗಾಂವ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.

ಪೊಲೀಸ್ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡಗಳು ಇದುವರೆಗೆ ನಾಲ್ಕು ಶವಗಳನ್ನು ಪತ್ತೆ ಹಚ್ಚಿದ್ದು, ಅವುಗಳಲ್ಲಿ ಮೂವರನ್ನು ದೋಣಿಗಾರ ನಾರಾಯಣ್ ಮಾತಾರೆ (45), ವಂಶಿಕಾ ಶಿವಾಂಕರ್ (2) ಮತ್ತು ಕಿರಣ್ ಖಂಡಾಲೆ (25) ಎಂದು ಗುರುತಿಸಲಾಗಿದೆ. ಕಾಣೆಯಾದ ಇತರರನ್ನು ಪತ್ತೆ ಮಾಡಲು ಪ್ರಯತ್ನ ನಡೆಯುತ್ತಿದೆ

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile