ಕೋಲಾರದಲ್ಲಿ ಗೋಡೆ ಕುಸಿದು ಬಾಲಕ ಸಾವು

ನಿರಂತರ ಸುರಿದ ಮಳೆಯ ಪರಿಣಾಮ ಮನೆಯ ಗೋಡೆ ಕುಸಿದು ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ

( Kannada News Today ) : ಕೋಲಾರ : ಕೋಲಾರದಲ್ಲಿ ಗೋಡೆ ಕುಸಿದು ಬಾಲಕ ಸಾವು : ಮಳೆರಾಯ ತಂದಿಡುತ್ತಿರುವ ಅವಾಂತರ ಅಷ್ಟಿಷ್ಟಲ್ಲ, ಮಳೆ ಬರದೇ ಹೋದರೆ ಒಂದು ರೀತಿಯ ಸಮಸ್ಯೆ, ಮಳೆ ಯಥೇಚ್ಛ ಬಂದಾಗ ಇನ್ನೊಂದು ರೀತಿಯ ಸಮಸ್ಯೆ, ನಿರಂತರ ಮಳೆಯಿಂದಾಗಿ ರಾಜ್ಯದ ನಾನಾ ಭಾಗದ ಜನರ ಜೀವನ ಅಸ್ತವ್ಯಸ್ತಗೊಂಡಿದೆ.

ನಿರಂತರ ಸುರಿದ ಭಾರಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾತಮುತ್ತಕಪಲ್ಲಿ ಗ್ರಾಮದಲ್ಲಿ ನಡೆದಿದೆ. ಗೋಡೆ ಕುಸಿದು 13 ವರ್ಷದ ಬಾಲಕ ಹರೀಶ್ ಮೃತಪಟ್ಟಿದ್ದಾನೆ.

ಇನ್ನಷ್ಟು ಕೋಲಾರ ಸುದ್ದಿಗಳಿಗಾಗಿ Kolar News in Kannada | Crime News in Kannada ಕ್ಲಿಕ್ಕಿಸಿ.

ಕೋಲಾರದಲ್ಲಿ ಗೋಡೆ ಕುಸಿದು ಬಾಲಕ ಸಾವು - Kannada News

ಅಷ್ಟೇ ಅಲ್ಲದೆ ಈ ಅವಘಡದಲ್ಲಿ ಬಾಲಕ ಹರೀಶ್ ನ ತಾಯಿ ಆನಂದಮ್ಮ ಸಹ ಗಾಯಗೊಂಡಿದ್ದಾರೆ, ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗೋಡೆ ಕುಸಿದ ದುರ್ಘಟನೆ ಸಂಭವಿಸಿದೆ.

Follow us On

FaceBook Google News

Read More News Today