Welcome To Kannada News Today

Rat Poison: ಟೂತ್ ಪೇಸ್ಟ್ ಬದಲಿಗೆ ಇಲಿ ವಿಷದಿಂದ ಬ್ರಷ್ ಮಾಡಿದ ಯುವತಿ ಸಾವು

Brushing Teeth With Rat Poison: ನಿದ್ರೆಯ ಅಮಲಿನಲ್ಲಿ ಟೂತ್ ಪೇಸ್ಟ್ ಬದಲಿಗೆ ಇಲಿ ವಿಷದಿಂದ ಬ್ರಷ್ ಮಾಡಿದ ಯುವತಿ ಸಾವನ್ನಪ್ಪಿದ ಧಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

🌐 Kannada News :

Brushing Teeth With Rat Poison: ಮುಂಬೈ: ಇದು ನೀವು ನಂಬದೇ ಹೋದರೂ ಸತ್ಯ, ಎಂದಿನಂತೆ ಆ ಯುವತಿ ಬ್ರಷ್ ಮಾಡಲು ಮುಂದಾಗಿದ್ದಾಳೆ, ಆದರೆ ಆಕೆಗೆ ಇನ್ನೂ ನಿದ್ದೆ ತೇರ್ಗಡೆ ಆಗಿರಲಿಲ್ಲ, ಟೂತ್ ಪೇಸ್ಟ್ ಬದಲಿಗೆ ಇಲಿ ವಿಷದಿಂದ ಬ್ರಷ್ ಮಾಡಿದ್ದಾಳೆ. ಆ ಮೂಲಕ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.

ಮಹಾರಾಷ್ಟ್ರದಲ್ಲಿ ಈ ದುರಂತ ಘಟನೆ ನಡೆದಿದೆ. ಮುಂಬೈನ ಧಾರಾವಿಯ 18 ​​ವರ್ಷದ ಯುವತಿ ಟೂತ್ ಪೇಸ್ಟ್ ಎಂದು ಕೊಂಡು ಇಲಿ ವಿಷದಿಂದ ಹಲ್ಲುಜ್ಜಿದ ನಂತರ ಭಾನುವಾರ ಮೃತಪಟ್ಟಿದ್ದಾಳೆ.

ಇದನ್ನೂ ಓದಿ : Crime News: 15 ವರ್ಷದ ಬಾಲಕಿಯ ಮೇಲೆ ಸುತ್ತಿಗೆಯಿಂದ ದಾಳಿ ಮಾಡಿ ಅತ್ಯಾಚಾರ

ಸೆಪ್ಟೆಂಬರ್ 3 ರಂದು ಬೆಳಿಗ್ಗೆ 10 ಗಂಟೆಗೆ ಅಫ್ಸಾನಾ ಖಾನ್ ಎಂದಿನಂತೆ ಎಎದ್ದು ಅರೆನಿದ್ರೆಯಲ್ಲಿ ಹಲ್ಲುಜ್ಜಲು ಹೋಗಿದ್ದಾಳೆ. ನಿದ್ದೆಯ ಗುಂಗಿನಲ್ಲಿ ಅವಳು ಆಕಸ್ಮಿಕವಾಗಿ ಟೂತ್ ಪೇಸ್ಟ್ ಟ್ಯೂಬ್ ಪಕ್ಕದಲ್ಲಿ ಇಟ್ಟಿದ್ದ ಇಲಿ ವಿಷದ ಟ್ಯೂಬ್ ತೆಗೆದುಕೊಂಡು ಅದನ್ನು ಬ್ರಷ್ನಂ ಗೆ ಹಾಕಿಕೊಂಡು ಹಲ್ಲುಜ್ಜಿದ್ದಾಳೆ.

ಅಫ್ಸಾನಾ ಖಾನ್ ಗೆ ಸ್ವಲ್ಪ ಹೊತ್ತಿನ ರುಚಿ ಮತ್ತು ವಾಸನೆಯಲ್ಲಿ ವ್ಯತ್ಯಾಸ ತಿಳಿದು ಬಂದಿದೆ. ತಕ್ಷಣ ಪೇಸ್ಟ್ ಅನ್ನು ಉಗುಳಿ ಮತ್ತು ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಂಡು ತನ್ನ ಸಾಮಾನ್ಯ ದಿನಚರಿಯನ್ನು ಮುಂದುವರಿಸಿದ್ದಾಳೆ.

ಇದನ್ನೂ ಓದಿ: Crime News: ಗರ್ಭಿಣಿ ಪತ್ನಿಗೆ ಎಚ್‌ಐವಿ ಚುಚ್ಚುಮದ್ದು ನೀಡಿದ ಪತಿ

ಸ್ವಲ್ಪ ಸಮಯದ ನಂತರ ಆಕೆಗೆ ತಲೆತಿರುಗುವಿಕೆ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಕಾಣಿಸಿಕೊಂಡಿದೆ. ತನ್ನ ಕುಟುಂಬ ಸದಸ್ಯರಿಗೆ ಇದನ್ನು ಹೇಳಿದರೆ ಎಲ್ಲಿ ಭಯಪಡುತ್ತಾರೋ ಎಂಬ ಭಯದಿಂದ ಹೇಳಲೇ ಇಲ್ಲ.

ಆಕೆಯ ಆರೋಗ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಿದ್ದ ಹಾಗೆ ಕುಟುಂಬ ಸದಸ್ಯರು ಮೂರು ಖಾಸಗಿ ಆಸ್ಪತ್ರೆಗಳಿಗೆ ಮತ್ತು ನಂತರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದಾರೆ.

ಆಕೆಯ ಆರೋಗ್ಯ ದಿನೇ ದಿನೇ ಹದಗೆಟ್ಟು, ಕೊನೆಗೆ ಆಕೆ ತನ್ನ ಕುಟುಂಬದ ಸದಸ್ಯರಿಗೆ ಸೆಪ್ಟೆಂಬರ್ 12 ರಂದು ಆಕಸ್ಮಿಕವಾಗಿ ಇಲಿ ವಿಷದಿಂದ ಹಲ್ಲುಜ್ಜಿಕೊಂಡ ವಿಷಯನ್ನು ಹೇಳಿದಳು.

ಇದನ್ನೂ ಓದಿ : Boat Accident: ದೋಣಿ ಮಗುಚಿ, ಒಂದೇ ಕುಟುಂಬದ 11 ಸಾವು

ಅಫ್ಸಾನಾ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಸರ್ ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಗಲೇ ತುಂಬಾ ತಡವಾಗಿತ್ತು. ಅಫ್ಸಾನಾಳನ್ನು ರಕ್ಷಿಸಲು ವೈದ್ಯರು ಹಲವಾರು ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆ ಪಡೆಯುತ್ತಿರುವಾಗಲೇ ಆಕೆ ಕೊನೆಯುಸಿರೆಳೆದಳು.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile